ಧರ್ಮದ ಗುರುಗಳು ತಮ್ಮ ಧರ್ಮದವರ ಉದ್ದೇಶಿಸಿ ಮಾತನಾಡುತ್ತಾರೆ. ಇಲ್ಲಿ ಭಾರತೀಯರು ಎನ್ನುವ ಪದ ಬಳಸುವುದೇ ಇಲ್ಲ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಮಠಾಧಿಪತಿಗಳು ತಮ್ಮ ಜಾತಿಯ ಜನರನ್ನ ಉದ್ದೇಶಿಸಿ ಬಂಧುಗಳೇ ಎಂದು ಹೇಳುತ್ತಾರೆ. ಇಲ್ಲಿ ಅವರು ಭಾರತೀಯರು ಎಂದು ಹೇಳುವುದಿಲ್ಲ.
ರಾಜಕೀಯ ನಾಯಕರು ಸಾರ್ವಜನಿಕ ಸಭೆಯಲ್ಲಿ ನಮ್ಮ ಪಕ್ಷದ ಬೆಂಬಲಿಗರೇ ಎಂದು ಹೇಳುತ್ತಾರೆ. ಭಾರತೀಯರೇ ಎಂದು ಹೇಳುವುದಿಲ್ಲ.
ಹಿಂದೂ ಆದರೆ ನಾನು ಹಿಂದೂ ಎಂದು ಹೇಳುತ್ತಾರೆ, ಮುಸ್ಲಿಮರಾದರೆ ನಾನು ಮುಸ್ಲಿಂ ಎಂದು ಹೇಳುತ್ತಾರೆ, ಕ್ರಿಶ್ಚಿಯನ್ನರಾದರೆ ನಾನು ಕ್ರೈಸ್ತರ ಅನುಯಾಯಿ ಎಂದು ಹೇಳುತ್ತಾರೆ. ಆದರೆ ಒಬ್ಬ ಸೈನಿಕ ಎದುರಾದರೆ ಭಾರತ ಮಾತೆಗೆ ಜೈ ಅನ್ನುತ್ತಾರೆ. ಒಬ್ಬ ಅನ್ನದಾತ ಇದುರಾದರೆ ಅನ್ನದಾತನಿಗೆ ಜಯ ಎನ್ನುತ್ತಾರೆ. ಹೀಗಾಗಿ ಎಲ್ಲರಲ್ಲಿಯೂ ಭಾರತೀಯತೆಯನ್ನು ಮೂಡಿಸುವುದು ಒಬ್ಬ ಸೈನಿಕರಿಂದ ಒಬ್ಬ ಅನ್ನದಾತರಿಂದ.
ಕಾಯುವ ಸೈನಿಕ ಪ್ರಾಣದ ಹಂಗು ತೊರೆದು ದೇಶವ ರಕ್ಷಿಸುವ ವೇಳೆಯಲ್ಲಿ ರಕ್ಷಿಸಬೇಕಿರುವ ವ್ಯಕ್ತಿ ಮತ್ತು ಸ್ಥಳ ಯಾವುದೆಂದು ಎಣಿಸುವುದಿಲ್ಲ. ಹಾಗೆ ಹಸಿವು ನೀಗಿಸಲು ಅನ್ನ ಬೆಳೆಯುವ ರೈತ ನನ್ನ ಪಾಲಿನ ಬೆಳೆ ಯಾರ ಹೊಟ್ಟೆಗೆಂದು ಎಣಿಸುವುದಿಲ್ಲ ಹಾಗೆ ಆಸ್ಪತ್ರೆಗಳಿಗೆ ಬರುವ ವೈದ್ಯರು ಬಂದವರು ಯಾವ ಧರ್ಮದವರೆಂದು ನೋಡುವುದಿಲ್ಲ. ಹಾಗೆ ವಿದ್ಯೆ ಹೇಳಿಕೊಡುವ ಗುರುಗಳು ತನ್ನ ಬಳಿಗೆ ಬಂದವರು ಯಾವ ಪಂಗಡದವರು ಯಾವ ಧರ್ಮದವರೆಂದು ಎಣಿಸುತ್ತಿಲ್ಲ.
ಸೈನಿಕರ, ರೈತರ, ವೈದ್ಯರ, ಉಪಾಧ್ಯಾಯರುಗಳ, ವಿಜ್ಞಾನಿಗಳ ಕಣ್ಣಲ್ಲಿ ಮಾತ್ರ ಪ್ರತಿಯೊಬ್ಬರು ಭಾರತೀಯರಾಗಿರುತ್ತೇವೆ. ಆದುದರಿಂದ ಭಾರತೀಯತೆ, ಸಮಗ್ರವಾಗಿ, ಬಲಿಷ್ಠವಾಗಿ, ಸದೃಢವಾಗಿ ಇರಲು ಇವರುಗಳಷ್ಟೇ ಕಾರಣವೇ ಹೊರತು ನೆನಪಿರಲಿ ನಮ್ಮ ರಾಜಕಾರಣಿಗಳಲ್ಲ, ನಮ್ಮ ಮಠಾಧಿಪತಿಗಳಲ್ಲ, ನಮ್ಮ ಧರ್ಮ ಗುರುಗಳಲ್ಲ, ಹಸಿದ ಹೊಟ್ಟೆಯ ಮುಂದೆ ಧರ್ಮದ ಉಪದೇಶಗಳ ಮಾಡುವ ಹೊಟ್ಟೆ ತುಂಬಿದವರಿಂದಲೂ ಅಲ್ಲ,
– ಕೆ ಎಸ್ ನಾಗರಾಜ್, ಬೆಂಗಳೂರು



