ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 2ನೇ ಹಾವೇರಿ ಜಿಲ್ಲಾ ಸಮಾವೇಶ

11 months ago

ಹಾವೇರಿ: ಸರ್ಕಾರಿ ಹಾಸ್ಟೆಲ್ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ಹಾವೇರಿ ವತಿಯಿಂದ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ-ಕಾಲೇಜ್ ಹೊರಗುತ್ತಿಗೆ ನೌಕರರ ಕನಿಷ್ಠ ವೇತನ ಜಾರಿಗಾಗಿ, ನೇರ ವೇತನ ಪಾವತಿ, ಖಾಯಂ ನೇಮಕಾತಿಗಾಗಿ, ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾವೇರಿ ಸರ್ಕಾರಿ ನೌಕರರ ಭವನದಲ್ಲಿ 2ನೇ ಹಾವೇರಿ ಜಿಲ್ಲಾ ಸಮಾವೇಶ ನಡೆಯಿತು.

ಸಮಾವೇಶವನ್ನು ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ಬೆಂಗಳೂರು ರಾಜ್ಯ ಕಾರ್ಯದರ್ಶಿ ಕೆ.ಹನುಮೆಗೌಡ ಅವರು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತಿ ಸಹಕಾರ್ಯದರ್ಶಿ ಶಿವಲಿಂಗಪ್ಪ ವಿ,  ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಪ್ರಶಾಂತ ವರಗಪ್ಪನವರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಯವರ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಮಾತನಾಡಿದರು.

ವೇದಿಕೆಯಲ್ಲಿ ಹಿರಿಯ ಹೋರಾಟಗಾರರಾದ ರುದ್ರಪ್ಪ ಜಾಬೀನ, ರಾಜ್ಯ ಉಪಾಧ್ಯಕ್ಷರಾದ ಶಾಂತಾ ವಿ. ಗಡ್ಡಿಯವರ, ಜಿಲ್ಲಾ ಮುಖಂಡರಾದ ಎಚ್.ಎಚ್ ನದಾಫ, ಶಿವರಾಜ ಹಿತ್ಲರ್, ಶೋಭಾ ಡೊಳ್ಳೇಶ್ವರ, ಸುನೀತಾ ಬಡನಾಯ್ಕರ, ಸುನೀಲ್ ಎಲ್, ಶೇಖಪ್ಪ ಮಾಗಳಹಳ್ಳಿ, ಅನಸೂಯ ಹಿರೆತಿಮ್ಮಣ್ಣವರ, ಮಹಾಂತೇಶ ಬಳ್ಳೂಡಿ, ಮಾರುತಿ ಎಸ್, ಅಲ್ನಾಬಿ ನದಾಪ್, ರೇಖಾ ಮಾಳಗಿಮನಿ, ವೆಂಕಟೇಶ ಭಜಂತ್ರಿ, ಲಲಿತಾ ಮಿರ್ಜಿ, ಆಂಜನೇಯ ಜಾಡರ, ಪುಟ್ಟಮ್ಮ ಡಿ, ಹನಮವ್ವ, ಮಂಜುಳಾ ಯಳವಟ್ಟಿ, ಮಂಜುನಾಥ, ಪ್ರವೀಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಮೇಶ ಬುಳ್ಳಮ್ಮನವರ ನಿರ್ವಹಿಸಿದರು. ಸ್ವಾಗತವನ್ನು ಫಕ್ಕಿರೇಶ ಪೂಜಾರ ಸ್ವಾಗತಿಸಿದರು. ಲಿಂಗರಾಜ ದುರ್ಗದ ವಂದಿಸಿದರು.

Leave a Reply