ಇಂದು ಈ ಪುಸ್ತಕ ಓದಿ ಮುಗಿಸಿದೆ. ಪುಸ್ತಕದಲ್ಲಿರುವ ನೈಜ ಘಟನೆಗಳನ್ನು ಓದುತ್ತಾ ಹೋದಂತೆ ಮನಸ್ಸು ಬೇರೊಂದು ಕಡೆಗೆ ಚಲಿಸಲಿಲ್ಲ. ಒಂದೇ ವೇಗದಲ್ಲಿ ಓದಿಸಿಕೊಳ್ಳುತ್ತಾ ಹೋಯಿತು.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
ಕೋಮುವಾದಿ, ಸಂಘಪರಿವಾರದ ಸಂಘಟನೆಗಳಲ್ಲಿ ಹಿಂದುಳಿದ ಯುವಕರು ಬ್ರಾಹ್ಮಣ್ಯದ ವ್ಯವಸ್ಥೆಯಲ್ಲಿ ಸಿಲುಕಿ ಹೇಗೆಲ್ಲ ಬಲಿಯಾಗುತ್ತಾರೆ? ಕೋಮು ಪ್ರಚೋದನೆಯ ಘಟನೆಗಳು ನಡೆಯಲು ಸೂತ್ರಧಾರರು ಯಾರು? ಆರೋಪಿಗಳಾಗಿ ಜೈಲುವಾಸ ಅನುಭವಿಸುವವರು ಯಾರು? ಅದರ ಲಾಭ ಪಡೆದು ಅಧಿಕಾರ ಅನುಭವಿಸುವವರು ಯಾರು? ಈ ಸಂಘಪರಿವಾರಕ್ಕೆ ಸಿಕ್ಕು ಬದುಕು ಹಾಳು ಮಾಡಿಕೊಳ್ಳುತ್ತಿರುವ ಹಿಂದುಳಿದ ವರ್ಗದ ಯುವಕರ ಕಥೆಗಳು ಎಳೆಎಳೆಯಾಗಿ ಕಣ್ಣು ಮುಂದೆ ಹಾದು ಹೋದವು.
ಒಂದು ಕಾಲದಲ್ಲಿ ಕಟ್ಟರ್ ಹಿಂದುತ್ವವಾದಿಯಾಗಿದ್ದ ಮಹೇಂದ್ರ ಕುಮಾರ್ ಅವರ ಅನುಭವದ ಕಥನವೇ ಈ ನಡುಬಗ್ಗಿಸದ ಎದೆಯ ದನಿ ಪುಸ್ತಕ. ಈ ಪುಸ್ತಕದಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಿ ನಿರೂಪಿಸಿ ಕೊಟ್ಟಿರುವ ನವೀನ್ ಸೂರಿಂಜೆ ಅವರಿಗೆ ಧನ್ಯವಾದಗಳು ಈ ಸಮಯಕ್ಕೆ ಅಗತ್ಯವಾದ ಪುಸ್ತಕ ಇದು.
ಧರ್ಮದ ಅಮಲೇರಿಸಿಕೊಂಡು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಬ್ರಾಹ್ಮಣ್ಯ ಸಂಘಪರಿವಾರದ ಕೈಗೊಂಬೆಗಳಾಗಿ, ಕೋಮುವಾದಿ ಸಂಘಟನೆಯಲ್ಲಿ ದುಡಿಯುತ್ತಿರುವ ಹಿಂದುಳಿದ ವರ್ಗದ ಯುವಕರು ಮೊದಲು ಈ ಪುಸ್ತಕವನ್ನು ಓದಬೇಕಿದೆ.
ಇಲ್ಲಿರುವ ಎರಡು ಘಟನೆಗಳು ಕಣ್ಣುಗಳನ್ನು ಒದ್ದೆ ಮಾಡಿದವು. ಒಂದು ಲಾರಿ ಡ್ರೈವರ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಇದ್ದಾಗ ಜೀವ ಉಳಿಸಬೇಕಾದ ವೈದ್ಯರ ಮನಸ್ಥಿತಿ ನೋಡಿ, ( ಡ್ರೈವರ್ ಮುಸ್ಲಿಂ ವ್ಯಕ್ತಿಯಾಗಿದ್ದ) ಎರಡು ಭಜರಂಗದಳದ ರಾಜ್ಯ ಸಂಚಾಲಕರು ಕಾರು ಸಿಗಾಕೊಂಡು ಸಾವು ಬದುಕಿನಲ್ಲಿದ್ದಾಗ ರಕ್ಷಣೆ ಮಾಡಿದ್ದು ಒಂದು ಮುಸ್ಲಿಂ ವ್ಯಕ್ತಿ, ಇನ್ನೊಂದು ಬ್ರಾಹ್ಮಣ ಕುಟುಂಬಕ್ಕೆ ರಕ್ತ ಬೇಕಿದ್ದಾಗ ರಕ್ತ ಕೊಟ್ಟು ಜೀವ ಉಳಿಸಿದ್ದು ಇದೇ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವ್ಯಕ್ತಿ. ಇಷ್ಟೆಲ್ಲ ಸಂಘಪರಿವಾರದವರು ದ್ವೇಷ ಮಾಡುತ್ತಿದ್ದರೂ ಅದೇ ಸಂಘಪರಿವಾರದವರಿಗೆ ಅವರು ತೋರಿದ ಪ್ರೀತಿ ಕಂಡು ಮೂಕವಿಸ್ಮಿತನಾದೆ.
– ಲಕ್ಷ್ಮಣ ಮಂಡಲಗೇರಾ, ಸಾಮಾಜಿಕ ಹೋರಾಟಗಾರರು




