ನೀವು ಬರಬೇಕು, ಬಸವನ ತೇರು ಎಳೆಯಬೇಕು

3 years ago

ನಾನೊಮ್ಮೆ ಬಸವ ಸಿದ್ಧಾಂತವನ್ನು ಪ್ರಚುರ ಪಡಿಸುವ ಆಶೆಯಿಂದ ಬೆಂಗಳೂರಿನಲ್ಲಿರುವ ಲಿಂಗಾಯತ ಆಡಳಿತವಿರುವ ಶಾಲೆಗಳಿಗೆ ಬೆಟ್ಟಿ ನೀಡಿದ್ದೆ. ಆಗ ಅವರು ಇಡೀ ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಮಾಡಿದ್ದರು.

ಕಾರ್ಯಕ್ರಮದಲ್ಲಿ ನಾನು ಮಾತಿಗಾರಂಭಿಸಿದೆ.
“ಕಲ್ಯಾಣ ನಿಮಗೆ ಗೊತ್ತಾ?” ಎಂದೆ.
“ಗೊತ್ತು” ಎಂದರು.
“ಎಲ್ಲಿದೆ” ಎಂದೆ.
ಉತ್ತರಿಸದೆ ತಮ್ಮ ತಮ್ಮಲ್ಲಿ ಮುಖ ನೋಡಿಕೊಂಡರು.
“ಯಾಕೆ” ಎಂದೆ.
“ಕಲ್ಯಾಣ ಎಂದರೆ ಮದುವೆ ಅಲ್ವಾ”? ಎಂದು ಮರು ಪ್ರಶ್ನೆ ಎಸೆದರು.
ಇನ್ನೊಂದು ಪ್ರಶ್ನೆ ಕೇಳಿದೆ
“ನಿಮ್ಮಲಿ ಬಸವಣ್ಣನವರು ಎಷ್ಟು ಜನರಿಗೆ ಗೊತ್ತು, ಕೈಯತ್ತಿ” ಎಂದೆ. ಅಲ್ಲೊಂದು ಇಲ್ಲೊಂದು ಕೈ ಕಾಣಿಸಿದವು. ಒಂದು ಘಂಟೆ ಅವರೊಂದಿಗೆ ಚರ್ಚಿಸಿ ಖಿನ್ನತೆಯಿಂದ ಮನೆಗೆ ಬಂದೆ.

ಕರ್ನಾಟಕ ಸರಕಾರದ ಚುಕ್ಕಾಣಿ ಹಿಡಿದ ಸಮಸಮಾಜದ ಸಿದ್ಧಾಂತದ ಮುಖ್ಯಮಂತ್ರಿಗಳು “ಬಸವಣ್ಣನವರು ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿದ್ದಾರೆ.

ಅದರ ಬೆನ್ನಲ್ಲಿಯೇ ನಾವು ಅನೇಕ “ಬೇಕು” ಗಳನ್ನು ಅವರೆದುರು ಇಟ್ಟಿದ್ದೆವು. ಪರಿಶೀಲಿಸುವ ಭರವಸೆ ನೀಡಿ ಕೈ ತೊಳೆದು ಕೊಂಡಿದ್ದಾರೆ ಎನಿಸುತ್ತದೆ. ಅಳುವ ಮಗುವಿಗೆ ಮಾತ್ರ ತಾಯಿ ಆದ್ಯತೆ ನೀಡಿ ಹಾಲು ನೀಡುವಳು. ಅದರಂತೆ ನಮ್ಮದೆ ಸರಕಾರವಿದ್ದರೂ ಸಹ ನಾವು ಸುಮ್ಮನಿದ್ದರೆ ನಮ್ಮ ಹೊಟ್ಟೆ ತುಂಬಿದೆ ಎಂದು ನಮ್ಮನ್ನು ತಾತ್ಸಾರ ಮಾಡಬಹುದು. ನಮ್ಮತ್ತ ನೋಡದೆಯೂ ಇರಬಹುದು.

ನಮ್ಮ ‘ಬೇಕು’ಗಳು ಸಾಂವಿಧಾನಿಕವಾಗಿವೆ. ಮೌಡ್ಯವನ್ನು ತೊಲಗಿಸುವಂತಾಗಿವೆ. ಧರ್ಮಾತೀತ ಮತ್ತು ಜಾತ್ಯತೀತವಾಗಿವೆ. ಎಲ್ಲರ ಹಿತ ಕಾಪಾಡುವದಾಗಿವೆ. ಸಮ ಸಮಾಜದ ಕನಸಿನದಾಗಿವೆ. ಅವುಗಳನ್ನು ಸರಕಾರ ಮಾನ್ಯ ಮಾಡಲೇಬೇಕು.

ಅದಕ್ಕೂ ಮುಂಚೆ ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ. ನಾಡಿಗೆ ಇಂದು ಬಸವಣ್ಣನವರ ಸಿದ್ಧಾಂತ ಬೇಕಾಗಿದೆ. ಸಮಾಜ ಒಡೆಯುವ ಘಾತಕ ಶಕ್ತಿಗಳ ವಿರುದ್ಧ ನಿಲ್ಲಬೇಕಿದೆ. ಶರಣಸಿದ್ಧಾಂತ, ತತ್ವ, ಆದರ್ಶಗಳನ್ನು ನಮ್ಮ ಯುವ ಜನತೆ ಅರಿಯಬೇಕಾಗಿದೆ.

ಸಮಾನ ಮನಸ್ಕ ಸ್ನೇಹಿತರೆಲ್ಲರೂ ಸೇರಿ ಒಂದು ದಿನದ ಕಮ್ಮಟ ಏರ್ಪಡಿಸಿದ್ದೇವೆ. ‘ಗಣ್ಯರು’ ಮತ್ತು ‘ತಿಳಿದವರು’ ಹೇಳುವರು. ಕೇಳಲು ನೀವಿರಬೇಕು. ಬರುತ್ತೀರಾ? ಇದೆ ತಿಂಗಳ ೧೮ ಕ್ಕೆ ಗಾಂಧಿ ಭವನಕ್ಕೆ ಬನ್ನಿ. ಶರಣು.

  • ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply