ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ದಿನ ನಡೆದ ಡಾ.ಹೆಚ್.ಆರ್.ಸ್ವಾಮಿ ಅವರು ರಚಿಸಿರುವ ಕೊರಚ ಮಾತುಕತೆ ‘ಕುಡ್ರು ವಾತಕತ’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ.
- ಕಾವೇರಿ ವಿಚಾರವಾಗಿ ವಿಪಕ್ಷಗಳ ನಾಯಕ ವಿಶ್ವಾಸದ ಬಳಿಕ ಮುಂದಿನ ತೀರ್ಮಾನ: ಡಿ.ಕೆ.ಶಿವಕುಮಾರ್
- ಸಂಸದೀಯ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಯ್ದೆ ಕಾನೂನುಗಳು ಚರ್ಚಿತವಾಗಬೇಕು: ಡಾ.ಎಚ್.ಸಿ.ಮಹದೇವಪ್ಪ
- ನೀಟ್ NEET ಹೋರಾಟದ ನಡುವೆ ವೈರಲ್ ಆದ ರಾಹುಲ್ ಗಾಂಧಿ, ದೀಪ್ಕೆ, ಗ್ರೆಟಾ, ಸೊರೊಸ್ ಫೋಟೋ!
- ಸಾವಯವ ರೈತರನ್ನು ಬೆಂಬಲಿಸಲು ಸಾವಯವ ಸಂತೆಯಲ್ಲಿ ಪಾಲ್ಗೊಳ್ಳಿ: ದರ್ಶನ್ ಪುಟ್ಟಣ್ಣಯ್ಯ
- ಕನಿಷ್ಠ ವೇತನ ಕೂಡಲೇ ಜಾರಿಗೊಳಿಸದಿದ್ದರೆ ತೀವ್ರ ಪ್ರತಿರೋಧ: ಜೆ ಬಾಲಕೃಷ್ಣ ಶೆಟ್ಟಿ
ಈ ಕಾರ್ಯಕ್ರಮವನ್ನು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಉದ್ಛಾಟಿಸಿದರು, ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ಹಿರಿಯರಾದ ಅಗ್ರಹಾರ ಕೃಷ್ಣಮೂರ್ತಿ ಅವರು ಮುಖ್ಯ ಅತಿಥಿಯಾಗಿ ಹಾಗೂ ಡಾ. ರಾಜಪ್ಪ ದಳವಾಯಿ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊರಚ ಸಮುದಾಯದ ಬದುಕು, ಜೀವನ, ಬವಣೆ, ಸಂಪ್ರದಾಯಿಕ ನೆಲೆಯ ಬದುಕು ಹಾಗೂ ಕೊರಚರು ಮಾತನಾಡುವ ಭಾಷೆಯ ಕುರಿತು ಮಾತನಾಡಿದರು.
ನನಗೆ ನೆನಪಾಗಿದ್ದು ನಮ್ಮೂರು ಪಕ್ಕದ ಶಿವನಿಯಲ್ಲಿ ನೆಲೆಸಿರುವ ಕೊರಚರ ಹಟ್ಟಿಯ ಜನರ ಬದುಕಿನ ಬವಣೆ ಸೂಕ್ಷ್ಮವಾಗಿ ಗಮನಿಸಿದವನು. ನಾನು ಚಿಕ್ಕವನಾಗಿದ್ದಾಗಿಂದಲೂ ಇವರ ಜೀವನ ಕ್ರಮವನ್ನು ನೋಡಿಕೊಂಡು ಬಂದವನು. ಶಿವನಿಯಿಂದ ಅನುವನಹಳ್ಳಿಗೆ ಇವರ ಜೀವನಕ್ಕಾಗಿ ಸಾಕಿರುವ ಹಂದಿಗಳನ್ನು ಹೊಡೆದುಕೊಂಡು ಪ್ರತಿ ದಿನ ಬೆಳಿಗ್ಗೆನೆ ನಮ್ಮೂರು ಚನ್ನಕ್ಕನಗುಂಡಿ ಸುತ್ತ, ಊರಿನ ಜನರೆಲ್ಲಾ ಸೇರಿ ಗಲೀಜು ಮಾಡುತ್ತಿದ್ದ ಜಾಗವನ್ನು ಹಾಗೂ ನಮ್ಮೂರಿನ ಹಾದಿಬೀದಿಯನ್ನು ಇವರ ಹಂದಿಗಳು ಸ್ವಚ್ಛಗೊಳಿಸುತ್ತಿದ್ದವು. ಇದು ಆ ದಿನಗಳಲ್ಲಿ ಸ್ವಚ್ಛ ಭಾರತ ಕಲ್ಪನೆ ಅನಿಸಿತು. ಆ ದಿನಗಳಲ್ಲೆ ಇವರ ಸಾಂಪ್ರದಾಯಿಕ ಹಂದಿ ಸಾಕಾಣಿಕೆಯಿಂದ ಸಾಮಾಜಿಕ ಕಾರ್ಯದಲ್ಲಿ ಇವರು ತೊಡಗಿದ್ದರು. ಇಂತಹ ಇವರ ಜೀವನ ಸಂಸ್ಕೃತಿ ಬಗ್ಗೆ ಹಲವಾರು ವಿಚಾರಗಳನ್ನು ತಿಳಿದುಕೊಂಡಂತಾಯಿತು.
ಈ ಸಂದರ್ಭದಲ್ಲಿ ನನ್ನೊಂದಿಗೆ ಸೋಲ್ಲಾಪುರ ಸತ್ಯನಾರಾಯಣ ದಾಸ್ ಹಾಗೂ ಚಿಂತಕರಾದ ಡಾ.ಪ್ರದೀಪ್ ಮಾಲ್ಗುಡಿ, ಸಂಘಟಕರಾದ ಸಂಸ ಸುರೇಶ್ ಅವರೊಂದಿಗೆ ಭಾಗವಹಿಸಿದ್ದು ಮರೆಯಲಾರದ ಇದೊಂದು ವಿಶೇಷ ಕಾರ್ಯಕ್ರಮವಾಗಿತ್ತು. ಡಾ. ಹೆಚ್. ಆರ್. ಸ್ವಾಮಿ ಹಾಗೂ ಇಂಗ್ಲಿಷ್ ಗೆ ಅನುವಾದಿಸಿದ ಹರ್ಷ ಸಾಲಿಮಠ್ ಅವರಿಗೆ ಅಭಿನಂದನೆಗಳು.
– ರವಿ ದಳವಾಯಿ, ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತರೀಕೆರೆ









