ಕೊಹ್ಲಿ ಬೆನ್ನಿಗೆ ನಿಲ್ಲುವ ಮಾತುಗಳು ಬಂದದ್ದು ಟೀಮ್ ಪಾಕಿಸ್ತಾನದ ಆಟಗಾರರಿಂದ

3 years ago

#words #stand #behind #Kohli #came #players #Team #Pakistan #klchandrashekharaijur

ನಿಮಗೆಲ್ಲಾ ಗೊತ್ತೇ ಇದೆ, ಒಂದೆರಡು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಸತತ ವೈಫಲ್ಯಕ್ಕೀಡಾಗಿದ್ದು, ಟೀಮ್ ಇಂಡಿಯಾದ ನಾಯಕತ್ವ ಕಳೆದುಕೊಂಡದ್ದು. ಅಮಿತ್ ಷಾ ಮತ್ತವನ ಮಗ BCCIಗೆ ಒಕ್ಕರಿಸಿದ್ದೇ ತಡ ಇಡೀ BCCI ತಾಲ್ಲೂಕು ಮಟ್ಟದ ಬಿಜೆಪಿಯ ಪುಡಿ ಕಛೇರಿಯಂತಾಗಿ ಹೋಗಿತ್ತು.

ಮೈದಾನದ ಹೊರಗೂ ಒಳಗೂ ವಿರಾಟ್ ಕೊಹ್ಲಿ ಅವಮಾನಕ್ಕೂ, ಸತತ ವೈಫಲ್ಯಕ್ಕೂ ತುತ್ತಾಗಬೇಕಾಯಿತು. ನಾಯಕತ್ವ ಕಿತ್ತುಕೊಂಡ BCCI ಕೊಹ್ಲಿ ವೈಫಲ್ಯದ ಕಾರಣ ಒಡ್ಡಿ ತಂಡದಿಂದಲೂ ಕೈಬಿಡುವ ತೀರ್ಮಾನಕ್ಕೆ ಬಂತು. ಒಂದೆಡೆ ನಿತ್ಯ ಟ್ರೋಲರ್’ಗಳ ದಾಳಿಗೂ ಕೊಹ್ಲಿ ಗುರಿಯಾದ. ಇವತ್ತಿಗೂ ಟೀಮ್ ಇಂಡಿಯಾದೊಳಗೆ ಅಮಿತ್ ಷಾ ಬಣದ್ದೇ ಮೈಲುಗೈ ಸಾಧಿಸುವುದನ್ನು ಸುಲಭವಾಗಿ ಕಾಣಬಹುದು. ಅದರ vulgar displayಯನ್ನು IPLನಲ್ಲಿ ಢಾಳಾಗಿ ನೋಡಬಹುದು.

ಕೊಹ್ಲಿ ಶಾಶ್ವತವಾಗಿ ಟೀಮ್ ಇಂಡಿಯಾದಿಂದಲೇ ನಿರ್ಗಮಿಸುವ ಒತ್ತಡಗಳು ಅಲ್ಲಲ್ಲಿ ಕಂಡುಬಂದವು. ಇಂಥ ಹೊತ್ತಲ್ಲೇ ಕೊಹ್ಲಿಪರ, ಕೊಹ್ಲಿ ಬೆನ್ನಿಗೆ ನಿಲ್ಲುವ ಮಾತುಗಳು ಬಂದದ್ದು ಟೀಮ್ ಪಾಕಿಸ್ತಾನದ ಆಟಗಾರರಿಂದ.

Babar Azam, Mohammad Rizwan ಕೊಹ್ಲಿಪರ ಸಾಲು ಸಾಲು ಬರಹಗಳನ್ನು ತಮ್ಮ Twitter, Facebook, Instagram ಅಕೌಂಟುಗಳಲ್ಲಿ ಬರೆದುಕೊಂಡರು. ಬಾಬರ್ ಆಝಮ್ ಅಂತೂ “ಮೈದಾನದ ಒಳಗೂ ಹೊರಗೂ ಕೊಹ್ಲಿ ಬಾಯ್ ನನ್ನ ಸ್ಫೂರ್ತಿ. ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಬದುಕಲ್ಲಿ ಬಂದುಹೋಗುವ ಈ ವೈಫಲ್ಯದ ಘಟ್ಟ ತಾತ್ಕಾಲಿಕ. ಕೊಹ್ಲಿ ಬಾಯ್ ಮತ್ತೆ ಪುಟಿದೇಳಲಿದ್ದಾರೆ, ತಮ್ಮ ಎಂದಿನ ಲಯಕ್ಕೆ ಮರಳಲಿದ್ದಾರೆ” ಎಂದು ತನ್ನ social media accountಗಳಲ್ಲಿ ಬರೆದುಕೊಂಡ.

ಮತ್ತೆ ತಂಡಕ್ಕೆ ಬಂದ ಕೊಹ್ಲಿ BCCIನ ಪುಡಿ ರಾಜಕೀಯವನ್ನು ಮೀರಿ ತನ್ನ ಹಳೆಯ ಲಯಕ್ಕೆ ಮರಳಿದ. ರನ್ ಬರ ನೀಗಿಸಿಕೊಂಡ. ಶತಕದ ಮೇಲೆ ಶತಕ ಸಿಡಿಸಿದ.

ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್’ಗೆ, ವಿರಾಟ್ ಕೊಹ್ಲಿಗೆ ಸಿಕ್ಕ ಅವಕಾಶಗಳು ಬಾಬರ್ ಆಝಮ್’ಗೆ ಸಿಕ್ಕಿದ್ದೇ ಆದಲ್ಲಿ ತೆಂಡೂಲ್ಕರನ ದಾಖಲೆಗಳು ಆತ ಸರಿಗಟ್ಟುವುದಂತೂ ದಿಟ.

ಪಾಕ್ ಆಟಗಾರರಿಗೆ ಮಾತಾಡಲು ಇಂಗ್ಲಿಷ್ ಬರುವುದಿಲ್ಲ ಅನ್ನುವುದನ್ನೇ ದೊಡ್ಡದು ಮಾಡುವ ವಿಕೃತರಿಗೆ ಬಾಬರ್’ನ ಮಾನವೀಯ ಮುಖಗಳು ಕಾಣುವುದೇ ಇಲ್ಲ.

ಇಂಡಿಯಾ-ಪಾಕ್ ಪಂದ್ಯವಿದೆ. ನಾನು ಕೊಹ್ಲಿಗಾಗಿ, ಬಾಬರ್’ಗಾಗಿ, ಪಾಕಿಸ್ತಾನದ ಆ ಬೌಲರ್’ಗಳಿಗಾಗಿ ಹಸಿದು ಕಾದು ಕೂತಿದ್ದೇನೆ.

– ಕೆ.ಎಲ್.ಚಂದ್ರಶೇಖರ್ ಐಜೂರ್

Leave a Reply