ಬೆಂಗಳೂರು: ಕಲ್ಪತರು ನಾಡು, ತುಮಕೂರಿನ ದೊಡ್ಡ ಕನಸೊಂದು ನನಸಾಗುವ ಕಾಲ ಸನಿಹಕ್ಕೆ ಬಂದಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಗಳೂರು, ತುಮಕೂರು ಮೆಟ್ರೋ ಯೋಜನೆ, ಕುರಿತು ಕಾರ್ಯ ಸಾಧ್ಯತೆ ವರದಿ ಸಿದ್ಧಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಯೋಜನೆ ಬಗ್ಗೆ ವಿಸ್ತೃತ ವರದಿ ತಯಾರಿಸಲು ಸಂಸ್ಥೆಯೊಂದನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿರುವ ನಮ್ಮ ಮೆಟ್ರೋ ಅದಕ್ಕಾಗಿ ಟೆಂಡರ್ ಆಹ್ವಾನಿಸಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಬೆಂಗಳೂರಿನ ಮಾದವಾರದಿಂದ ತುಮಕೂರಿನ ಶಿರಾಗೇಟ್ ನಡುವಿನ 59.6 ಕಿಲೋ ಮೀಟರ್ ಉದ್ದದ ಮೆಟ್ರೋ ಯೋಜನೆಗಾಗಿ ರಾಜ್ಯ ಸರ್ಕಾರ 20,649 ಕೋಟಿ ರೂಪಾಯಿ ವೆಚ್ಚ ಮಾಡಲು ತೀರ್ಮಾನಿಸಿದೆ.
ಇಷ್ಟು ಹಣದಲ್ಲಿ ಯಾವ ರೀತಿಯಾಗಿ ಮೆಟ್ರೋ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂಬ ಕುರಿತಂತೆ ಅಧ್ಯಯನ ನಡೆಸಿ ವಿಸ್ತೃತವಾದ ಯೋಜನಾ ವರದಿ ತಯಾರಿಸಲು ಅರ್ಹ ಸಂಸ್ಥೆಗಳಿಂದ ಬಿಡ್ ಆಹ್ವಾನಿಸಲಾಗಿದೆ.
ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಇದು ಅಸ್ತಿತ್ವಕ್ಕೆ ಬಂದರೆ ದೇಶದಲ್ಲೇ ಮೊದಲ ಅಂತ ರಾಜ್ಯ ಇಲ್ಲ ಮೆಟ್ರೋ ಯೋಜನೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.
ಈ ಯೋಜನೆಯ ಮೂಲಕ ಪ್ರತಿ ಗಂಟೆಗೆ ಸುಮಾರು 15,000 ಜನ ತುಮಕೂರು – ಬೆಂಗಳೂರು ನಡುವೆ ಮೆಟ್ರೋ ಮೂಲಕ ಸಂಚರಿಸುವ ಅವಕಾಶವಿದೆ ಎಂದು ಮೆಟ್ರೋ ತನ್ನ ಟೆಂಡರ್ ದಾಖಲೆಯಲ್ಲಿ ತಿಳಿಸಿದೆ.
ಒಟ್ಟಾರೆಯಾಗಿ ಈ ಯೋಜನೆಯಿಂದ ಬೆಂಗಳೂರು ಮತ್ತು ತುಮಕೂರಿನ ನಡುವೆ ಉಂಟಾಗಿರುವ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ. ಈ ಮಾರ್ಗದಲ್ಲಿ 26 ನಿಲ್ದಾಣಗಳು ಬರಲಿವೆ ಎಂದು ತಿಳಿಸಿದೆ.
ನಿಲ್ದಾಣಗಳು:
ಮಾಕಳಿ
ದಾಸನಪುರ
ನೆಲಮಂಗಲ
ವೀವರ್ ಕಾಲೋನಿ
ನೆಲಮಂಗಲ ವಿಶ್ವೇಶ್ವರಪುರ
ನೆಲಮಂಗಲ ಟೋಲ್‌ಗೇಟ್
ಬೂದಿಹಾಳ್
ಟಿ. ಬೇಗೂರು
ತಿಪ್ಪಗೊಂಡನಹಳ್ಳಿ
ಕುಲವನಹಳ್ಳಿ
ಮಹಿಮಾಪುರ
ಬಿಲ್ಲನ್ ಕೋಟೆ
ಸೋಂಪುರ ಕೈಗಾರಿಕಾ ಪ್ರದೇಶ
ದಾಬಸ್‌ಪೇಟೆ
ನಲ್ಲಾಯನಪಾಳ್ಯ
ಚಿಕ್ಕಹಳ್ಳಿ
ಹಿರೇಹಳ್ಳಿ ಕೈಗಾರಿಕಾ ಪ್ರದೇಶ
ಪಂಡಿತನಹಳ್ಳಿ
ಕ್ಯಾತ್ಸಂದ್ರ ಬೈಪಾಸ್
ಕ್ಯಾತ್ಸಂದ್ರ
ಎಸ್‌ಐಟಿ (ಸಿದ್ಧಾರ್ಥ ಕಾಲೇಜು)
ತುಮಕೂರು ಬಸ್ ನಿಲ್ದಾಣ
ಟೂಡಾ ಲೇಔಟ್
ನಾಗಣ್ಣ ಪಾಳ್ಯ
ಶಿರಾ ಗೇಟ್




