ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಶಾಸಕ, ವಸತಿ ಸಚಿವ ವಿ.ಸೋಮಣ್ಣರವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ವಿಜಯನಗರದಲ್ಲಿ ಸಚಿವರ ನಿವಾಸದಲ್ಲಿ ಆಚರಿಸಿದರು .
ಸಚಿವ ವಿ.ಸೋಮಣ್ಣ ಮತ್ತು ಪತ್ನಿ ಶೈಲಜಾ ಸೋಮಣ್ಣರವರಿಗೆ ಮತ್ತು ಕುಟುಂಬವರ್ಗದವರಿಗೆ ಶ್ರೀ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಕನಕಪುರ ದೇಗುಲಮಠ ಮರಳಗಾವಿ ಮಠದ ಚನ್ನಬಸವ ಸ್ವಾಮೀಜಿರವರು ಮರಳದೇವಿ ಮಠದ ಮುಮ್ಮಡಿ ಶಿವರುದ್ದ ಸ್ವಾಮೀಜಿಗಳು ಆಶೀರ್ವಾದ ನೀಡಿ ಸನ್ಮಾನಿಸಿದರು.
ಅಬಕಾರಿ ಸಚಿವ ಗೋಪಾಲಯ್ಯ, ಶಾಸಕರಾದ ಹರತಾಳು ಹಾಲಪ್ಪ, ಗೌರಿಶಂಕರ್, ನಾಗೇಂದ್ರ ಮತ್ತು ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ ಹಾಗೂ ಬಿ.ಬಿ.ಎಂ.ಪಿ. ಮಾಜಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ಡಾ.ಎಸ್.ರಾಜು, ದಾಸೇಗೌಡ, ಗಂಗಭೈರಯ್ಯ, ಬಾಬಿ ವೆಂಕಟೇಶ್, ವಾಗೇಶ್, ರೂಪಲಿಂಗೇಶ್ವರ್ ಮತ್ತು ಬಿ.ಜೆ.ಪಿ. ಮುಖಂಡರಾದ ರಾಮಪ್ಪ, ನಂಜಪ್ಪ, ಹೆಚ್.ರಮೇಶ್, ಗೋವಿಂದರಾಜನಗರ, ವಿಜಯನಗರದ ಬಿ.ಜೆ.ಪಿ. ಮುಖಂಡರು, ಕಾರ್ಯಕರ್ತರು ಆಗಮಿಸಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ವಿ.ಸೋಮಣ್ಣ, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿರವರು, ಆದಿಚುಂಚನಗಿರಿ ಮಠ ಬಾಲಗಂಗಾಥರನಾಥ ಸ್ವಾಮೀಜಿಗಳ ಮಾರ್ಗದರ್ಶನ ಆಶೀರ್ವಾದದ ಪುಣ್ಯ ಫಲ ಮತ್ತು ಕಳೆದ 38 ವರ್ಷಗಳಿಂದ ನನ್ನ ಸಮಾಜಸೇವೆ, ರಾಜಕೀಯ ಸೇವೆಯನ್ನ ಬೆನ್ನುತಟ್ಟಿ ಪೋತ್ಸಾಹಿಸುತ್ತಿರುವ ನಮ್ಮ ಕ್ಷೇತ್ರದ ಜನರ ಸಹಕಾರದಿಂದ ನಾನು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಬಡವರಿಗೆ ಐದು ಅಂಶಗಳಾದ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಮತ್ತು ಉದ್ಯೋಗ ಪ್ರತಿಯೊಬ್ಬ ಬಡವರಿಗೆ ಸಿಗಬೇಕು ಎಂಬ ಆಶಯ ನನ್ನದು. ಆ ನಿಟ್ಟಿನಲ್ಲಿ ಕರ್ನಾಟಕ ವಸತಿ ಇಲಾಖೆಯಲ್ಲಿ ಬಡವರಿಗೆ, ಅಲೆಮಾರಿ, ಕಾಡುಗೊಲ್ಲ ಹಲವಾರು ಸಮುದಾಯಕ್ಕೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ವಿ.ಸೋಮಣ್ಣ ಹುಟ್ಟುಹಬ್ಬದ ಪ್ರಯುಕ್ತ ಮಹಿಳೆಯರಿಗೆ 3000 ಸೀರೆ ವಿತರಣೆ ಮಾಡಲಾಯಿತು. ವಿಜಯನಗರ, ಗಾಂಧಿ ಪಾರ್ಕ್ ಆಟದ ಮೈದಾನದಲ್ಲಿ ವಿ.ಸೋಮಣ್ಣ 70ನೇ ಹುಟ್ಟುಹಬ್ಬದ ಶುಭಾ ಸಂದರ್ಭದಲ್ಲಿ ಅತ್ತಿಗುಪ್ಪೆ ವಾರ್ಡ್ ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಡಾ.ಎಸ್.ರಾಜು ನೇತೃತ್ವದಲ್ಲಿ ಮಹಿಳೆಯರು ಮತ್ತು ಪೌರ ಕಾರ್ಮಿಕರಿಗೆ ಉಚಿತವಾಗಿ ಸೀರೆಗಳನ್ನು ವಿತರಿಸಿದರು.
ಡಾ.ಎಸ್.ರಾಜುರವರು ಮಾತನಾಡಿ, ಅಜಾತಶತ್ರು, ಜಾತ್ಯತೀತ ನಾಯಕ, ವಸತಿ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ವಸತಿ ಸಚಿವ ವಿ.ಸೋಮಣ್ಣರವರು ತಮ್ಮ ರಾಜಕೀಯ ಅನುಭವದಲ್ಲಿ ಸಾವಿರಾರು ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸಿ, ಅವರನ್ನ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಗೋವಿಂದರಾಜನಗರ, ವಿಜಯನಗರ ವಿಧಾನಸಭಾ ಕ್ಷೇತ್ರ ಇಷ್ಟು ಅಭಿವೃದ್ದಿಯಾಗಲು ವಿ.ಸೋಮಣ್ಣರವರ ದೂರದೃಷ್ಟಿ ಚಿಂತನೆ ಕಾರಣ. ಬಡವರ ಪರ ಧ್ವನಿಯಾಗಿರುವ ವಿ.ಸೋಮಣ್ಣರವರು ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚು ಸೇವೆ ಮಾಡಲಿ ,ಉನ್ನತ ಸ್ಥಾನಮಾನ ಸಿಗಲಿ ಎಂದು ನಮ್ಮೆಲ್ಲರ ಹಾರೈಕೆ ಎಂದು ಹೇಳಿದರು.



