ವಿಮೆದಾರರಿಗೆ ರೋಗಗಳ ನಿರ್ಧರಿಸುವ ವೈದ್ಯಕೀಯ ಪ್ರಯೋಗಾಲಯಗಳ ಚಿಕಿತ್ಸಾ ವೆಚ್ಚವನ್ನು ವಿಮಾ ಕಂಪನಿಗಳು ನೀಡಬೇಕು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ದೇಶದ ವಿವಿಧ ವಿಮೆ ಕಂಪನಿಗಳು ಕೋಟ್ಯಾಂತರ ಜನರಿಂದ ಆರೋಗ್ಯದ ರಕ್ಷಣೆಗಾಗಿ ವಿಮೆ ಮಾಡಿಸಿಕೊಳ್ಳುತ್ತಾರೆ. ವಿಮೆದಾರರು ಪ್ರತಿ ವರ್ಷವೂ ತಪ್ಪದೇ ಹಣವನ್ನು ಪಾವತಿಸುತ್ತಾರೆ. ಸಂಸ್ಥೆಯವರು ವಿಮೆದಾರರು ಆಸ್ಪತ್ರೆಗಳಿಗೆ ಸೇರಿ ಚಿಕಿತ್ಸೆಗಳನ್ನು ಪಡೆದುಕೊಂಡರೆ ಮಾತ್ರ ಹಣವನ್ನು ಪಾವತಿಸುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಾಯಿಲೆ. ಕ್ಯಾನ್ಸರ್ ಕಾಯಿಲೆ, ಗ್ಯಾಂಗ್ರಿನ್, ನರಗಳ ದೌರ್ಬಲ್ಯ ಮುಂತಾದಂತಹ ಅನೇಕ ಕಾಯಿಲೆಗಳು ಲಕ್ಷಾಂತರ ಜನರನ್ನ ಬಾಧಿಸುತ್ತಿವೆ. ನಾಗರೀಕರಿಗೆ ಇಂತಹ ಕಾಯಿಲೆಗಳು ತಮ್ಮ ದೇಹದಲ್ಲಿ ಇರುವುದು ತಿಳಿದುಬರುವುದು ವಿವಿಧ ರೀತಿಯ ವೈದ್ಯಕೀಯ ಪ್ರಯೋಗ ಮತ್ತು ತಪಾಸಣೆಗಳ ಮೂಲಕ.
ನಾಗರಿಕರು ತಮ್ಮ ದೇಹದಲ್ಲಿನ ರೋಗಗಳನ್ನು ಪತ್ತೆ ಹಚ್ಚಿ ಮುಂದಿನ ದಿನಗಳಲ್ಲಿ ಚಿಕಿತ್ಸೆ ಪಡೆಯುವ ಮುನ್ನ ಆಸ್ಪತ್ರೆಗಳಲ್ಲಿನ ವಿವಿಧ ತಪಾಸಣೆ ಮತ್ತು ವೈದ್ಯಕೀಯ ಪ್ರಯೋಗ, ಎಕ್ಸರೇ, ಸ್ಕ್ಯಾನಿಂಗ್, ರಕ್ತ ಪರೀಕ್ಷೆಗಳು ಮುಂತಾದವುಗಳಿಗೆ ಸಾವಿರಾರು ರೂಪಾಯಿಗಳನ್ನು ಪಾವತಿಸಬೇಕಾಗಿರುತ್ತದೆ.
ಲಕ್ಷಾಂತರ ನಾಗರಿಕರಿಗೆ ತಮ್ಮ ದೇಹದಲ್ಲಿ ತಮ್ಮನ್ನು ಬಾಧಿಸುತ್ತಿರುವ ರೋಗಗಳ ವಿಚಾರದಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿಸಿಕೊಳ್ಳಲು ಮತ್ತು ವಿವಿಧ ರೀತಿಯ ತಪಾಸಣೆ ಮಾಡಿಸಿಕೊಳ್ಳಲು ಹಣ ಪಾವತಿಸಲು ಆರ್ಥಿಕವಾಗಿ ಶಕ್ತಿ ಇರುವುದಿಲ್ಲ. ತಪಾಸಣೆಯ ಮಾಡಿಸಿಕೊಳ್ಳದೆ ಹಲವಾರು ವರ್ಷಗಳ ಕಾಲ ನೋವನ್ನು ಅನುಭವಿಸಿಕೊಂಡು ಬದುಕುತ್ತಾರೆ. ಈ ಹಿನ್ನೆಲೆಯಲ್ಲಿ ವಿಮಾ ಕಂಪನಿಗಳು ತಮ್ಮ ಗ್ರಾಹಕರಿಗೆ ಮಾರಣಾಂತಿಕ ಕಾಯಿಲೆಗಳ ವಿಚಾರದಲ್ಲಿ ವೈದ್ಯಕೀಯ ತಪಾಸಣೆ, ರೋಗ ಪತ್ತೆ ಹಚ್ಚುವ ಪ್ರಯೋಗಾಲಯದ ಖರ್ಚು ವೆಚ್ಚವನ್ನು ಬರಿಸುವಂತಹ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಲಕ್ಷಾಂತರ ರೂಪಾಯಿಗಳ ವಿಮೆ ಮಾಡಿಸಿ ಪ್ರತಿ ವರ್ಷ ಸಾವಿರಾರು ರೂಪಾಯಿಗಳನ್ನ ಪಾವತಿಸಿ ರೋಗ ದೃಢೀಕರಣವಾಗಿ ಚಿಕಿತ್ಸೆ ಪಡೆದುಕೊಂಡರೆ ಮಾತ್ರ ಹಣ ತುಂಬಿಸಿಕೊಡುವುದಾದರೆ ಇದರಿಂದ ಹೆಚ್ಚು ಅನುಕೂಲವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರದ ಕಾರ್ಮಿಕ ಸಚಿವರು ಮತ್ತು ವಿತ್ತ ಸಚಿವರು ವಿವಿಧ ಖಾಸಗಿ ಮತ್ತು ಸರಕಾರದ ವಿಮಾ ಕಂಪನಿಗಳ ಪ್ರಮುಖರ ಸಭೆಗಳನ್ನು ನಡೆಸಿ ಸ್ಪಷ್ಟವಾದಂತಹ ಆದೇಶಗಳನ್ನ ನೀಡುವುದರ ಮೂಲಕ ಕೋಟ್ಯಾಂತರ ವಿಮೆ ಪಾವತಿದಾರರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು


