ಆಗಸ್ಟ್ 7ರಂದು ಪ್ರೊ.ಕಿ.ರಂ.ನಾಗರಾಜ ನೆನಪಿನ ಅಹೋರಾತ್ರಿ ಕಾಡುವ ಕಿರಂ

8 months ago

ಬೆಂಗಳೂರು: ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್, ಕಿರಂ ಪ್ರಕಾಶನ ವತಿಯಿಂದ ದಿನಾಂಕ 7.8.2025ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡದ ಖ್ಯಾತ ವಿಮರ್ಶಕ ಪ್ರೊ.ಕಿ.ರಂ.ನಾಗರಾಜ ಅವರ ನೆನಪಿನಲ್ಲಿ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ನೆರವೇರಿಸಲಿದ್ದಾರೆ. ‘ಕಾಡುವ ಕಿರಂ ಹೊಸ ಕವಿತೆಗಳು 2025’ ಕೃತಿಯನ್ನು ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಅಂತರರಾಷ್ಟ್ರೀಯ ಕಲಾವಿದರಾದ ಡಾ.ಎಂ.ಎಸ್.ಮೂರ್ತಿ ಅವರು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಸಹನಾ ಕೆ.ಎನ್., ವಾರ್ತಾ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಕವನ ಕೆ.ಎನ್., ಉಪನ್ಯಾಸಕಿ ಚಂದನ ಕೆ.ಎನ್. ಭಾಗವಹಿಲಿದ್ದಾರೆ. ಕಾರ್ಯಕ್ರಮದ ಪ್ರಸ್ತಾವನೆಯನ್ನು ಸಂಶೋಧಕ ಮತ್ತು ಪತ್ರಕರ್ತ ಡಾ.ಪ್ರದೀಪ್ ಮಾಲ್ಗುಡಿ ಮಾಡಲಿದ್ದು, ‘ಕಾಡುವ ಕಿರಂ ಹೊಸ ಕವಿತೆಗಳು 2025’ ಕೃತಿಯ ಸಂಪಾದಕ ಎಸ್.ಮಂಜುನಾಥ್ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಸ್ವಾಗತವನ್ನು ರಂಘ ಸಂಘಟಕ ಸಂಸ ಸುರೇಶ್ ಅವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಹಿರಿಯ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಅವರು ವಹಿಸಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ 2025ನೇ ಸಾಲಿನ ಕಾಡುವ ಕಿರಂ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಕಾಡುವ ಕಿರಂ 2024 ಪ್ರಶಸ್ತಿ ಪುರಸ್ಕೃತರು

ಎಂ.ಗೋಪಾಲ್ – ಜನಪರ ಹೋರಾಟ

ಡಾ.ಎಂ.ಉಷಾ – ಸ್ತ್ರೀವಾದ, ಸಾಹಿತ್ಯ ಮತ್ತು ಅನುವಾದ

ಪ್ರೊ.ಎಂ.ಜಿ.ಚಂದ್ರಶೇಖರಯ್ಯ – ಸಾಹಿತ್ಯ

ಶ್ರೀನಿವಾಸ ನಟೇಕರ್ ಎಸ್ – ವೈಚಾರಿಕತೆ ಮತ್ತು ರಂಗಭೂಮಿ

ಡಾ.ಕೂಡ್ಲೂರು ವೆಂಕಟಪ್ಪ – ಸಾಹಿತ್ಯ, ಸಂಶೋಧನೆ

ಟಿ.ನಾರಾಯಣ್ – ಚಿತ್ರಕಲೆ

8 ಗಂಟೆಗೆ

ನಾಟಕ: ನೀಗಿಕೊಂಡ ಸಂಸ

ರಚನೆ: ಕಿ.ರಂ.ನಾಗರಾಜ

ನಿರ್ದೇಶನ: ಸಿದ್ದರಾಮ್ ಕೊಪ್ಪರ್

ತಂಡ: ಬೆಂಗಳೂರು ಏಷ್ಯನ್ ಥಿಯೇಟರ್

ನಿರ್ವಹಣೆ: ಸಂಸ ಥಿಯೇಟರ್ ಬೆಂಗಳೂರು

ರಾತ್ರಿ ಹತ್ತು ಗಂಟೆಯ ನಂತರ ಕಾವ್ಯನಮನ, ನುಡಿನಮನ, ರೇಖಾ ನಮನ, ಜನಪದ ನಮನ ಕಾರ್ಯಕ್ರಮಗಳು ನಡೆಯಲಿದ್ದು, ಮೊದಲನೆ ಗೋಷ್ಠಿಯಲ್ಲಿ ಡಾ.ಕೆ.ಷರೀಫ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಎಚ್.ಲಕ್ಷ್ಮೀನಾರಾಯಣಸ್ವಾಮಿ, ಡಾ.ಎಚ್.ಎಲ್.ಪುಷ್ಪ, ಡಾ.ರಾಮಲಿಂಗಪ್ಪ ಟಿ ಬೇಗೂರು, ಡಾ.ಹುಲಿಕುಂಟೆ ಮೂರ್ತಿ, ರಂಗಸ್ವಾಮಿ ಸಿದ್ದಯ್ಯ, ಗಿರೀಶ್ ಹಂದಲಗೆರೆ, ದಿವ್ಯ ಆಂಜನಪ್ಪ, ಡಾ.ಪ್ರಕಾಶ್ ಮಂಟೇದ, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಡಾ.ರವಿಕುಮಾರ್ ನೀಹ, ಚಾಂದ್ ಕವಿಚಂದ್ರ, ಮೌನೇಶ್ ಎಲ್ ಬಡಿಗೇರ, ವಿಕಾಸ್ ಆರ್ ಮೌರ್ಯ, ಯಂಶ ಬೇಂಗಿಲ, ಡಾ.ಟಿ.ಲಕ್ಷ್ಮೀನಾರಾಯಣ, ಡಾ.ಸತ್ಯಮಂಗಲ ಮಹಾದೇವ, ಡಾ.ಟಿ.ಯಲ್ಲಪ್ಪ, ಎಲ್.ಎನ್.ಮುಕುಂದರಾಜ್, ಆರ್.ಜಿ.ಹಳ್ಳಿ ನಾಗರಾಜ್, ಎರಡನೇ ಗೋಷ್ಠಿಯಲ್ಲಿ ಕೃಷ್ಣ ರಾಯಚೂರು, ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ, ಡಾ.ಉಮಾಶಂಕರ್ ಎಚ್ ಡಿ., ಡಾ.ಕೆ.ಮುರಳಿ ಮೋಹನ್ ಕಾಟಿ, ಮಂಜುನಾರಾಯಣ್ ಕೆ.ಎಲ್., ಡಾ.ಡಿ.ಆರ್.ದೇವರಾಜ್, ಆಲೂರು ದೊಡ್ಡನಿಂಗಪ್ಪ, ಕುಮಾರ್ ಇಂದ್ರಬೆಟ್ಟ, ಫೀನಿಕ್ಸ್ ರವಿ, ಧರಣಿಕಾಂತ್ ಎಸ್., ಸಂಘಮಿತ್ರೆ ನಾಗರಘಟ್ಟ, ಶಾರದ ಎಸ್., ಎಸ್.ಪಿ.ಮಹದೇವ ಹೇರಂಬ, ಸಿದ್ದೇಶ್ ಸಿದ್ದನಮಠ, ಪ್ರವೀಣ ನಿಂಗಪ್ಪ ಕಿತ್ನೂರ, ಭಾವನ ಎಸ್., ಎ.ರಘುಪತಿ, ರುಕ್ಮಿಣಿ ಎಸ್ ನಾಯರ್, ಸಂತೋಷ್ ಟಿ., ದ್ವಾರನಕುಂಟೆ ಪಿ ಚಿತ್ತಣ್ಣ, ಮೂರನೇ ಗೋಷ್ಠಿಯಲ್ಲಿ ಮೇದರದೊಡ್ಡಿ ಹನುಮಂತ, ಮೂರನೇ ಗೋಷ್ಠಿಯಲ್ಲಿ ಯಶಸ್ವಿನಿ ಶ್ರೀಧರಮೂರ್ತಿ, ಉಷಾ ಬೆಳ್ಳಟ್ಟಿ, ಶಿವರಾಜ ಸ ಅರಳಿ, ಶೇಖರಯ್ಯ ಟಿ ಎಚ್ ಎಂ ಗೆದ್ದಲಗಟ್ಟೆ, ನಾಗೇಂದ್ರ ಹೆಬ್ಬಾರ್, ಲವಿನ್ ಲೋಪೆಜ್, ಗಂಗಸ್ವಾಮಿ, ಕೃಪಾ ದೇವರಾಜ್, ಬಿ.ರವಿಕುಮಾರ್ ಚಿತ್ರದುರ್ಗ, ಪ್ರಗತಿ ಕೆ., ಡಾ.ಮೈತ್ರಿ ಭಟ್, ವಿದ್ಯಾ ಅರಮನೆ, ವಿನೋದ್ ಕೆ ಎಲ್., ಮೈಬೂಬ ಸಾಹೇಬ ವೈ ಜೆ., ನಿರ್ಮಲಕುಮಾರಿ ಎಸ್., ಹರೀಶ್ ಕೋಳಗುಂದ, ದೊ.ಚಿ.ಗೌಡ (ರೈತಕವಿ), ನಾರಾಯಣಸ್ವಾಮಿ (ನಾನಿ), ಮೊಹಮ್ಮದ್ ರಫೀಕ್ ಕೊಟ್ಟೂರು, ಡಾ.ಸಂಧ್ಯಾ ಎಚ್ ಎಸ್., ತರುಣ್ ಎಂ ಆಂತರ್ಯ, ನಾಲ್ಕನೇ ಗೋಷ್ಠಿಯಲ್ಲಿ ಸತೀಶ್ ಗರಣಿ, ನಾಗೊಂಡಹಳ್ಳಿ ಸುನೀಲ್, ದೀಪಿಕಾ ಬಾಬು, ಗುರುಗೌತಮ್ ಹಳೇಪುರ, ಮೀರಾ ನಾಡಿಗ್, ಉಪೇಂದ್ರಕುಮಾರ್ ಎಂ ಆರ್., ಎನ್ ರವಿಶಂಕರ್, ಜಬೀವುಲ್ಲಾ ಎಂ ಅಸದ್, ಎಸ್ ಕೆ ಸುರೇಶ್ ತೌಡೂರು, ಶರಣ ಬಸವ, ನವೀನ್ ಕುಮಾರ್ ಜಿ ಬೇವಿನಾಳ್, ಡಾ.ಪ್ರಸನ್ನ ನಂಜಾಪುರ, ರವಿಕುಮಾರ್ ಜಾಧವ್, ಡಾ.ಕೂಡ್ಲೂರು ವೆಂಕಟಪ್ಪ, ನಾವೆಂಕಿ ಕೋಲಾರ, ಬಳೇಪೇಟೆ ಪ್ರಕಾಶ್, ಸೌಮ್ಯ ಎಂ ಎಸ್., ರಾಧಾ ಬಿ ಕೆ., ಕುಸುಮಾಕರ ಅಂಬೆಕಲ್ಲು, ಮಧು ಬಿರಾದಾರ, ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ ಸೇರಿದಂತೆ ಹಿರಿಯ ಮತ್ತು ಕಿರಿಯ ಕವಿಗಳು ಕವಿತೆಗಳನ್ನು ವಾಚಿಸಲಿದ್ದಾರೆ.

ಪ್ರತಿ ಗೋಷ್ಠಿಯ ನಡುವೆ ಜನಪದ ಗೀತೆಗಳು, ರಂಗಗೀತೆ, ಜನಪದ ಮಹಾಕಾವ್ಯಗಳ ಗಾಯನ ಇರಲಿದ್ದು, ಇದರೊಂದಿಗೆ ವಿಶೇಷ ಉಪನ್ಯಾಸಗಳನ್ನು ಕೂಡ ಆಯೋಜಿಸಲಾಗಿದೆ. ಅಪ್ಪಗೆರೆ ತಿಮ್ಮರಾಜು, ಸಿ.ಎಂ.ನರಸಿಂಹಮೂರ್ತಿ, ಕೆ.ಎಸ್.ಮಂಜುನಾಥ್, ಶಂಕರ್ ಭಾರತೀಪುರ, ಆನೇಕಲ್ ರಾಜೇಶ್, ಅರುಣ್ ಕುಮಾರ್ ಮಾಂಬಳ್ಳಿ, ಉಮ್ಮತ್ತೂರು ಬಸವರಾಜ್ ಮೊದಲಾದವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ತಬಲಾ ಸಾಥ್ ಅನ್ನು ವೆಂಕಟೇಶ್ ಜೋಷಿ ಮತ್ತು ಹಾರ್ಮೋನಿಯಂ ಸಾಥ್ ಅನ್ನು ಚಿದಾನಂದ ಕುಲಕರ್ಣಿ ನೀಡಲಿದ್ದಾರೆ.

ರೇಖಾ ಸಮಯ ಕಾರ್ಯಕ್ರಮದಲ್ಲಿ ಸುಭಾಷ್ ಕಮ್ಮಾರ್, ನವೀನ್ ಕುಮಾರ್, ವಿಷ್ಣು ಕುಮಾರ್ ಎಸ್, ಭೀಮೇಷಪ್ಪ ಎನ್ ಕೆ., ಶಿವಕುಮಾರ್ ಎಂ., ಸಿದ್ದರಾಮ್ ಕೊಪ್ಪರ್, ಕುಮಾರ್ ಕೆ ಜಿ., ಗೋಪಾಲ್ ಕಮ್ಮಾರ್, ಭಾನು ಪ್ರಕಾಶ್, ಮನು, ಓ. ವೆಂಕಟೇಶ್, ಶಿವಕುಮಾರ್ ಚಿತ್ರಗಳನ್ನು ರಚಿಸಲಿದ್ದಾರೆ.

ಬೆಳಿಗ್ಗೆ 5ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ಭಾಷಣವನ್ನು ಕನ್ನಡ ಅಧ್ಯಾಪಕರಾದ ಡಾ.ಸುಭಾಷ್ ರಾಜಮಾನೆ ಮಾಡಲಿದ್ದು, ಅತಿಥಿಯಾಗಿ ತಮಿಳುನಾಡಿನ ಸಾಂಸ್ಕೃತಿಕ ಸಂಘಟಕ ಶ್ರೀನಿವಾಸನ್ ಭಾಗವಹಿಸುತ್ತಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಂಗವಿಮರ್ಶಕ ಡಾ.ರುದ್ರೇಶ್ ಅದರಂಗಿ ವಹಿಸಲಿದ್ದಾರೆ.

ಕಾಡುವ ಕಿರಂ 2025

ಜನಸಂಸ್ಕೃತಿ ಪ್ರತಿಷ್ಠಾನ

ಬೆಂಗಳೂರು ಆರ್ಟ್ ಫೌಂಡೇಷನ್

ಕಿರಂ ಪ್ರಕಾಶನ

ಸಂಜೆ 6

ಜನಪದ ಮಹಾಕಾವ್ಯಗಳ ಗಾಯನ: ಆಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರು, ಚಾಮರಾಜನಗರ

ಸ್ವಾಗತ: ಸಂಸ ಸುರೇಶ್, ರಂಗ ಸಂಘಟಕರು

ಕಾಡುವ ಕಿರಂ ಪ್ರಸ್ತಾವನೆ: ಡಾ.ಪ್ರದೀಪ್ ಮಾಲ್ಗುಡಿ, ಅಧ್ಯಕ್ಷ, ಜನಸಂಸ್ಕೃತಿ ಪ್ರತಿಷ್ಠಾನ

ಉದ್ಘಾಟನೆ: ಪ್ರೊ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಪುಸ್ತಕ ಬಿಡುಗಡೆ: ಕಾಡುವ ಕಿರಂ ಹೊಸ ಕವಿತೆ 2025

ಡಾ.ಎಂ.ಎಸ್.ಮೂರ್ತಿ, ಮಾಜಿ ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ

ಮುಖ್ಯ ಅತಿಥಿಗಳು:

ಸಹನ ಕೆ.ಎನ್., ಉಪನ್ಯಾಸಕರು

ಡಾ.ಕವನ ಕೆ.ಎನ್., ಜಂಟಿ ನಿರ್ದೇಶಕರು, ವಾರ್ತಾ ಇಲಾಖೆ

ಚಂದನ ಕೆ.ಎನ್., ಉಪನ್ಯಾಸಕರು

ಎಸ್.ಮಂಜುನಾಥ್, ಸಂಪಾದಕರು, ಕಾಡುವ ಕಿರಂ ಹೊಸ ಕವಿತೆ 2025

ಅಧ್ಯಕ್ಷತೆ: ಕೋಟಿಗಾನಹಳ್ಳಿ ರಾಮಯ್ಯ, ಹಿರಿಯ ಸಾಹಿತಿಗಳು

ನಿರ್ವಹಣೆ: ನಿರ್ಮಲಾ ನಾದನ್

ರಾತ್ರಿ 8

ನಾಟಕ: ನೀಗಿಕೊಂಡ ಸಂಸ

ರಚನೆ: ಕಿ.ರಂ.ನಾಗರಾಜ

ನಿರ್ದೇಶನ: ಸಿದ್ದರಾಮ್ ಕೊಪ್ಪರ್

ತಂಡ: ಬೆಂಗಳೂರು ಏಷ್ಯನ್ ಥಿಯೇಟರ್

ನಿರ್ವಹಣೆ: ಸಂಸ ಥಿಯೇಟರ್ ಬೆಂಗಳೂರು

ನಿರ್ವಹಣೆ – ನಿರೂಪಣೆ

ಡಾ.ರುದ್ರೇಶ್ ಅದರಂಗಿ, ಅಧ್ಯಾಪಕರು

ಓ.ವೆಂಕಟೇಶ್, ಕಲಾವಿದರು

ಯತೀಶ ಎಸ್.ಎನ್., ರಂಗ ಸಂಘಟಕರು

ರಾತ್ರಿ 10: 1ನೇ ಗೋಷ್ಠಿ

ಕಿ.ರಂ. ನುಡಿನಮನ: ದಾಸನೂರು ಕೂಸಣ್ಣ, ಸಮುದಾಯ ಚಿಂತಕರು

ವಿಷಯ: ಮೀಸಲಾತಿ ಮತ್ತು ಒಳ ಮೀಸಲಾತಿ: ಸಾಂವಿಧಾನಿಕ ಆಶಯಗಳು

ಕಾವ್ಯನಮನ:

ಡಾ.ಕೆ.ಷರೀಫ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಎಚ್.ಲಕ್ಷ್ಮೀನಾರಾಯಣಸ್ವಾಮಿ, ಡಾ.ಎಚ್.ಎಲ್.ಪುಷ್ಪ, ಡಾ.ರಾಮಲಿಂಗಪ್ಪ ಟಿ ಬೇಗೂರು, ಡಾ.ಹುಲಿಕುಂಟೆ ಮೂರ್ತಿ, ರಂಗಸ್ವಾಮಿ ಸಿದ್ದಯ್ಯ, ಗಿರೀಶ್ ಹಂದಲಗೆರೆ, ದಿವ್ಯ ಆಂಜನಪ್ಪ, ಡಾ.ಪ್ರಕಾಶ್ ಮಂಟೇದ, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಡಾ.ರವಿಕುಮಾರ್ ನೀಹ, ಚಾಂದ್ ಕವಿಚಂದ್ರ, ಮೌನೇಶ್ ಎಲ್ ಬಡಿಗೇರ, ವಿಕಾಸ್ ಆರ್ ಮೌರ್ಯ, ಯಂಶ ಬೇಂಗಿಲ, ಡಾ.ಟಿ.ಲಕ್ಷ್ಮೀನಾರಾಯಣ, ಡಾ.ಸತ್ಯಮಂಗಲ ಮಹಾದೇವ, ಡಾ.ಟಿ.ಯಲ್ಲಪ್ಪ, ಎಲ್.ಎನ್.ಮುಕುಂದರಾಜ್, ಆರ್.ಜಿ.ಹಳ್ಳಿ ನಾಗರಾಜ್

ರಾತ್ರಿ 12:00: 2ನೇ ಗೋಷ್ಠಿ

ಕಿ.ರಂ. ನುಡಿನಮನ: ಡಾ.ರಾಜಪ್ಪ ದಳವಾಯಿ, ನಾಟಕಕಾರರು

ವಿಷಯ: ಅಪಾಯಕಾರಿ ಪದಗಳು: ಸಂಸ್ಕೃತಿ, ಸಂಸ್ಕೃತಿ ಚಿಂತಕ

ಕಾವ್ಯನಮನ:

ಕೃಷ್ಣ ರಾಯಚೂರು, ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ, ಡಾ.ಉಮಾಶಂಕರ್ ಎಚ್ ಡಿ., ಡಾ.ಕೆ.ಮುರಳಿ ಮೋಹನ್ ಕಾಟಿ, ಮಂಜುನಾರಾಯಣ್ ಕೆ.ಎಲ್., ಡಾ.ಡಿ.ಆರ್.ದೇವರಾಜ್, ಆಲೂರು ದೊಡ್ಡನಿಂಗಪ್ಪ, ಕುಮಾರ್ ಇಂದ್ರಬೆಟ್ಟ, ಫೀನಿಕ್ಸ್ ರವಿ, ಧರಣಿಕಾಂತ್ ಎಸ್., ಸಂಘಮಿತ್ರೆ ನಾಗರಘಟ್ಟ, ಶಾರದ ಎಸ್., ಎಸ್.ಪಿ.ಮಹದೇವ ಹೇರಂಬ, ಸಿದ್ದೇಶ್ ಸಿದ್ದನಮಠ, ಪ್ರವೀಣ ನಿಂಗಪ್ಪ ಕಿತ್ನೂರ, ಭಾವನ ಎಸ್., ಎ.ರಘುಪತಿ, ರುಕ್ಮಿಣಿ ಎಸ್ ನಾಯರ್, ಸಂತೋಷ್ ಟಿ., ದ್ವಾರನಕುಂಟೆ ಪಿ ಚಿತ್ತಣ್ಣ

ರಾತ್ರಿ 02:00 3ನೇ ಗೋಷ್ಠಿ

ಕಿ.ರಂ. ನುಡಿನಮನ: ಹರ್ಷ ಕುಮಾರ್ ಕುಗ್ವೆ ಪತ್ರಕರ್ತರು

ವಿಷಯ: ವೈಜ್ಞಾನಿಕ ಮನೋಭಾವ ಮತ್ತು ವರ್ತಮಾನ ಭಾರತ

ಕಾವ್ಯನಮನ:

ಮೇದರದೊಡ್ಡಿ ಹನುಮಂತ, ಮೂರನೇ ಗೋಷ್ಠಿಯಲ್ಲಿ ಯಶಸ್ವಿನಿ ಶ್ರೀಧರಮೂರ್ತಿ, ಉಷಾ ಬೆಳ್ಳಟ್ಟಿ, ಶಿವರಾಜ ಸ ಅರಳಿ, ಶೇಖರಯ್ಯ ಟಿ ಎಚ್ ಎಂ ಗೆದ್ದಲಗಟ್ಟೆ, ನಾಗೇಂದ್ರ ಹೆಬ್ಬಾರ್, ಲವಿನ್ ಲೋಪೆಜ್, ಗಂಗಸ್ವಾಮಿ, ಕೃಪಾ ದೇವರಾಜ್, ಬಿ.ರವಿಕುಮಾರ್ ಚಿತ್ರದುರ್ಗ, ಪ್ರಗತಿ ಕೆ., ಡಾ.ಮೈತ್ರಿ ಭಟ್, ವಿದ್ಯಾ ಅರಮನೆ, ವಿನೋದ್ ಕೆ ಎಲ್., ಮೈಬೂಬ ಸಾಹೇಬ ವೈ ಜೆ., ನಿರ್ಮಲಕುಮಾರಿ ಎಸ್., ಹರೀಶ್ ಕೋಳಗುಂದ, ದೊ.ಚಿ.ಗೌಡ (ರೈತಕವಿ), ನಾರಾಯಣಸ್ವಾಮಿ (ನಾನಿ), ಮೊಹಮ್ಮದ್ ರಫೀಕ್ ಕೊಟ್ಟೂರು, ಡಾ.ಸಂಧ್ಯಾ ಎಚ್ ಎಸ್., ತರುಣ್ ಎಂ ಆಂತರ್ಯ

ಜನಪದ ನಮನ:

ಅಪ್ಪಗೆರೆ ತಿಮ್ಮರಾಜು, ಖ್ಯತಾ ಜಾನಪದ ಗಾಯಕರು

ಸಿ.ಎಂ.ನರಸಿಂಹಮೂರ್ತಿ, ಚಾಮರಾಜನಗರ, ಖ್ಯಾತ ಜನಪದ ಗಾಯಕರು

ಕೆ.ಎಸ್.ಮಂಜುನಾಥ್, ಖ್ಯಾತ ಜನಪದ ಗಾಯಕರು

ಶಂಕರ್ ಭಾರತೀಪುರ, ಖ್ಯಾತ ಜನಪದ ಗಾಯಕರು

ಆನೇಕಲ್ ರಾಜೇಶ್, ಖ್ಯಾತ ಜನಪದ ಗಾಯಕರು

ಅರುಣ್ ಕುಮಾರ್ ಮಾಂಬಳ್ಳಿ, ಖ್ಯಾತ ಜನಪದ ಗಾಯಕರು

ರಂಗಗೀತೆ: ಉಮ್ಮತ್ತೂರು ಬಸವರಾಜು, ಖ್ಯಾತ ಗಾಯಕರು

ತಬಲಾ ಸಾಥ್: ವೆಂಕಟೇಶ್ ಜೋಷಿ,

ಹಾರ್ಮೋನಿಯಂ: ಚಿದಾನಂದ ಕುಲಕರ್ಣಿ

ಮುಂಜಾನೆ 4:00: ಗೋಷ್ಠಿ 4

ಕಿ.ರಂ. ನುಡಿನಮನ: ಶಾಂತರಾಜ್, ಉಪಪ್ರಾಂಶುಪಾಲರು ವಿಜಯ ಸಂಜೆ ಕಾಲೇಜು

ವಿಷಯ: ಕವಿತೆಗಳ ಅನುಸಂಧಾನ

ಕಾವ್ಯನಮನ: ಗೋಷ್ಠಿ 4

ಸತೀಶ್ ಗರಣಿ, ನಾಗೊಂಡಹಳ್ಳಿ ಸುನೀಲ್, ದೀಪಿಕಾ ಬಾಬು, ಗುರುಗೌತಮ್ ಹಳೇಪುರ, ಮೀರಾ ನಾಡಿಗ್, ಉಪೇಂದ್ರಕುಮಾರ್ ಎಂ ಆರ್., ಎನ್ ರವಿಶಂಕರ್, ಜಬೀವುಲ್ಲಾ ಎಂ ಅಸದ್, ಎಸ್ ಕೆ ಸುರೇಶ್ ತೌಡೂರು, ಶರಣ ಬಸವ, ನವೀನ್ ಕುಮಾರ್ ಜಿ ಬೇವಿನಾಳ್, ಡಾ.ಪ್ರಸನ್ನ ನಂಜಾಪುರ, ರವಿಕುಮಾರ್ ಜಾಧವ್, ಡಾ.ಕೂಡ್ಲೂರು ವೆಂಕಟಪ್ಪ, ನಾವೆಂಕಿ ಕೋಲಾರ, ಬಳೇಪೇಟೆ ಪ್ರಕಾಶ್, ಸೌಮ್ಯ ಎಂ ಎಸ್., ರಾಧಾ ಬಿ ಕೆ., ಕುಸುಮಾಕರ ಅಂಬೆಕಲ್ಲು, ಮಧು ಬಿರಾದಾರ, ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ

ರೇಖಾ ನಮನ:

ಸುಭಾಷ್ ಕಮ್ಮಾರ್, ನವೀನ್ ಕುಮಾರ್, ವಿಷ್ಣು ಕುಮಾರ್ ಎಸ್, ಭೀಮೇಷಪ್ಪ ಎನ್ ಕೆ., ಶಿವಕುಮಾರ್ ಎಂ., ಸಿದ್ದರಾಮ್ ಕೊಪ್ಪರ್, ಕುಮಾರ್ ಕೆ ಜಿ., ಗೋಪಾಲ್ ಕಮ್ಮಾರ್, ಭಾನು ಪ್ರಕಾಶ್, ಮನು, ಓ. ವೆಂಕಟೇಶ್, ಶಿವಕುಮಾರ್

ಮುಂಜಾನೆ 5:00

ಸಮಾರೋಪ ನುಡಿ: ಡಾ.ಸುಭಾಷ್ ರಾಜಮಾನೆ, ಅಧ್ಯಾಪಕರು

ಅತಿಥಿಗಳು: ಶ್ರೀನಿವಾಸನ್, ಸಾಂಸ್ಕೃತಿಕ ಸಂಘಟಕರು

ಅಧ್ಯಕ್ಷತೆ: ಡಾ.ರುದ್ರೇಶ್ ಅದರಂಗಿ, ರಂಗವಿಮರ್ಶಕ

ಕಾಡುವ ಕಿರಂ 2025 ಪ್ರಶಸ್ತಿ ಪುರಸ್ಕೃತರು

ಎಂ.ಗೋಪಾಲ್ ಜನಪರ ಹೋರಾಟ

06.06.196ರಂದು ಕೋಲಾರ ಜಿಲ್ಲೆಯ ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ಜನಿಸಿದ ಎಂ ಗೋಪಾಲ್ ಅವರು ಜನಪರ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ತಂದೆ ಮುನಿವೆಂಕಟೇಗೌಡ, ತಾಯಿ ನಾರಾಯಣಮ್ಮ. ಎಂ ಗೊಲ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬೈರಕೂರಿನ ನೆಹರು ಕೆನಡಿ ಪ್ರೌಢಶಾಲೆಯಲ್ಲಿ ಪ್ರೌಢ ವಿದ್ಯಾಭ್ಯಾಸ ಪೂರೈಸಿದರು. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ನಡೆಸುತ್ತಿದ್ದ ವೇಳೆ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವ ಕಾರಣದಿಂದ 1983ರಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿದರು.

ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಬಡವರಿಗೆ ಸೇರಿದ 760 ಎಕರೆ ಜಮೀನು ಕಸಿಯಲು ಯತ್ನಿಸಿದಾಗ ಅದರ ವಿರುದ್ಧ ಹೋರಾಟದ ಕಣಕ್ಕೆ ಇಳಿದ ಎಂ ಗೋಪಾಲ್, 4 ವರ್ಷ ಹೋರಾಟ ಮಾಡಿ ರೈತರ ಜಮೀನು ಉಳಿಸುವಲ್ಲಿ ಸಫಲರಾದರು. ಈ ಹೋರಾಟದಲ್ಲಿ ಸ್ವಂತಕ್ಕೆ 1 ಗುಂಟೆ ಜಮೀನನ್ನು ಕೂಡ ಇವರು ಪಡೆದಿಲ್ಲ. ಜೊತೆಗೆ, ಕೋಲಾರ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಹೋರಾಡಿ ರೈತರಿಗೆ 5000 ಎಕರೆ ಜಮೀನು ಉಳಿಸುವ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾದರು.

1986-87ರಲ್ಲಿ ಬಗರ್ ಹುಕುಂ ಜಮೀನನ್ನು ರೈತರಿಗೆ ಮಂಜೂರು ಮಾಡುವಂತೆ ಹೋರಾಟ ಮಾಡಿ ಸೆರೆವಾಸ. 1992-93ರಲ್ಲಿ ಕೆಎಂಎಫ್ ವತಿಯಿಂದ ಹಾಲಿನ ದರ ಹೆಚ್ಚಿಸುವಂತೆ ಪ್ರತಿಭಟನೆಯಲ್ಲಿ ಭಾಗಿ. ಗೋಲಿಬಾರ್ ಮಾಡಿದ ಸರ್ಕಾರದ ವಿರುದ್ಧ ಹೋರಾಡಿ ಸೆರೆವಾಸ ಅನುಭವಿಸಿದರು.

1996ರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಆಗ್ರಹಿಸಿ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳ 14 ತಾಲೂಕುಗಳಲ್ಲಿ 1000 ಕಿ.ಮೀ ಜಾಥಾದಲ್ಲಿ ಭಾಗಿ.

1997-2001ರ ಅವಧಿಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ನವಿಲೆ ಹೋರಾಟ ಸಂಘಟನೆ. 35,000 ಜನ ಪ್ರತಿಭಟನೆಯಲ್ಲಿ ಭಾಗಿ. ಸುರಂಗದ ಮುಂದೆ 40 ಗ್ರಾಮಸ್ಥರಿಂದ 40 ಗುಡಿಸಲುಗಳನ್ನು ನಿರ್ಮಿಸಿ ಸಂಗ್ರಾಮ ನಗರ ಎಂದು ನಾಮಕರಣ ಮಾಡಿ 35 ಅಡಿ ಆಳದಲ್ಲಿ ಪ್ರತಿಭಟನೆ ನಡೆಸಿದರು. 96 ದಿನಗಳ ಧರಣಿ, 6 ದಿನಗಳ ಉಪವಾಸ ಸತ್ಯಾಗ್ರಹ. ಹೋರಾಟದಿಂದ ಸೆರೆಮನೆ ವಾಸ.

2002ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ 42,000 ರೇಷನ್ ಕಾರ್ಡ್ ರದ್ದು ವಿರೋಧಿಸಿ 115 ದಿನಗಳ ಕಾಲ ಧರಣಿ, 4 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಹೋರಾಟದ ಹಿನ್ನೆಲೆಯಲ್ಲಿ 42,000 ರೇಷನ್ ಕಾರ್ಡ್ ರದ್ದು ವಾಪಸ್ ಪಡೆದ ಸರ್ಕಾರ.

2008ರಲ್ಲಿ ಹಾವೇರಿ ಜಿಲ್ಲೆಯ ಸಂಗೂರು ಸಕ್ಕರೆ ಕಾರ್ಖಾನೆಯನ್ನು ಮುಚ್ಚಿದ್ದರ ವಿರುದ್ಧ 72 ದಿನಗಳ ಕಾಲ ಹೋರಾಟ. ಹೋರಾಟದಿಂದ ಮುಚ್ಚಿದ್ದ ಸಕ್ಕರೆ ಕಾರ್ಖಾನೆ ಪ್ರಾರಂಭ.

2012ರಲ್ಲಿ 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ವೃದ್ಧಾಪ್ಯವೇತನ ಕೊಡಬೇಕೆಂದು ಆಗ್ರಹಿಸಿ ಒಂದು ಇಡೀ ರೈಲನ್ನು ಬುಕ್ ಮಾಡಿ ಬೆಂಗಳೂರಿನಿಂದ ದೆಹಲಿ ಚಲೋ ಆಯೋಜನೆ. ಹೋರಾಟದಲ್ಲಿ ಯಶಸ್ಸು.

ರಾಜ್ಯದಲ್ಲಿ ಮೊದಲ ಬಾರಿಗೆ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮ ಪಂಚಾಯತಿಗೆ ಸೇರಿದ ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕಾರಣರಾದವರು ಎಂ ಗೋಪಾಲ್.  2025ರ ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಾ.ಎಂ.ಉಷಾ – ಸ್ತ್ರೀವಾದ, ಸಾಹಿತ್ಯ ಮತ್ತು ಅನುವಾದ

ಡಾ.ಎಂ.ಉಷಾ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ., ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾ. ಡಿ. ಆರ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಧರ್ಮ ಮತ್ತು ಕಾವ್ಯಧರ್ಮʼಎಂಬ ವಿಷಯದ ಬಗ್ಗೆ ಪಿಎಚ್ ಡಿ ಪದವಿ., ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಭಾಷಾಂತರ ವಿಭಾಗದಲ್ಲಿ ಪ್ರಾಧ್ಯಾಪಕಳಾಗಿ ೨೨ ವರ‍್ಷ ಸೇವೆ ಸಲ್ಲಿಸಿ ೨೦೨೦ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಇವರ ಆಸಕ್ತಿಯ ಕ್ಷೇತ್ರಗಳೆಂದರೆ, ಸಾಹಿತ್ಯ ಅಧ್ಯಯನ, ಮಹಿಳಾ ಅಧ್ಯಯನ ಮತ್ತು ಭಾಷಾಂತರ ಅಧ್ಯಯನ.

ಬಾಹ್ಯ ಧನಸಹಾಯದೊಂದಿಗೆ 1.Survey and Analysis of Social Science Higher EducationMaterial Production Initiative in Kannada: Translation Strategies, Story of  Success/FailureFunded- By

Sir Ratan Tata Foundation Mumbai 2. Kannada Corpus Creation- Funded By Classical Language Fund, Karnataka Government ಮುಖ್ಯ ಯೋಜನೆಗಳನ್ನು ನಿರ್ವಹಿಸಿದ್ದಾರೆ.

ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಭಾಷಾಂತರ, ಮಹಿಳಾ ಅಧ್ಯಯನ, ನಾಟಕ, ಕಾದಂಬರಿ ಇತ್ಯಾದಿ ಪ್ರಕಾರಗಳಿಗೆ ಸೇರಿದ ಹದಿನೇಳು ಕೃತಿಗಳು ಮತ್ತು ನಲವತ್ತಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. 2025ರ ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಕಟಿತ ಕೃತಿಗಳು:

1. ಮಹಿಳೆ ಮತ್ತು ಪತ್ರಿಕೆ

2. ಒಳಗಣ ರಣರಂಗ ಮತ್ತು ಹೊರಗಣ ಶೃಂಗಾರ

3. ಭಾರತೀಯ ಸ್ತ್ರೀವಾದ ಮತ್ತು ಸಂಸ್ಕೃತಿ ಚಿಂತನೆ

4. ಸುರುಚಿ

5. ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು

6. ಮಹಿಳೆ ಮತ್ತು ಜಾತಿ

7. ಮಹಿಳಾ ಅಧ್ಯಯನ ಪತ್ರಿಕೆ(ಸಂಪಾದನೆ)

8. ಆಧುನಿಕ ಮಹಿಳಾ ಸಾಹಿತ್ಯ: ಇನ್ನಷ್ಟು ಪುಟಗಳು(ಸಂಪಾದಿತ)

9. ಭಾಷಾಂತರ ಮತ್ತು ಲಿಂಗರಾಜಕಾರಣ

10. ಭಾಷಾಂತರ ಪ್ರವೇಶಿಕೆ

11. ಶೂಲಿಹಬ್ಬ(ನಾಟಕ)

12. ಅರ್ಧಕಥಾನಕ(ಭಾಷಾಂತರ)

13.. ಕನ್ನಡ ಮ್ಯಾಕ್ ಬೆತ್ ಗಳು

14. ಹೆಣ್ಣೆಂಬ ಶಬುದ(ಸಂಪಾದಿತ)

15. ಲಿಖ್ಯಂತೇ ದೇಶಭಾಷೆಯೊಳ್

16. ಬಾಳಬಟ್ಟೆ(ಕಾದಂಬರಿ)

17. ಗರಳಪುರಿ ಶಾಸ್ತ್ರಿಗಳು(ಕನ್ನಡ ಭಾಷಾಂತರಕಾರರು ಮಾಲಿಕೆ)

ಪಠ್ಯವಾಗಿರುವ ಬರಹಗಳು:

1. “ಉದ್ಯೋಗ-ಉದ್ದಿಮೆಗಳಲ್ಲಿ ಮಹಿಳೆ”ಲೇಖನವು ಜೈನ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರು

ವಿಶ್ವವಿದ್ಯಾಲಯಗಳ ಬಿಬಿಎಂ ತರಗತಿಗಳಿಗೆ ಪಠ್ಯವಾಗಿದೆ.

2. “ಸರ‍್ವಮಂಗಳ-ಕಾದಂಬರಿ ಸಿನಿಮಾ ಆದ ಬಗೆ” ಲೇಖನವು ಮೈಸೂರು ವಿಶ್ವವಿದ್ಯಾನಿಲಯದ ಪದವಿ

ತರಗತಿಗೆ ಪಠ್ಯವಾಗಿದೆ.

3. “ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು” ಕೃತಿಯು ಮಹಿಳಾ ಅಧ್ಯಯನ ಕೋರ್ಸ್ ಗೆಪರಾಮರ‍್ಶನ

ಪಠ್ಯವಾಗಿದೆ.

4. “ಭಾಷಾಂತರ ಪ್ರವೇಶಿಕೆ” ಕೃತಿಯು ಭಾಷಾಂತರ ಅಧ್ಯಯನ ಕೋರ‍್ಸಿಗೆ ಪರಾಮರ‍್ಶನ ಪಠ್ಯವಾಗಿದೆ.

ಪ್ರಶಸ್ತಿಗಳು:

1. ‘ಶೂಲಿಹಬ್ಬ’-ಬೆಂಗ್ಳೂರು ನಾಟಕೋತ್ಸವ ೨೦೧೩ರ ಅತ್ಯುತ್ತಮ ನಾಟಕರಚನಾ ಪ್ರಶಸ್ತಿ, ಬೆಂಗಳೂರು

2. ‘ಶೂಲಿಹಬ್ಬ’- ಇಂದಿರಾ ವಾಣಿರಾವ್ ದತ್ತಿನಿಧಿ ಪ್ರಶಸ್ತಿ-೨೦೧೫, ಕರ‍್ನಾಟಕ ಲೇಖಕಿಯರ ಸಂಘ,

ಬೆಂಗಳೂರು

3. ‘ಅರ್ಧಕಥಾನಕ’-ಪುಸ್ತಕ ಬಹುಮಾನ-೨೦೧೬,ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು

4. ‘ಕನ್ನಡ ಮ್ಯಾಕ್ ಬೆತ್ ಗಳು’- ಸೂ.ವೆ.ಆರಗಂ ವಿರ‍್ಶಾಪ್ರಶಸ್ತಿ-೨೦೧೯ಬಿಎಂಶ್ರೀ ಪ್ರತಿಷ್ಠಾನ, ಬೆಂಗಳೂರು

5. ‘ಕನ್ನಡ ಮ್ಯಾಕ್ ಬೆತ್ ಗಳು’ – ಪಿ. ಶ್ರೀನಿವಾಸ ರಾವ್ ದತ್ತಿನಿಧಿ ಪ್ರಶಸ್ತಿ- ೨೦೧೯ ಕರ‍್ನಾಟಕ ಸಾಹಿತ್ಯ

ಅಕಾಡೆಮಿ, ಬೆಂಗಳೂರು

6. ಬಾಳಬಟ್ಟೆ- ಡಾ. ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತ್ರಿ-೨೦೨೩, ಸಮತಾ ಅಧ್ಯಯನ, ಮೈಸೂರು

ಪ್ರೊ.ಎಂ.ಜಿ.ಚಂದ್ರಶೇಖರಯ್ಯ – ಸಾಹಿತ್ಯ

ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಅವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿಯಲ್ಲಿ 1956ನೆಯ ಮಾರ್ಚ್ 11ರಂದು ಜನಿಸಿದರು. ಮಲ್ಲಪ್ಪನಹಳ್ಳಿ, ಚಿತ್ರದುರ್ಗ, ಸಿದ್ಧಗಂಗೆ, ಸಿರಿಗೆರೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ ಇವರು, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು.

ಕನ್ನಡ ಅಧ್ಯಾಪಕರಾಗಿ ಶ್ರೀ ಕೊಂಗಾಡಿಯಪ್ಪ ಕಾಲೇಜು, ದೊಡ್ಡಬಳ್ಳಾಪುರದಲ್ಲಿ 1981-2016ರವರೆಗೆ 35 ವರ್ಷ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದರು. 22 ವರ್ಷ ಎನ್ ಎಸ್ ಎಸ್ ಅಧಿಕಾರಿಯಾಗಿ ಇದೇ ಅವಧಿಯಲ್ಲಿ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2025ರ ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಕಾರ್ಯದರ್ಶಿ, ವಿಕಸನ, ಪುಸ್ತಕ ಪ್ರಕಟಣ ವಿಭಾಗ, ಆದಿಚುಂಚನಗಿರಿ ವಿಶ್ವವಿದ್ಯಾಲಯ ಇಲ್ಲಿಯವರೆಗೆ 76 (ಜೀವನ ಚರಿತ್ರೆ, ನಾಥ ಸಂಪ್ರದಾಯ ಮತ್ತು ವಿಜ್ಞಾನ ಕುರಿತು) ಪುಸ್ತಕಗಳನ್ನು ಬರೆಸಿ ಪ್ರಕಟಿಸಲಾಗಿದೆ.

ಸಂಯೋಜನಾಧಿಕಾರಿ, ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಆದಿಚುಂಚನಗಿರಿ ವಿಶ್ವವಿದ್ಯಾಲಯ

ಸದಸ್ಯ: ಅಕಾಡೆಮಿಕ್ ಕೌನ್ಸಿಲ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

ಸದಸ್ಯ: ಕನ್ನಡ ಅಧ್ಯಯನ ಮಂಡಳಿ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಸಿಎಂಆರ್ ವಿಶ್ವವಿದ್ಯಾಲಯ

ಮತ್ತು ಸೇಂಟ್ ಜೋಸೆಫ್ ಕಾಲೇಜು (ಸ್ವಾಯತ್ತ)

ಅಧ್ಯಕ್ಷ: ಕನ್ನಡ ಪರೀಕ್ಷಾ ಮಂಡಳಿ, ಬೆಂಗಳೂರು ವಿಶ್ವವಿದ್ಯಾಲಯ

ಪ್ರಕಟಿತ ಕೃತಿಗಳು:

1. ಬಸವಣ್ಣ- ಜೀವನ, ಸಾಧನೆ

2. ಬಚ್ಚಳ್ಳಿಯ ಬೆಳಕು

ಸಂಪಾದನೆ:

ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಇಪ್ಪತ್ತೆರಡು ಪಠ್ಯ ಪುಸ್ತಕಗಳು

ಕಸಾಪ:

1. ಪ್ರಾಚೀನ ಕಾವ್ಯ ಸಂಗಮ

ಕಥಾಸಂಕಲನ:

ಜೀವ ರೇಶಿಮೆ ಹುಳ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆ: ಬೆಂಗಳೂರು ಬಾಗಿನ

ಅಭಿನಂದನ ಗ್ರಂಥಗಳು:

1. ನಲ್ಲೂರು

2. ಅಂತರ್ಜಲ

3. ಕನ್ನಡ ಸೇನಾನಿ

ಶ್ರೀನಿವಾಸ ನಟೇಕರ್ ಎಸ್ – ವೈಚಾರಿಕತೆ ಮತ್ತು ರಂಗಭೂಮಿ

ಶ್ರೀನಿವಾಸ ನಟೇಕರ್ ಎಸ್ ಅವರು ಕೇರಳದಲ್ಲಿ 1960 ಮೇ 11ರಂದು ಜನಿಸಿದರು. 5ನೇ ವಯಸ್ಸಿಗೆ ಮಂಗಳೂರಿನಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭ. 5ನೇ ತರಗತಿಯಿಂದಲೇ ನರಸಿಂಹಯ್ಯನವರು ಪತ್ತೆದಾರಿ ಕಾದಂಬರಿಗಳನ್ನು ಓದುವುದರಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು, 100ಕ್ಕೂ ಹೆಚ್ಚು ಕಾದಂಬರಿಗಳನ್ನು ಓದಿ ಪೂರೈಸಿದರು. ಇದೇ ಅವಧಿಯಲ್ಲಿ ಅಸಮಾನತೆ ಏಕಿದೆ ಎಂಬ ಚಿಂತನೆ ಆರಂಭ. ಅನಂತರ ವೈಚಾರಿಕ ಲೇಖನ ಬರೆದು ಕಾಲೇಜಿನ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲು ಕೋರಿದರು. ಆದರೆ ಅದರಲ್ಲಿದ್ದ ದೇವರ ವಿಮರ್ಶೆಯನ್ನು ಮನ್ನಿಸದ ಕಾಲೇಜು ಮಂಡಳಿ ಪ್ರಕಟಿಸಲು ನಿರಾಕರಿಸಿತು. ಆಗ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದ ನಂತರ ಲೇಖನ ಪ್ರಕಟವಾಯಿತು.

ಕಾಲೇಜಿನಲ್ಲಿ ಎಸ್.ಎಫ್.ಐ. ವಿದ್ಯಾರ್ಥಿ ಸಂಘಟನೆಯಲ್ಲಿ ಸೇರ್ಪಡೆ. ದಕ್ಷಿಣ ಕನ್ನಡ ಎಸ್.ಎಫ್.ಐ. ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯಾಗಿ ರಾಜ್ಯ ಸಮಿತಿ ಸದಸ್ಯನಾಗಿ ಹಲವಾರು ಹೋರಾಟಗಳ ನೇತೃತ್ವ ವಹಿಸಿದರು. ಆ ದಿನಗಳಲ್ಲಿ ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿ ಕೊಲೆಯಾದಾಗ ಸಿಬಿಐ ತನಿಖೆಗಾಗಿ ಒತ್ತಾಯಿಸಿ ಹೋರಾಟ.

1977-80ರಲ್ಲಿ ಸಮುದಾಯ ನಾಟಕ ತಂಡದ ಸದಸ್ಯನಾಗಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. “ಬೆಲ್ಚಿ” ನಾಟಕದ ಹಲವಾರು ಪ್ರದರ್ಶನಗಳಲ್ಲಿ ಭಾಗಿ. ಬೀದಿ ನಾಟಕಗಳನ್ನು ಆಡಿದ್ದು ಮಾತ್ರವಲ್ಲದೆ ಸಮುದಾಯ ಜಾಥಾ ತಂಡದಲ್ಲಿ ರಾಜ್ಯದ ಹಳ್ಳಿಹಳ್ಳಿಗಳಿಗೂ ಸಂಚರಿಸಿದ ತಂಡದ ಸದಸ್ಯನಾಗಿ ಸಕ್ರಿಯವಾಗಿ ಭಾಗಿ.

ಉಚ್ಚಿಲ ಮತ್ತು ಎಲ್‌ಐಸಿ ಮಾಧವ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿ. 1981ರಲ್ಲಿ ಬ್ಯಾಂಕ್ ಉದ್ಯೋಗ ನಿಮಿತ್ತ ಅರಸೀಕೆರೆಗೆ ಪಯಣ. ಅರಸೀಕೆರೆಯಲ್ಲಿ ಹೆಚ್.ಆರ್.ಸ್ವಾಮಿಯವರ ಪರಿಚಯ. ಜಾವಗಲ್ ಪಕ್ಕದ ಹಳ್ಳಿಯಲ್ಲಿ ಮರದಿಂದ ಬಿದ್ದು ಸತ್ತ ಎಂದು ಮುಚ್ಚಿ ಹಾಕಿದ ಪ್ರಕರಣವನ್ನು ಕೊಲೆ ಎಂಬ ಸತ್ಯ ತಿಳಿದು ತನಿಖೆಗಾಗಿ ಒತ್ತಾಯಿಸಿ ಹೋರಾಟದಲ್ಲಿ ಭಾಗಿ. ಆ ಹಳ್ಳಿಯಿಂದ ಅರಸೀಕೆರೆ ತಹಶೀಲ್ದಾರ್ ಕಚೇರಿಗೆ ಜಾಥಾ ಮೂಲಕ ನಡೆದುಕೊಂಡು ಹೋಗಿ ಹೆಣವನ್ನು ಹೊರತೆಗೆದು ಮರುತನಿಖೆ ನಡೆಸಲು ಒತ್ತಾಯಿಸಿ ಯಶಸ್ವಿ.

ಪ್ರಗತಿಪರವಾಗಿ ಯೋಚಿಸುವ ಅರಸೀಕೆರೆಯ ಡೋಂಗ್ರೆ, ಸ್ವಾಮಿ, ರವಿಕುಮಾರ್, ಕುಮಾರ್ ಇನ್ನಿತರೆಲ್ಲಾ ಸೇರಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕ ಆರಂಭಕ್ಕೆ ಕಾರಣ. ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಪ್ರಯತ್ನವನ್ನು ಈ ತಂಡ ಮಾಡಿತು. ಈ ತಂಡದ ಪ್ರಯತ್ನದಿಂದ ವಿಜ್ಞಾನದ ವಸ್ತುಪ್ರದರ್ಶನ, ಪವಾಡ ರಹಸ್ಯ ಬಯಲು, ಸೆಮಿನಾರುಗಳ ಮೂಲಕ ವೈಜ್ಞಾನಿಕ ಚಿಂತನೆಯ ಬೀಜವನ್ನು ಹುಟ್ಟುಹಾಕಿದ್ದು ಮಾತ್ರವಲ್ಲದೇ ಜನಸಂಪರ್ಕ ಬೆಳೆಯಿತು. ಸಾಕ್ಷರತಾ ಅಂದೋಲನದಲ್ಲಿ ಸ್ವಾಮಿಯವರ ನೇತೃತ್ವದಲ್ಲಿ ಶ್ರೀನಿವಾಸ ನಟೇಕರ್ ಅವರು ಭಾಗವಹಿಸಿದರು.

‘ಸ್ನೇಹ ಕಲಾ ಸಂಪದ’ ಎನ್ನುವ ನಾಟಕದ ತಂಡವನ್ನು ಹಿರಿಯರಾದ ಸಂಗಯ್ಯನವರ ನೇತೃತ್ವದಲ್ಲಿ ಪ್ರಾರಂಭಿಸಿದರು. ಇದೇ ತಂಡದಿಂದ ದಂಗೆಯ ಮುಂಚಿನ ದಿನಗಳು, ಕತ್ತಲೆ ದಾರಿ ದೂರ, ಬ್ರೆಕ್ಟ್ ನಾಟಕ ಸೇರಿದಂತೆ ಹಲವಾರು ನಾಟಕಗಳ ಪ್ರದರ್ಶನ. ಮಂಗಳೂರಿನ ಮೋಹನಚಂದ್ರ ಅವರನ್ನು ಕರೆಸಿ “ಅಭಿನಯ ತರಬೇತಿ’ ಯನ್ನು ನಡೆಸಿ “ಕತ್ತಲೆ ದಾರಿ ದೂರ” ನಾಟಕವನ್ನು ಪ್ರದರ್ಶಿಸಲು ಕಾರಣರಾದರು. ಜೊತೆಗೆ ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘದ ಸಂಗಾತಿಗಳೊಂದಿಗೆ ಅವರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿ.

ಅರಸೀಕರೆಯಿಂದ ಶ್ರವಣಬೆಳಗೊಳಕ್ಕೆ ವರ್ಗವಾಗಿ ಅಲ್ಲಿ 33 ವರ್ಷ ಸೇವೆ. ಅಲ್ಲಿಯೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕ ಸ್ಥಾಪಿಸಿ ವೈಜ್ಞಾನಿಕ ಚಟುವಟಿಕೆಗಳ ಆಯೋಜನೆ. ಜೊತೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಚಟುವಟಿಕೆಯಲ್ಲಿ ಅದರಲ್ಲೂ ವಿಶೇಷವಾಗಿ ಚಿಣ್ಣರ ಮೇಳದಂತಹ ಕಾರ್ಯಕ್ರಮ ಸಂಘಟನೆಯ ನೇತೃತ್ವ. 1991-92 ರಲ್ಲಿ ಬಿಜಿವಿಎಸ್ ರಾಜ್ಯದಲ್ಲಿ ಸಂಘಟಿಸಿದ ಜಾಥಾದಲ್ಲಿ ಹಾಸನದ ನೇತೃತ್ವ ಮತ್ತು ಹಳ್ಳಿ ಹಳ್ಳಿಗೂ ಬೀದಿ ನಾಟಕ ಮಾಡಿ ಸಂಚಾರ. ಅದರಲ್ಲಿ ಗ್ಯಾರಂಟಿ ರಾಮಣ್ಣನವರ ಸಾಕ್ಷರತಾ ಹಾಡುಗಳು ರಾಜ್ಯದಾದ್ಯಂತ ಪ್ರಖ್ಯಾತವಾದವು.

‘ಕರ್ನಾಟಕ ಪರಿಷತ್ತಿನ ಬಾಲೋತ್ಸವ’ ಮಕ್ಕಳ ಯಶಸ್ವಿ ಕಾರ್ಯಕ್ರಮವನ್ನು ಶಿವರಾಮ ಕಾರಂತರು ಉದ್ಘಾಟಿಸಿದರು. ಕರಾವಿಪದ ಹಲವಾರು ಕಾರ್ಯಕ್ರಮವನ್ನು ಶ್ರವಣಬೆಳಗೊಳದಲ್ಲಿ ಸಂಘಟಿಸಿದರು. ಹಲವಾರು ‘ವರ್ಷ ಮಕ್ಕಳ ವಿಜ್ಞಾನ ಸಮಾವೇಶ’ವನ್ನು ಹಾಸನ ಜಿಲ್ಲೆಯಲ್ಲಿ ಸಂಘಟಿಸಿ ಹಲವಾರು ಮಕ್ಕಳು ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರಸೀಕರೆಯಲ್ಲಿ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ನಡೆಸಿದಾಗ ಮೌಲ್ಯ ಮಾಪನವನ್ನು ಅವುಗಳನ್ನು ಘೋಷಣೆ ಮಾಡುವ ಜವಾಬ್ದಾರಿಯನ್ನು ಶ್ರೀನಿವಾಸ ನಟೇಕ್ ಯಶಸ್ವಿಯಾಗಿ ನಿರ್ವಹಿಸಿದರು.

ಫೆಬ್ರವರಿ 28, 2024 ವಿಜ್ಞಾನ ದಿನಾಚರಣೆಯಂದು ಡಾ.ಎಚ್.ಆರ್.ಸ್ವಾಮಿ ಅವರೊಂದಿಗೆ “ವಿಚಾರ ಕ್ರಾಂತಿ” ಎಂಬ ಸಮಾವೇಶ, ಸೆಪ್ಟೆಂಬರ್ 28, 2024 ಭಗತ್‌ಸಿಂಗ್ ಜನ್ಮದಿನಾಚರಣೆಯಂದು “ನಾನೇಕೆ ನಾಸ್ತಿಕ – ಭಗತ್ ಸಿಂಗ್’ ಎಂಬ ರಾಜ್ಯಮಟ್ಟದ ಸಮಾವೇಶಗಳ ಆಯೋಜನೆ.

ಸುಮಾರು 500ಕ್ಕೂ ಹೆಚ್ಚು “ಪವಾಡ ಒಂದು ಪ್ರಾತ್ಯಕ್ಷತೆ” ಕಾರ್ಯಕ್ರಮವನ್ನು ಹಾಸನ ಜಿಲ್ಲೆಯಲ್ಲಿ ನೀಡಿದ್ದಾರೆ. ದೆಹಲಿಯಲ್ಲಿ ನಡೆದ ರೈತ ಹೋರಾಟದಲ್ಲಿ ಭಾಗಿಯಾಗಿರುವ ಶ್ರೀನಿವಾಸ ನಟೇಕರ್ ಅವರು, ಈ ದೇಶದಲ್ಲಿ ರೈತ-ದಲಿತ-ಮುಸ್ಲಿಂ-ಕ್ರೈಸ್ತ ಮತ್ತು ಪ್ರಗತಿಪರ ಬಂಧುಗಳು ಒಂದಾಗಿ ರಾಜಕೀಯ ಅಧಿಕಾರವನ್ನು ಪಡೆದಾಗ ಮಾತ್ರ ದೇಶ ಜನಪರವಾಗಿ ಬದಲಾಗುತ್ತದೆ ಎಂದು ದೃಢವಾಗಿ ನಂಬಿದ್ದಾರೆ. 2024ರಿಂದ ಮೈಸೂರಿನಲ್ಲಿ ನೆಲೆಸಿದ್ದು ವೈಜ್ಞಾನಿಕ ವಿಚಾರಧಾರೆಯ ಪರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2025ರ ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಾ.ಕೂಡ್ಲೂರು ವೆಂಕಟಪ್ಪ – ಸಾಹಿತ್ಯ, ಸಂಶೋಧನೆ

ಡಾ.ಕೂಡ್ಲೂರು ವೆಂಕಟಪ್ಪ ಅವರು ದಿನಾಂಕ 24.09.1961ರಂದು ಜನಿಸಿದರು. 1968ರಿಂದ 1975ರವರೆಗೆ ಕೂಡ್ಲೂರಿನ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ, 1975-1979 ಅವಧಿಯಲ್ಲಿ ಚನ್ನಪಟ್ಟಣದ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಿಕ್ಷಣ, 1979-1981ರವರೆಗೆ ಚನ್ನಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ, 1981-1985ರವರೆಗೆ ಕೆಂಗಲ್‌ನ ಕುವೆಂಪು ಮಹಾವಿದ್ಯಾಲಯದಲ್ಲಿ ಪದವಿ, 1985-1987ರ ಅವಧಿಯಲ್ಲಿ ಬೆಂಗಳೂರು ವಿವಿಯ ಜ್ಞಾನಭಾರತಿಯಲ್ಲಿ ಕನ್ನಡ ಎಂ.ಎ., 1998-2005ರ ಅವಧಿಯಲ್ಲಿ ‘ಕೂಡ್ಲೂರು ಒಂದು ಜಾನಪದೀಯ ಅಧ್ಯಯನ’ ಎಂಬ ವಿಷಯದ ಕುರಿತು ಡಾ.ಎಂ.ಎ.ಜಯಚಂದ್ರ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ., ಪದವಿ ಪಡೆದಿದ್ದಾರೆ. ಮಳವಳ್ಳಿ, ಮಂಡ್ಯ, ಕೆಎಂ ದೊಡ್ಡಿ, ಮದ್ದೂರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಎಸ್ ಎಲ್ ಎನ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಪ್ರಕಟಿತ ಕೃತಿಗಳು:

1. ಕೂಡ್ಲೂರರ ಕಥೆಗಳು – 1966 – ಕಥಾ ಸಂಕಲನ

2. ಕಲ್ಲಾಗುವ ಆಸೆ – 2007 – ಕವನ ಸಂಕಲನ

3. ಸ್ಥಳನಾಮ ವೀರರು – 2007 – ಲೇಖನ ಸಂಗ್ರಹ

4. ಸಾವು ಸಹಜವಲ್ಲವಾದರೆ – 2008 – ಕಥಾ ಸಂಕಲನ

5. ಗೊಂಬೆ ಚಿತ್ತಾರ ಮಡೆಕಡೆದೋ – 2009 – ಸಂಶೋಧನೆ

6. ಕರುಳಿನ ಬಂಧನ – 2009 – ಸಾಮಾಜಿಕ ಕಾದಂಬರಿ

7. ಪತ್ರಿಕೋಲೆಗಳು – 2009 – ಬಿಡಿ ಬರಹಗಳು

8. ಕೂಡ್ಲೂರರ ಇದುವರೆಗಿನ ಕಥೆಗಳು – 2009 – ಕಥಾ ಸಂಕಲನ

9. ಅನುರಣನ – 2010 – ಲೇಖನಗಳ ಸಂಕಲನ

10. ಮಿನುಗು ಮಿಂಚು – 2010 – ಕವನ ಸಂಕಲನ

12. ಹೂರಣ – 2011 – ವಿಮರ್ಶೆ

13. ಆತ್ಮಹತ್ಯೆಯಲ್ಲ ಕೊಲೆ – 2012 – ಪತ್ತೆದಾರಿ ಕಾದಂಬರಿ

14. ಕರಿಚಲ್ಲಮ್ಮ ಮತ್ತು ಇತರ ಕಥನ ಗೀತೆಗಳು – 2013 – ಜಾನಪದ

15. ಆಗದ ಚಿಕ್ಕೆ ನಾಯಕ್ಸಾನಿ ಮತ್ತು ಇತರ ಕಥೆಗಳು – 2013 – ಜಾನಪದ

16. ಚರ‍್ಕುಳ್ಳಿ – 2014 – ಜಾನಪದ

17. ಗ್ರಂಥಾಂರಂಗ – 2015 – ವಿಮರ್ಶೆ

18. ಕೆ.ಪಿ.ಪೂರ್ಣಚಂದ್ರ ತೇಜಸ್ವಿ – 2015 – ವ್ಯಕ್ತಿಚಿತ್ರ

ಜೊತೆಗೆ ಸುಮಾರು 20 ಕೃತಿಗಳನ್ನು ಸಂಪಾದಿಸಿದ್ದು, ಇವರ ಕಥೆ, ಕಾದಂಬರಿಗಳು ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣ ಬರಹಗಾರರಾಗಿ, ವಿವಿಧ ಸಂಸ್ಥೆಗಳ ಸದಸ್ಯರು, ಕಾರ್ಯದರ್ಶಿ ಸೇರಿದಂತೆ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ನಾಟಕಗಳಲ್ಲಿ ಕೂಡ ಅಭಿನಯಿಸಿರುವ ಇವರು, ಪಿಎಚ್.ಡಿ., ಮತ್ತು ಎಂ.ಫಿಲ್., ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೂಡ ಸೇವೆ ಸಲ್ಲಿಸಿದ್ದು, ಸಾಹಿತ್ಯ, ಸಂಶೋಧನೆ, ರಂಗಭೂಮಿ, ಅಧ್ಯಯನ, ಬೋಧನೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 2025ರ ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟಿ.ನಾರಾಯಣ್ ಚಿತ್ರಕಲೆ

ಟಿ.ನಾರಾಯಣ್ ಅವರು ಸ್ವಾತಂತ್ರ್ಯ ಹೋರಾಟಗಾರ ಪಿ ಎಂ ತಂಗವೇಲು ಅವರ ಮಗ. ಎಳೆಯ ವಯಸ್ಸಿನಲ್ಲೇ ಮರಳು ಚಿತ್ರಕಲೆಯ ಮೂಲಕ ಕಲಾಲೋಕಕ್ಕೆ ಅಡಿ ಇರಿಸಿದರು. ತಮ್ಮ ಆರನೇ ವಯಸ್ಸಿನಲ್ಲೆ ಮಣ್ಣು, ಬಣ್ಣಗಳನ್ನು ಬಳಸಿ ದೇವರ ಮೂರ್ತಿಗಳು ಮತ್ತು ಪ್ರಾಣಿ ಮೂರ್ತಿಗಳಿಗೆ ಜೀವತುಂಬಿದರು. ಕಲಾಮಂದಿರದ ಸುಬ್ಬರಾವ್ ಅವರ ಬಳಿ ಶಿಷ್ಯರಾಗಿ ಚಿತ್ರಕಲೆಯನ್ನು ಕರಗತ ಮಾಡಿಕೊಂಡರು. ಮುಂದಿನ ಹಂತದಲ್ಲಿ ವ್ಯಕ್ತಿಚಿತ್ರಗಳು, ತೈಲಚಿತ್ರಗಳು, ಪ್ರಕೃತಿ ಚಿತ್ರಗಳು ಇವರನ್ನು ಆಕರ್ಷಿಸಿದವು. ಇದಕ್ಕಾಗಿ ದೇಶಾದ್ಯಂತ ಸಂಚರಿಸಿ ಚಿತ್ರಕಲೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಟಿ.ನಾರಾಯಣ್ ಅವರು ಚಿತ್ರಕಲೆಯಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಭಾರತೀಯ ಮತ್ತು ಪಾಶ್ಚಾತ್ಯ ವ್ಯಕ್ತಿಚಿತ್ರಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ರಚಿಸುವಲ್ಲಿ ಇವರು ಸಿದ್ಧಹಸ್ತರು. ರಾಜಮನೆತನಗಳು, ಮಹಾಕಾವ್ಯಗಳಲ್ಲಿ ಬರುವ ಪಾತ್ರಗಳ ಚಿತ್ರಗಳಿಗೆ ತಮ್ಮ ಕುಂಚ ಮತ್ತು ಬಣ್ಣದಿಂದ ಜೀವತುಂಬಿದ್ದಾರೆ. ಇವರ ಚಿತ್ರಗಳಲ್ಲಿ ಸೂಕ್ಷ್ಮ ಗೆರೆಗಳ ಮೂಲಕ ಚಿತ್ರಗಳಲ್ಲಿರುವ ವ್ಯಕ್ತಿಗಳಿಗೆ ಜೀವತುಂಬುವುದು ಇವರ ಚಿತ್ರಕಲೆಯ ವಿಶೇಷ. ಕೇರಳದ ಪ್ರಸಿದ್ಧ ಕಲಾವಿದ ರಾಜಾ ರವಿವರ್ಮನ ಚಿತ್ರಗಳನ್ನು ಇವರ ಚಿತ್ರಗಳು ನೆನಪಿಸುತ್ತವೆ. ಕಳೆದ 40 ವರ್ಷಗಳಿಂದ ಸುಮಾರು 1500ಕ್ಕು ಹೆಚ್ಚು ಕಲಾಕೃತಿಗಳನ್ನು ಇವರು ರಚಿಸಿದ್ದಾರೆ. ಇವುಗಳಲ್ಲಿ ವ್ಯಕ್ತಿಚಿತ್ರಗಳು, ವಾಸ್ತವಾದಿ ಜೀವನ, ಇತಿಹಾಸ, ಪ್ರಕೃತಿ ಚಿತ್ರಗಳು, ಸ್ಮೃತಿ ಚಿತ್ರಗಳು, ಮೈಸೂರು ಶೈಲಿಯ ಚಿತ್ರಗಳು, ತಂಜಾವೂರು ಶೈಲಿಯ ಚಿತ್ರಗಳು, ತೈಲಚಿತ್ರಗಳು, ಆಧುನಿಕ ಚಿತ್ರಗಳು, ಜಲಚಿತ್ರಗಳು, ಪಾರಂಪರಿಕ, ಸ್ಮಾರಕ, ವಾಸ್ತುಶಿಲ್ಪ, ದೇವಸ್ಥಾನ, ಪ್ರಾಣಿ, ಕಾಡು, ಕಣಿವೆ, ಪರ್ವತ, ನದಿ, ಸ್ವಾಭಾವಿಕ ದೃಶ್ಯಗಳನ್ನು ಒಳಗೊಂಡ ವಿಸ್ತಾರ ವಿಷಯಗಳನ್ನು ತಮ್ಮ ಕ್ಯಾನ್‌ವಾಸ್‌ನ ಹಿಡಿತದಲ್ಲಿ ಪಡಿಮೂಡಿಸಿದ್ದಾರೆ. ಇವರು ತಮ್ಮ ಚಿತ್ರಗಳಲ್ಲಿ ಜನಪದ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಆಧ್ಯಾತ್ಮ, ಹಬ್ಬಗಳು, ಜನಜೀವನವನ್ನು ಕೂಡ ಮೂಡಿಸಿದ್ದಾರೆ.

ಗುಬ್ಬಿ ವೀರಣ್ಣ ಅವರ ಗುಬ್ಬಿ ಕಂಪನಿಯಲ್ಲಿ 1969ರಲ್ಲಿ ಸ್ಕ್ರೀನ್ ಆರ್ಟ್ ಕಲಾವಿದರಾಗಿ, ಓಲ್ಡ್ ಸುಜಾತ ಫಿಲ್ಮ್ ಸ್ಟುಡಿಯೋದಲ್ಲಿ, ದಯಾನಂದ ಸಾಗರ್ ಕಾಲೇಜಿನಲ್ಲಿ, ಬೆಂಗಳೂರಿನ ಕಲಾಮಂದಿರದಲ್ಲಿ(1971) ಸೇವೆ ಸಲ್ಲಿಸಿದ್ದಾರೆ. ನಾಡಿನ ವಿವಿಧೆಡೆ ಏಕವ್ಯಕ್ತಿ ಚಿತ್ರ ಪ್ರದರ್ಶನ ಸೇರಿದಂತೆ ಹಲವು ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಚಿತ್ರಗಳು ಭಾರತದ ವಿವಿಧ ರಾಜ್ಯಗಳು ಮಾತ್ರವಲ್ಲದೇ ಸಿಂಗಪುರ, ಅಮೆರಿಕ, ಕೆನಡಾ, ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರಸಿದ್ಧವಾಗಿವೆ. 2025ರ ಪ್ರೊ.ಕಿ.ರಂ.ನಾಗರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Leave a Reply