ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕ ವತಿಯಿಂದ 25ನೇ ದಸರಾ ಕ್ರೀಡಾಕೂಟ

2 days ago

ಮಂಗಳೂರು: ಡಿ.ವೈ.ಎಫ್.ಐ  ಜಪ್ಪಿನಮೊಗರು ಘಟಕದ ವತಿಯಿಂದ 25ನೇ ವರ್ಷದ ದಸರಾ ಕ್ರೀಡಾಕೂಟ ಎರ್ಮಾಜಾಲುಗುತ್ತು ದಿ! ಸಂಕಪ್ಪ ರೈ ಮತ್ತು ಕುಟುಂಬಸ್ಥರ ಸ್ಥಳ (ಜಪ್ಪಿನಮೊಗರು ಶಾಲಾವಠಾರ)ದಲ್ಲಿ ನಡೆಯಿತು.

ಶ್ರೀ ಪಿಲಿಚಾಮುಂಡಿ ಕ್ಷೇತ್ರ ಪಿಲಿಚಂಡಿ ಪಾದೆ ತಂದೊಳಿಗೆಯ ಅರ್ಚಕರು ಹಾಗೂ ಟ್ರಸ್ಟಿ ಕಿಶೋರ್ ಕೊಟ್ಟಾರಿಯವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕದ ಉಪಾಧ್ಯಕ್ಷ ಶಿವಾನ್ ಅಮೀನ್ ವಹಿಸಿದ್ದರು.

ಅತಿಥಿಗಳು ವಾಲಿಬಾಲ್ ಆಡುವುದರ ಮುಖಾಂತರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕೋಶಾಧಿಕಾರಿ ಅಭಿಷೇಕ್ ಸ್ವಾಗತಿಸಿದರು. ಚಿರಾಗ್ ನಾಯ್ಕ್ ವಂದಿಸಿದರು. ಪವನ್ ಸುಲಾಯ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾರಂಭದಲ್ಲಿ ಪ್ರಗತಿ ಡ್ರೈವಿಂಗ್ ಸ್ಕೂಲ್ ಮಾಲೀಕರಾದ ಜೆ. ರಾಘವ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಜಯಂತಿ ಬಿ. ಶೆಟ್ಟಿ, ಡಿ.ವೈ.ಎಫ್.ಐ. ನಗರ ಸಮಿತಿಯ ಅಧ್ಯಕ್ಷ ಚರಣ್ ಶೆಟ್ಟಿ , ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕದ ಅಧ್ಯಕ್ಷ ಜೆ.  ಹನೀಫ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಜಪ್ಪಿನಮೊಗರು ಸಂಚಾಲಕರಾದ ದಿನೇಶ್ ಶೆಟ್ಟಿ, ಭಾರತೀಯ ಜೀವ ವಿಮಾ ನಿಗಮದ ಸಾಹಿರ ಸ್ವರ್ಣಲತಾ ಡಿಸೋಜಾ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷ ಮನೋಜ್ ಶೆಟ್ಟಿ ವಹಿಸಿದ್ದರು. ಡಿ.ವೈ.ಎಫ್.ಐ.  ಜಿಲ್ಲಾ ಸಮಿತಿಯ ಅಧ್ಯಕ್ಷ ಮನೋಜ್ ವಾಮಂಜೂರು, ಆಟೋಟ್ರೇಡರ್ಸ್  ಜಪ್ಪಿನಮೊಗರು & ಗೋರಿಗುಡ್ಡ ಇದರ ಮಾಲೀಕ ದಯಾನಂದ ರಾವ್, ಉದ್ಯಮಿಗಳಾದ ರಾಕೇಶ್ ರೈ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ನಿ.ದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಕೋರ್ದಬ್ಬು ದೈವಸ್ಥಾನದ ತಾರ್ದೋಲ್ಯ ಜಪ್ಪಿನಮೊಗರು ಅಧ್ಯಕ್ಷ ಶೈಲೇಶ್ ಭಂಡಾರಿ, ಹಿಡೆನ್ ಹೆವೆನ್ ರೆಸಾರ್ಟ್ ಅಂಡ್ ಹೋಂ ಸ್ಟೇ ಜಪ್ಪಿನಮೊಗರು ಇದರ ಮಾಲಕರಾದ ಸಂತೋಷ್  ಶೆಟ್ಟಿ,  ಯುವ ಉದ್ಯಮಿ ಶೈಲೇಶ್ ಪೂಜಾರಿ ತಂದೊಳಿಗೆ, ಜಪ್ಪಿನಮೊಗರು ಯುವಕ ವೃoದದ ಅಧ್ಯಕ್ಷ ಕೃಷ್ಣ ಶೆಟ್ಟಿ, ಸಿ. ಪಿ. ಐ.(ಮ್.) ಜಪ್ಪಿನಮೊಗರು ಶಾಖೆ ಕಾರ್ಯದರ್ಶಿ ಉದಯಚಂದ್ರ ರೈ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಕ್ರೀಡಾಕೂಟದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಸ್ಥಳೀಯ ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ಹಾಗೂ ಒಳಾoಗಣ ಸ್ವರ್ಧೆಗಳಾದ ಸಂಗೀತ, ಭಾಷಣ ಮತ್ತು ಚಿತ್ರಕಲಾ ಸ್ವರ್ಧೆಗಳನ್ನು ಏರ್ಪಡಿಸಲಾಗಿತ್ತು.

ಯುವಕರಿಗೆ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಪ್ರಥಮ – ಸನ್ ಸೈನ್ ದ್ವಿತೀಯ, ಹಗ್ಗಜಗ್ಗಾಟ ಮುಕ್ತ ವಿಭಾಗದಲ್ಲಿ ಜನತಾ ವ್ಯಾಯಾಮ ಶಾಲೆ ಬಜಾಲ್ ಪ್ರಥಮ – ತಾರ್ದೋಲ್ಯ ಸೇವಾ ಸಂಘ ಜಪ್ಪಿನಮೊಗರು ದ್ವಿತೀಯ ಸ್ಥಾನ ಪಡೆದರು.

85 ಕೆಜಿ  ವಿಭಾಗದ ಹಗ್ಗಜಗ್ಗಾಟದಲ್ಲಿ ಮಲ್ಲಿಕಾರ್ಜುನ ಸೇವಾ ಸಂಘ  ಜಪ್ಪಿನಮೊಗರು ಪ್ರಥಮ – ತಾರ್ದೋಲ್ಯ ಸೇವಾ ಸಂಘ ಜಪ್ಪಿನಮೊಗರು ದ್ವಿತೀಯ ಸ್ಥಾನವನ್ನು ಗೆದ್ದುಗೊಂಡಿದೆ.

ಮಹಿಳೆಯರಿಗಾಗಿ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ ಸ್ಪರ್ತಾನ್ ಪ್ರಥಮ – ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ದ್ವಿತೀಯ, ಹಗ್ಗಜಗ್ಗಾಟದಲ್ಲಿ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಪ್ರಥಮ – ಮಲ್ಲಿಕಾರ್ಜುನ ಸೇವಾ ಸಂಘ  ಜಪ್ಪಿನಮೊಗರು ದ್ವಿತೀಯ ಸ್ಥಾನವನ್ನು ವಿಜೇತರಾದರು. ವಿಜೇತರಿಗೆ ಈ ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಈ ಸಮಾರೋಪ ಸಮಾರಂಭದಲ್ಲಿ ಘಟಕದ ಕಾರ್ಯದರ್ಶಿ ಸ್ವಸ್ತಿಕ್ ಎಸ್. ಶೆಟ್ಟಿ ಸ್ವಾಗತಿಸಿದರು. ಮಿಖಿಲ್ ಶೆಟ್ಟಿ ವಿಜೇತರಾದವರ ಹೆಸರನ್ನು ಓದಿದರು.

ಘಟಕದ ಕಾರ್ಯದರ್ಶಿ ಗಗನ್ ಪೂಜಾರಿಯವರು ಧನ್ಯವಾದವನ್ನು ಸಮರ್ಪಿಸಿ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply