ಹಕ್ಕೊತ್ತಾಯಗಳಿಗಾಗಿ ಆಗ್ರಹಿಸಿ 2ನೇ ರಾಜ್ಯ ಸಮ್ಮೇಳನ

3 years ago

ಕಲಬುರ್ಗಿ: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಕಾಲೇಜುಗಳ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳ ಹಕ್ಕೊತ್ತಾಯಗಳಿಗಾಗಿ ಆಗ್ರಹಿಸಿ 2ನೇ ರಾಜ್ಯ ಸಮ್ಮೇಳನವು ಕಲಬುರ್ಗಿಯ ಕೋಸಗಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಸಮ್ಮೇಳನವನ್ನು CITU ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ ಜಿ.ಎಸ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧು ಹೆಚ್.ಎಸ್, ಸಾಹಿತಿಗಳು, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಆರ್.ಕೆ.ಹುಡ್ಗಿ, ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೆರಾ, ಸ್ವಾಗತ ಸಮಿತಿ ಅಧ್ಯಕ್ಷ ಮೇಘರಾಜ ಕಠಾರೆ ಮಾತನಾಡಿದರು.

ವೇದಿಕೆ ಮೇಲೆ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಪುಟ್ಟಮಾದು, ಕೃಷಿ ಕೂಲಿಕಾರರ ಸಂಘದ ಮಹಿಳಾ ಉಪ ಸಮಿತಿಯ ಮಲ್ಲಮ್ಮ ಕೋಡ್ಲಿ ಇದ್ದರು. ಕ.ರಾ.ಸ.ಹಾ.ಮತ್ತು ವ.ಶಾ.ಹೊ.ನೌ. ಸಂಘದ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಭೀಮಶೇಟಿ ಯಂಪ್ಪಳ್ಳಿ ಮಾತನಾಡಿದರು. ಕ.ರಾ.ಸ.ಹಾ.ಮತ್ತು ವ.ಶಾ.ಹೊ.ನೌ. ಸಂಘದ ಜಂಟಿ ಕಾರ್ಯದರ್ಶಿ ಕೆ.ಹನುಮೇಗೌಡ ನಿರೂಪಿಸಿದರು. ಮರಡಿ ಜಂಬಯ್ಯ ನಾಯಕ ಸ್ವಾಗತಿಸಿದರು, ಹುಲುಗಪ್ಪ ಹೆಚ್.ಚಲವಾದಿ ವಂದಿಸಿದರು.

Leave a Reply