ದೀಪ ಬೆಳಗಿದಂತೆ, ರೋಗಿಗಳ ಪಾಲಿಗೆ ನರ್ಸ್, ದಾದಿಯರು ಬೆಳಕಾಗಿ ನಿಲ್ಲುತ್ತಾರೆ: ಎಂ.ಕೃಷ್ಣಪ್ಪ
ಬೆಂಗಳೂರು: ಬಂಟರ ಸಂಘದಲ್ಲಿ ವಿಜಯನಗರ ನರ್ಸಿಂಗ್ ಕಾಲೇಜ್ ಗೆ ನೂತನವಾಗಿ ಪ್ರವೇಶ ಪಡೆದ ನರ್ಸಿಂಗ್ ಶಿಕ್ಷಣಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ನಡೆಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ವಿಜಯನಗರ ವಿಧಾನಸಭಾ ಶಾಸಕ ಎಂ.ಕೃಷ್ಣಪ್ಪ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾ ಕೃಷ್ಣ, ವಿಜಯನಗರ ನರ್ಸಿಂಗ್ ಕಾಲೇಜ್ ಸಂಸ್ಥಾಪಕ, ಬಿಬಿಎಂಪಿ ಮಾಜಿ ಸದಸ್ಯ ಡಾ.ಎಸ್.ರಾಜು, ಚರ್ಮರೋಗ ತಜ್ಞ ವೈದ್ಯ ಡಾ.ವೆಂಕಟ್ ರಾಮ್, ಲಯನ್ ಎಂ.ಸಿ.ನಂದಕುಮಾರ್, ಡಾ.ಐ.ಕ್ಲೆಮೆಂಟ್, ವೈದ್ಯರಾದ ಡಾ. ಸಿರಿ ಎಸ್.ರಾಜು ಡಾ.ಲತಾ, ಡಾ.ಮಹಾಲಕ್ಷ್ಮಿ, ಡಾ.ಶ್ರೇಯಸ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕ ಎಂ.ಕೃಷ್ಣಪ್ಪ ಮಾತನಾಡಿ ಫ್ಲಾರೆನ್ಸ್ ನೈಟಿಂಗೇಲ್ ರವರು ಸಲ್ಲಿಸಿದ ಸೇವೆಯನ್ನು ನರ್ಸಿಂಗ್ ವಿದ್ಯಾರ್ಥಿಗಳು ಪಾಲಿಸಿದರೆ ಜೀವನದಲ್ಲಿ ಸಾಧನೆ ಮತ್ತು ರೋಗಿಗಳಿಗೆ ಸೇವೆ ಮಾಡಲು ಸಾಧ್ಯ. ದೀಪ ಜೀವನದಲ್ಲಿ ಬೆಳಕು ನೀಡುವಂತೆ, ರೋಗಿಗಳಿಗೆ ಬೆಳಕಾಗಿ ನರ್ಸ್ ಗಳು ನಿಲ್ಲುತ್ತಾರೆ. ಕೊರೋನ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ನರ್ಸ್ ಗಳು ಸೇವೆ ಸಲ್ಲಿಸಿದರು ಎಂದರು.
ಪ್ರಿಯಕೃಷ್ಣ ಮಾತನಾಡಿ, ಸೈನಿಕರಂತೆ ನರ್ಸ್ ಗಳು ಕೆಲಸ ಮಾಡುತ್ತಾರೆ. ದೇಶ ಕಟ್ಟುವಲ್ಲಿ, ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ನರ್ಸ್ ಗಳ ಪಾತ್ರ ಪ್ರಮುಖ. ಕೊರೊನ ಲಾಕ್ ಡೌನ್ ಸಂದರ್ಭದಲ್ಲಿ ಜನರ ಜೀವ ರಕ್ಷಣೆ ಮಾಡಿದರು ಎಂದರು.
ಡಾ.ಎಸ್.ರಾಜು ಮಾತನಾಡಿ, ನಮ್ಮ ನರ್ಸಿಂಗ್ ಕಾಲೇಜಿಗೆ ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಂದ ನರ್ಸಿಂಗ್ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬರುತ್ತಿದ್ದಾರೆ. ನರ್ಸಿಂಗ್ ಕೆಲಸ ದೇವರ ಸೇವೆ ಮಾಡುವ ಕೆಲಸ, ದೀಪ ಬೆಳಗಿಸುವ ಮೂಲಕ ಎಲ್ಲರ ಜೀವನದಲ್ಲಿ ಬೆಳಕು ಮೂಡಲಿ. ಮಕ್ಕಳನ್ನು ವಿದ್ಯಾವಂತರಾಗಿ ಮಾಡಲು ತಂದೆ, ತಾಯಿ ತುಂಬ ಕಷ್ಟಪಡುತ್ತಾರೆ. ನಮ್ಮ ದೇಶದಲ್ಲಿ ಖ್ಯಾತ ವೈದ್ಯರು, ಉತ್ತಮ ನರ್ಸ್ ಗಳು ಇದ್ದಾರೆ. ದೇವರು ಮತ್ತು ರೋಗಿ ನಡುವೆ ನರ್ಸ್ಎಂಬ ಮಹಾತಾಯಿ ಸೇವೆ ಮಾಡಲು ನಿಂತಿರುತ್ತಾರೆ. ರೋಗಿಗಳನ್ನು ಅತ್ಯಂತ ಜಾಗೂರಕತೆಯಿಂದ ನರ್ಸ್ ಗಳು ನೋಡಿಕೊಳ್ಳುತ್ತಾರೆ. ನರ್ಸ್ ಹುದ್ದೆ ಬಹಳ ಜವಾಬ್ದಾರಿಯುತ ಸ್ಥಾನವಾಗಿದೆ ಎಂದರು.
ವಿಜಯನಗರ ಕಾಲೇಜ್ ಆಫ್ ನರ್ಸಿಂಗ್ ನಿರ್ದೇಶಕ ಡೆನ್ನಿಸ್ ಟಿ.ವರ್ಗೀಸ್, ವಿಜಯನಗರ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲ ಕ್ರಿಸ್ಟಿನಾ ಆರ್., ವಿಜಯನಗರ ಕಾಲೇಜ್ ಆಫ್ ನರ್ಸಿಂಗ್ ನಿರ್ದೇಶಕರಾದ ರೋಜಿ ಮ್ಯಾಥ್ಯೂ, ಸ್ನೇಹಾ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲ ಪ್ರಶಾಂತ್ ಎಸ್. ಸೇರಿದಂತೆ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.







