#ಧರ್ಮಸ್ಥಳಫೈಲ್ಸ್
ನೂರಾರು ಹೆಣ್ಣುಮಕ್ಕಳ ನಿಗೂಢ ಸಾವುಗಳು, ಆತ್ಮಹತ್ಯೆ ಎಂಬ ಹೆಸರಿನಲ್ಲಿ ಮುಚ್ಚಿ ಹಾಕಲಾದ ವಾಸ್ತವಗಳು, ಪ್ರಭಾವಿಗಳ ಕವಚದಲ್ಲಿ ಕಾಲಕಾಲಾಂತರದಿಂದ ಮರೆಮಾಚಲ್ಪಟ್ಟ ಧರ್ಮಸ್ಥಳದ ಬೆದರಿಕೆಯ ನಡುವೆ ಇದೀಗ ಜನರ ಆಗ್ರಹಕ್ಕೆ ಜಯ ಸಿಕ್ಕಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಾಮಾಣಿಕ ನಡೆಗೆ Siddaramaiah ಅವರಿಗೂ ಸರ್ಕಾರಕ್ಕೂ ಧನ್ಯವಾದಗಳು.
ಈ ಎಸ್ಐಟಿ ತಂಡ ನಿಜಕ್ಕೂ ನ್ಯಾಯವನ್ನು ಕಂಡುಕೊಳ್ಳಲಿ, ಕಾಮಾಂಧರು ಮತ್ತು ಕೊಲೆಗಾರರು ಯಾವುದೇ ಪ್ರಭಾವವಿಲ್ಲದೆ ಶಿಕ್ಷೆಗೆ ಒಳಗಾಗಲಿ ಎಂಬುದು ನಮ್ಮ ಆಶಯ. ಆದರೆ ಈ ಹೆಜ್ಜೆ ಸಾಕಾಗದು!
ನಿಷ್ಪಕ್ಷಪಾತ ತನಿಖೆ ಖಚಿತವಾಗಬೇಕಾದರೆ ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯವರ ನೇರ ನೇತೃತ್ವದಲ್ಲಿ ಈ ತನಿಖೆ ನಡೆಯಬೇಕು. ಇಲ್ಲದಿದ್ದರೆ ಪ್ರಭಾವಿಗಳ ಒತ್ತಡದ ಅಡಿಯಲ್ಲಿ ತನಿಖೆ ದಿಕ್ಕು ತಪ್ಪುವ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ.
“ಧರ್ಮಸ್ಥಳ ಫೈಲ್ಸ್”ಗೆ ನ್ಯಾಯ ಸಿಗಬೇಕು. ಸೌಜನ್ಯ ಸೇರಿದಂತೆ ಎಲ್ಲ ಅಸಹಜ ಸಾವುಗಳಿಗೆ ನ್ಯಾಯ ದೊರಕಲೇಬೇಕು.
– ಅಪ್ಸರ್ ಕೊಡ್ಲಿಪೇಟೆ, ಪ್ರಧಾನ ಕಾರ್ಯದರ್ಶಿ ಎಸ್ ಡಿ ಪಿ ಐ




