ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ ಮಹೋತ್ಸವ

8 months ago

ಪೂರ್ವರಾಧನೆ ಕಾರ್ಯಕ್ರಮ

ಬೆಂಗಳೂರು: ಮಂತ್ರಾಲಯ ಶ್ರೀ ಗುರುರಾಘವೆಂದ್ರ ಗುರುಸಾರ್ವಭೌಮರ 354ನೇ ಆರಾಧನೆ ಮಹೋತ್ಸವ ಕಾರ್ಯಕ್ರಮ ಮತ್ತು ಪೂರ್ವರಾಧನೆ ಪ್ರಯುಕ್ತ ವಿವಿಧ ಕಡೆಗಳಲ್ಲಿ ರಾಯರ ಮಠದಲ್ಲಿ ವಿಶೇಷ ಪೂಜೆ ಮತ್ತು ತೀರ್ಥ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು.

ರಾಜಾಜಿನಗರ ವಿಠ್ಠಲ ಮಂದಿರದಲ್ಲಿ ರಾಯರ ಬೃಂದಾನವನಕ್ಕೆ ಬೆಳ್ಳಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಪ್ರಕಾಶನಗರದ ಸತ್ಯನಾರಾಯಣ ಮಠದಲ್ಲಿ ರಾಯರ ಆರಾಧನೆ ಪ್ರಯುಕ್ತ ಶ್ರೀ ಸಖಿ ಮಹಿಳಾ ಮಂಡಳಿ,ಅಖಲಭಾರತ ಮಾಧ್ವ ಮಹಾ ಮಂಡಳಿ ರಾಯರ ಕುರಿತು ಭಕ್ತಿ ಗೀತೆ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಕಾಶನಗರ ರಾಯರಮಠ, ಶ್ರೀ ರಾಘವೇಂದ್ರ ದರ್ಶನ ಮಂದಿರ ಟ್ರಸ್ಟ್ ಡಾ.ರಾಜ್ ಕುಮಾರ್ ರಸ್ತೆ ಹಾಗೂ ಸುಬ್ರಹ್ಮಣನಗರದ ಶ್ರೀ ಶ್ರೀ ವ್ಯಾಸರಾಜ ಮಠ(ಸೋಸಲೆ)ಯಲ್ಲಿ ರಾಯರ ಬೃಂದಾವನಕ್ಕೆ ಬಿಳಿ ದಾಕ್ಷಿ ಮತ್ತು ತುಳಸಿದಳಗಳಿಂದ ಅಲಂಕಾರಿಸಲಾಗಿತ್ತು ಮತ್ತು ಪುರಂದರ ಆಚಾರ್ಯ ಹಯಗ್ರೀವರವರಿಂದ ರಾಯರ ಕುರಿತು ಪ್ರವಚನ ಮತ್ತು ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿರುವ ಶ್ರೀ ರಾಘವೇಂದ್ರ ಮೃತ್ತಿಕಾ ಬೃಂದಾವನದಲ್ಲಿ ವರಹ ಹರಿವಿಠ್ಠಲ ದಾಸರಿಂದ ರಾಯರ ಮಹಿಮೆ ಮತ್ತು ಶ್ರೀಕರಚಾರ್ಯರಿಂದ ಪ್ರವಚನ ಆಯೋಜಿಸಲಾಗಿತ್ತು.

ಬೆಳಗ್ಗೆಯಿಂದಲೆ ರಾಯರ ಭಕ್ತರು ಆಗಮಿಸಿ ರಾಯರ ದರ್ಶನ ಪಡೆದರು. ಗುರಾರಾಯರಿಗೆ ಹೂವಿನ ಅಲಂಕಾರ, ಕನಕಾಭಿಷೇಕ, ಪಾದಪೂಜೆ, ಫಲಪಂಚಾಮೃತ, ಕ್ಷೀರಾಭಿಷೇಕ ನೇರವೇರಿತು.

Leave a Reply