ಬೆಂಗಳೂರು: ರಾಜಾಜಿನಗರ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ದಯಾನಂದನಗರ ವಾರ್ಡ್ ಭಾಷ್ಯಂ ನಗರ, ಗಂಗಮ್ಮ ದೇವಸ್ಥಾನ ಮುಂಭಾಗದಲ್ಲಿ ಸೆಪ್ಟೆಂಬರ್ 17 ಪ್ರಧಾನಿ ನರೇಂದ್ರಮೋದಿ ರವರ 75ನೇ ಹುಟ್ಟುಹಬ್ಬದ ದಿನದಿಂದ ಮಧ್ಯಾಹ್ನ ಅನ್ನ ಸಂತರ್ಪಣಾ ಕಾರ್ಯಕ್ರಮ ಪ್ರಾರಂಭಿಸಿ 75ದಿನಗಳ ಕಾಲ ತುಂಬಿದ ಸಂದರ್ಭದಲ್ಲಿ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಾಜಿ ಶಿಕ್ಷಣ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್, ಮಂಡಲ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್.ಸಂಜಯ್ ಕುಮಾರ್ ಮತ್ತು ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಮುನಿರಾಜು, ಶಕೀಲ ಮುನಿರಾಜು ಭಾಗವಹಿಸಿ ಪೌರ ಕಾರ್ಮಿಕರು, ಹಿರಿಯ ನಾಗರಿಕರು ಮತ್ತು ಮಕ್ಕಳು, ಮಹಿಳೆಯರಿಗೆ ಕೇಸರಿಬಾತ್ ಮತ್ತು ಪಲಾವ್ ಬಡಿಸಿದರು.
ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ಮಾತನಾಡಿ, ಬಿಜೆಪಿ ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರಮೋದಿರವರ ಹುಟ್ಟುಹಬ್ಬದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರಾಜಾಜಿನಗರ ಮಂಡಲ ಯುವ ಮೋರ್ಚಾ ವತಿಯಿಂದ ವಿಶೇಷವಾಗಿ ಹಸಿದವರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ ಸತತ 75 ದಿನಗಳ ಕಾಲ ಈ ಕಾರ್ಯಕ್ರಮ ನೇರವೆರಿದೆ ಎಂದರು.
ಪ್ರಧಾನಿ ನರೇಂದ್ರಮೋದಿರವರು ದೇಶದ ಜನರು ಹೆಮ್ಮೆ ಪಡುವ ವ್ಯಕ್ತಿತ್ವದವರು. ರಷ್ಯಾ ಅಧ್ಯಕ್ಷ ಪುಟಿನ್ ರವರು ಭಾರತಕ್ಕೆ ಬಂದಾಗ ಎಲ್ಲ ಪ್ರೋಟೋಕಾಲ್ ಬದಿಗಿಟ್ಟು ವಿಮಾನ ನಿಲ್ದಾಣಕ್ಕೆ ಹೋಗಿ ಬರಮಾಡಿಕೊಂಡರು. ಇಡಿ ವಿಶ್ವವೇ ಭಾರತ, ರಷ್ಯಾ ಸ್ನೇಹ, ಸಂಬಂಧ ಕುರಿತು ಕೌತುಕದಿಂದ ನೋಡುತ್ತಿದೆ. ನಮ್ಮ ದೇಶಕ್ಕೆ ಇಂತಹ ಬಲಿಷ್ಠ ಪ್ರಧಾನಿ ನರೇಂದ್ರಮೋದಿರವರು ಇರುವುದರಿಂದ ಎಂತಹ ಸಂಕಷ್ಟ ಬಂದರು ಧೈರ್ಯ, ಆತ್ಮಸ್ಥೈರ್ಯದಿಂದ ಎದುರಿಸಬಹುದು ಎಂದರು.
ಮಂಡಲ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ದಯಾನಂದನಗರ ವಾರ್ಡ್ ಬಿಜೆಪಿ ಪ್ರಮುಖ ಮುಖಂಡರು ಉಪಸ್ಥಿತಿದ್ದರು.




