ನವೀಕರಣಗೊಂಡ ಶ್ರೀ ಆದಿಶಕ್ತಿ ದೇವಾಲಯ ಉದ್ಘಾಟಿಸಿದ ಮುಜರಾಯಿ ಸಚಿವ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ – ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಿಂದ ಜಿಬಿಎ ಕೇಂದ್ರ ಕಛೇರಿ ಅವರಣದಲ್ಲಿರುವ ಏಳು ಸುತ್ತಿನಕೋಟೆ ಸಹಿತ ಶ್ರೀ ಆದಿಶಕ್ತಿ ದೇವಾಲಯದ ನವೀಕರಣ, ಜೀರ್ಣೋದ್ದಾರದ ದೇವಸ್ಥಾನ ಉದ್ಘಾಟನೆ ಮತ್ತು ದೇವತಾ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಜಯನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ನಾಗರಾಜು, ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇದೇ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, 1983ರಲ್ಲಿ ನಾನು ಪಾಲಿಕೆ ಸದಸ್ಯನಾಗಿದ್ದ ಸಂದರ್ಭದಲ್ಲಿ ಶ್ರೀ ಆದಿಶಕ್ತಿ ದೇವಾಲಯ ಶೆಡ್ ನಲ್ಲಿತ್ತು. ಜಿಬಿಎ ಅಧಿಕಾರಿ, ನೌಕರರ 2 ಕೋಟಿ ರೂ.ಗಳಿಗೂ ಅಧಿಕ ದೇಣಿಗೆ ನೀಡುವ ಮೂಲಕ ಅವರ ಸಹಕಾರದಿಂದ ದೇವಾಲಯ ನವೀಕರಣಗೊಂಡಿದೆ ಎಂದರು.
ರಾಜ್ಯದಲ್ಲಿ ಎಲ್ಲ ದೇವಾಲಯಗಳು ಭಕ್ತರಿಂದ ತುಂಬಿ ತುಳುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಸರ್ಕಾರ ಗ್ಯಾರೆಂಟಿಯ ಯೋಜನೆ ಶಕ್ತಿ ಯೋಜನೆ ಕಾರಣ. ಶಕ್ತಿ ಯೋಜನೆ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತದಿಂದ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ ಮತ್ತು ದೇವಾಲಯ ಸುತ್ತಮುತ್ತಲ ಹೂವು, ಹಣ್ಣು ಮತ್ತು ಇನ್ನಿತರೆ ವ್ಯಾಪಾರಸ್ಥರು ಆರ್ಥಿಕವಾಗಿ ಸಬಲರಾಗಿದ್ದಾರೆ ಮತ್ತು ದೇವಾಲಯದ ಅದಾಯ ಸಹ ಹೆಚ್ಚಳವಾಗಿದೆ ಎಂದರು.
ಎ.ಅಮೃತ್ ರಾಜ್ ಮಾತನಾಡಿ, ಶ್ರೀ ಆದಿಶಕ್ತಿ ದೇವಾಲಯ ಐತಿಹಾಸಿಕ ಇತಿಹಾಸವಿರುವ ದೇವಾಲಯವಾಗಿದ್ದು, ದೇವಾಲಯ ಹಳೆಯದಾಗಿ ಶಿಥಿಲಾವಸ್ಥೆಯಲ್ಲಿ ಇತ್ತು. ದೇವಸ್ಥಾನ ಆಡಳಿತ ಮಂಡಳಿಯವರು ದೇವಸ್ಥಾನ ನವೀಕರಣ ಕಾರ್ಯಕ್ಕೆ ಸಹಕಾರ ಕೋರಿದರು. ನಮ್ಮ ಸಂಘದಲ್ಲಿ ಅಧಿಕಾರಿ, ನೌಕರರು ತೀರ್ಮಾನ ಮಾಡಿ ಪ್ರತಿಯೊಬ್ಬ ನೌಕರರು ತಲಾ 1 ಸಾವಿರ ಸಂಬಳ ಕಟಾವಣೆ ಮಾಡಿ ದೇವಸ್ಥಾನ ಅಭಿವೃದ್ದಿ ಕಾರ್ಯಕ್ಕೆ ನೀಡಲಾಗಿದೆ ಎಂದರು.
ನಂತರ ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದ ಕಾರಣದಿಂದ ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ 20 ಮತ್ತು ಅಧಿಕಾರಿ, ನೌಕರರ ದೇಣಿಗೆಯಿಂದ 1.60 ಕೋಟಿ ರೂಪಾಯಿಗಳನ್ನು ದೇವಾಲಯ ಜೀರ್ಣೋದ್ಧಾರಕ್ಕೆ ವಿನಿಯೋಗಿಸಲಾಯಿತು ಎಂದರು.
ಭಾನು ಪ್ರಕಾಶ್ ಶರ್ಮಾ ಮತ್ತು 40 ಜನ ಪಂಡಿತರಿಂದ ಅಷ್ಟಮವರ್ಣ ಪೂಜಾ, ಮಹಾಗಣಪತಿ ಹೋಮ, ಪಂಚದೇವತೆಗಳಿಗೆ ಅಷ್ಟವಾರಣ ಪೂಜಾ, ನವಗ್ರಹಶಾಂತಿ ಹೋಮ, ಶನೇಶ್ವರ ಹೋಮ, ಬಲಿಹರಣ ಪೂಜಾ ಹೋಮ, ದೇವತೆಗಳಿಗೆ ಚಕ್ರ ಸ್ಥಾಪನೆ, ದುರ್ಗ ದೀಪ ನಮಸ್ಕಾರ ಮತ್ತು ಪ್ರಸಾದ ವಿನಿಯೋಗ ನೇರವೇರಿತು.








