ಇದು ಕರಾವಳಿಯ ಕೋಮುವಾದ ಅಪಾಯದ ಗಡಿ ದಾಟುತ್ತಿರುವ ಸಂಕೇತ. ಈ ಸಂದರ್ಭ ನಾವೆಲ್ಲರೂ ಮುನೀರ್ ಕಾಟಿಪಳ್ಳ ಜೊತೆ ನಿಲ್ಲಬೇಕಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂಬಂಧ ತಾಯಿ ಮತ್ತು ಮಗ ವೈದ್ಯಾಧಿಕಾರಿ ಜೊತೆ ವಾಗ್ವಾದ ನಡೆಸುತ್ತಾರೆ. ವೈದ್ಯರ ಜೊತೆ ನಡೆಯುವ ವಾಗ್ವಾದಗಳೆಲ್ಲವೂ ಗಲಾಟೆ, ದೊಂಬಿಗಳಲ್ಲ. ರೋಗಿಗಳ ಮನೆಯವರ ನೋವಿನ ನುಡಿಗಳೂ ಆಗಿರುತ್ತದೆ. ಆದರೆ ವಾಗ್ವಾದ ಆಸ್ಪತ್ರೆಯ ಪರಿಕರಗಳ ಮೇಲೆ ದಾಳಿಯಾಗಿ ಪರಿವರ್ತನೆಯಾದರೆ ಮಾತ್ರ ಅದು ಅಪರಾಧ. ಇಲ್ಲದೇ ಇದ್ದರೆ ರೋಗಿಯ ಮನೆಯವರ ‘ಚೊರೆ’ಯನ್ನು ವೈದ್ಯರು ಮಾತೃಹೃದಯದಿಂದ ಬಗೆಹರಿಸುತ್ತಾರೆ. ದುರಂತ ಎಂದರೆ ಪುತ್ತೂರಿನ ವೈದ್ಯಾಧಿಕಾರಿ ಜೊತೆ ವಾಗ್ವಾದ ನಡೆಸಿದ ನೋವುಂಡ ತಾಯಿ ಮಗ ಮುಸ್ಲೀಮರಾಗಿದ್ದರು !
ಇಷ್ಟಕ್ಕೆ ವೈದ್ಯರ ಸಂಘ ಪ್ರತಿಭಟನೆ ನಡೆಸಿತು. ವೈದ್ಯರ ಪ್ರತಿಭಟನೆಯಲ್ಲಿ ಸಂಘಪರಿವಾರದ ಅರುಣ್ ಪುತ್ತಿಲ ಮಾತನಾಡಿ ಪ್ರಕರಣವನ್ನು ಹಿಂದೂ ಮುಸ್ಲಿಂ ಕೋಮುವಾದದ ಘಟನೆಯನ್ನಾಗಿಸಿದರು. ವೈದ್ಯರ ಮುಂದೆ ನಿಂತಿರುವ ರೋಗಿಯೋ, ರೋಗಿಯ ಮನೆಯವರೋ ಹಿಂದೂ ಮುಸ್ಲಿಂ ಹೇಗಾಗುತ್ತಾರೆ ? ವೈದ್ಯರ ಮೇಲೆ ರೋಗಿಯ ಮನೆಯವರು ದೌರ್ಜನ್ಯ ನಡೆಸಿದ್ದರೂ ಅವರು ರೋಗಿಯ ಕುಟುಂಬಸ್ಥರು ಎನ್ನಿಸಿಕೊಳ್ಳುತ್ತಾರೆಯೇ ಹೊರತು ಮುಸ್ಲೀಮರೆಂದೋ, ಹಿಂದೂವೆಂದೋ ಅಲ್ಲ.
ಹೋರಾಟಗಾರ ಮುನೀರ್ ಕಾಟಿಪಳ್ಳ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದರು. “ವೈದ್ಯರು ಮತ್ತು ರೋಗಿಗಳ ನಡುವಿನ ಜಗಳದಲ್ಲಿ ಕೋಮುವಾದ ಯಾಕೆ ನುಸುಳಬೇಕು ? ವೈದ್ಯರ ಪ್ರತಿಭಟನೆಗೆ ಸಂಘಪರಿವಾರದ ಬಂದು ಮತೀಯ ಸಂಘರ್ಷ ಮಾಡಲು ಯತ್ನಿಸಿದ್ದು ಯಾಕೆ ?” ಎಂಬುದಷ್ಟೇ ಮುನೀರ್ ಕಾಟಿಪಳ್ಳ ಹೇಳಿಕೆಯಾಗಿತ್ತು. ಆ ಹೇಳಿಕೆಯನ್ನು ವಾರ್ತಾಭಾರತಿ ಪ್ರಕಟಿಸಿದೆ. ಇಷ್ಟಕ್ಕೆ ವೈದ್ಯರ ಸಂಘವು ಮುನೀರ್ ಕಾಟಿಪಳ್ಳ ಮತ್ತು ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಲ್ ಸಲಾಂ ಪುತ್ತಿಗೆ ವಿರುದ್ದ ಎಫ್ಐಆರ್ ದಾಖಲಿಸಿದೆ.
Karnataka Prohibition of Violence Against Medicare Service Personnel and Damage to Property in Medicare Service Institutions Act, 2009, section 3(a) ಯಂತೆ ಮುನೀರ್ ಮತ್ತು ಪುತ್ತಿಗೆಯವರ ವಿರುದ್ದ ಎಫ್ಐಆರ್ ದಾಖಲಾಗಿದೆ. ಘಟನೆ ನಡೆದ ಆಸ್ಪತ್ರೆಗೇ ಹೋಗದ, ವೈದ್ಯರನ್ನೇ ಭೇಟಿಯಾಗದ ಇವರ ಮೇಲೆ ಈ ಸೆಕ್ಷನ್ ದಾಖಲಿಸಲು ಹೇಗೆ ಸಾದ್ಯ ? ವೈದ್ಯರ ಬಗ್ಗೆಯೋ, ಆಸ್ಪತ್ರೆಯ ಬಗ್ಗೆಯೋ, ವೈದ್ಯರ ಭ್ರಷ್ಟಾಚಾರ, ಕೋಮುವಾದದ ಬಗ್ಗೆಯೋ ಹೇಳಿಕೆ ನೀಡುವುದು ವರದಿ ಪ್ರಕಟಿಸುವುದು ಈ ಕಾಯ್ದೆಯಂತೆ ಅಪರಾಧವಲ್ಲ. ವೈದ್ಯರ ಕೋಮುವಾದವನ್ನು ಖಂಡಿಸುವುದು ‘ವೈದ್ಯೋಪಚಾರ ಸಿಬ್ಬಂದಿಯ ಆಸ್ತಿಪಾಸ್ತಿಯ ಹಾನಿ ತಡೆ ಅಧಿನಿಯಮ’ದ ಅಡಿಯಲ್ಲಿ ಹೇಗೆ ಅಪರಾಧವಾಗುತ್ತದೆ ?
ದೇಶ ದೇಶಗಳ ಯುದ್ದದ ಸಂದರ್ಭದಲ್ಲೂ ವೈದ್ಯರುಗಳು ರೋಗಿಯನ್ನು ದೇಶಿಯೋ, ವಿದೇಶಿಯೋ, ಸ್ವಧರ್ಮಿಯನೋ, ಅನ್ಯ ಧರ್ಮಿಯನೋ ಎಂದು ನೋಡುವುದಿಲ್ಲ. ಹಾಗಿರುವಾಗ ವೈದ್ಯರು ರೋಗಿಯ ಧರ್ಮ ನೋಡುವ ಸ್ಥಿತಿ ಕರಾವಳಿಯಲ್ಲಿ ಇದೆ ಎಂದಾದರೆ ಅದು ಅಪಾಯದ ಗಂಟೆಯಾಗಿದೆ. ಹಾಗಾಗಿ ನಾವು ಮುನೀರ್ ಕಾಟಿಪಳ್ಳ ಜೊತೆ ಎಲ್ಲಾ ನಿಲ್ಲಬೇಕಿದೆ.
– ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು



