ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆ 5ಗಂಟೆಯಿಂದಲೆ ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ವೆಂಕಟೇಶ್ವರನ ದರ್ಶನ ಭಾಗ್ಯದಿಂದ ಹಾಗೂ ವೈಕುಂಠ ದ್ವಾರದ ಮೂಲಕ ಸಾಗಿದರೆ ಏಳು ಜನ್ಮದ ಪಾಪ ಪರಿಹಾರ ಮತ್ತು ಕುಟುಂಬದಲ್ಲಿ ಬರುವ ಸಂಕಷ್ಟಗಳು ದೂರವಾಗಿ ಶಾಂತಿ, ನೆಮ್ಮದ್ದಿ ಲಭಿಸುತ್ತದೆ ಶ್ರೀ ಎಂದು ನಂಬಿಕೆ ಇಟ್ಟಿರುವ ಭಕ್ತರು ಇಂದು ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು.
ಬಿ.ಟಿ.ಎಂ.ವಿಧಾನಸಭಾ ಕ್ಷೇತ್ರ: ಬಿಟಿಎಂ ವಿಧಾನಸಭಾ ಕ್ಷೇತ್ರದ, ಸುದ್ದಗುಂಟೆ ಪಾಳ್ಯ, ಶ್ರೀ ಪಾಕತೋಪು ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ 15ನೇ ವರ್ಷದ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಮಹಿಳೆಯರಿಗೆ ಬಾಗಿನ ಮತ್ತು ಸೀರೆ ವಿತರಣೆ ಹಾಗೂ ಪುರುಷರಿಗೆ ಪಂಚೆ, ಶರ್ಟು ವಿತರಿಸಲಾಯಿತು.










ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಸೌಮ್ಯರೆಡ್ಡಿ, ಕವಿತಾ ಕಲ್ಪತರು ಫೌಂಡೇಶನ್ ಸಂಸ್ಥಾಪಕರಾದ ಕವಿತಾ ಶ್ರೀನಾಥ್ ಮತ್ತು ಎಸ್.ಎಲ್.ಶ್ರೀನಾಥ್ ಸ್ಥಳೀಯ ನಿವಾಸಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ: ವೈಕುಂಠ ಏಕಾದಶಿ ಹಬ್ಬದಂದು ಕನಕಪುರ ರೋಡ್ ನಲ್ಲಿರುವ ಇಸ್ಕಾನ್ ಶ್ರೀ ರಾಜಾಧಿರಾಜ ಗೋವಿಂದ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರ ದೇವರ ವಿಶೇಷ ಅಲಂಕಾರ ಮತ್ತು ಭಕ್ತರಿಗೆ ವೈಕುಂಠ ದ್ವಾರದ ಮೂಲಕ ಸಾಗಲು ವ್ಯವಸ್ಥೆ ಮಾಡಲಾಗಿತ್ತು.
ಪೂರ್ತಿ ಸಾಲಿಗ್ರಾಮದಿಂದ ಮಾಡಿದ ಶ್ರೀ ವೆಂಕಟೇಶ್ವರ ಮೂರ್ತಿ ರಾಜ್ಯದಲ್ಲಿಯೆ ವಿಶೇಷವಾಗಿದೆ. ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು, ಬಂದ ಭಕ್ತರಿಗೆ ಲಾಡು ಪ್ರಸಾದ ವಿತರಿಸಲಾಯಿತು.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ: ಸುಬ್ರಮಣ್ಯನಗರ ವಾರ್ಡ್ ನಲ್ಲಿರುವ ಶ್ರೀ ಶ್ರೀನಿವಾಸ್ ದೇವಸ್ಥಾನ ಟ್ರಸ್ಟ್ ನಲ್ಲಿ ಶ್ರೀ ಶ್ರೀನಿವಾಸನಿಗೆ ವಿಶೇಷ ಅಲಂಕಾರ ಮತ್ತು 15ಸಾವಿರ ಲಾಡು ಪ್ರಸಾದ ಮತ್ತು 15 ಸಾವಿರ ವಿಷ್ಣುಸಹಸ್ರನಾಮ ಪುಸ್ತಕವನ್ನು ವಿತರಿಸಲಾಯಿತು.
ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ್ ಲಾಡು ವಿತರಿಸಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶ್ರೀರಾಮ ಸೇವಾ ಮಂಡಳಿ, ಶ್ರೀರಾಮಮಂದಿರದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ ಮೂರ್ತಿಗಳಿಗೆ ವಿಶೇಷ ಅಲಂಕಾರ ಹಾಗೂ ವೈಕುಂಠ ದ್ವಾರ ಹಾಗೂ ಸಾಲಿಗ್ರಾಮಕ್ಕೆ ಹಾಲಿನ ಅಭೀಷೇಕ ಮಾಡಲಾಯಿತು.
ರಾಜಾಜಿನಗರ ವಾರ್ಡ್ ಮಂಜುನಾಥನಗರ: ಶ್ರೀದೇವಿ ಭೂದೇವಿ ಸಮೇತ ರಂಗನಾಥ ಸ್ವಾಮಿ ದೇವಾಲಯದಲ್ಲಿ ಬೆಣ್ಣೆ ಅಲಂಕಾರ ಮಾಡಲಾಯಿತು , ಭಕ್ತಾದಿಗಳಿಗೆ ಪೊಂಗಲ್ ಪ್ರಸಾದ ವಿತರಿಸಲಾಯಿತು.
ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ: ಶಕ್ತಿಗಣಪತಿನಗರ ವಾರ್ಡ್ ನಲ್ಲಿರುವ ಶ್ರೀ ಬಸವಣ್ಣ ದೇವಾಲಯ ಅಭಿವೃದ್ದಿ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಶಿವ, ಪಾರ್ವತಿ ಮತ್ತು ವೆಂಕಟೇಶ್ವರ ದೇವರು ವಿಶೇಷ ಅಲಂಕಾರ ಮತ್ತು ವೈಕುಂಠ ದ್ವಾರ ಹಾಗೂ ಭಕ್ತರಿಗೆ ಪೊಂಗಲ್ ಮತ್ತು ಲಾಡು ವಿತರಿಸಲಾಯಿತು.
ಗಾಂಧಿನಗರ ವಿಧಾನಸಭಾ ಕ್ಷೇತ್ರ: ರಾಮಚಂದ್ರಪುರ ಶ್ರೀ ಪಾಂಡುರಂಗ ವಿಠ್ಠಲ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ, ಗಣಪತಿ ಮತ್ತು ಶಿರಡಿ ಸಾಯಿಬಾಬಾ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.




