ಬಾಂಗ್ಲಾ ವಿರುದ್ಧ ಗೆಲುವಿನ ನಗೆ ಬೀರಿದ ಪಾಕಿಸ್ತಾನ

3 years ago

#aisiacup #cricket #Pakistan #smile #victory #Bangladesh

ಲಾಹೋರ್: ಏಷ್ಯಾ ಕಪ್ 2023 ಪಂದ್ಯಾವಳಿಯ ಮೊದಲ ಸೂಪರ್ – 4 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 193 ರನ್ಗಳಿಗೆ ಆಲೌಟ್ ಆಯಿತು. 194 ರನ್ ಗಳ ಸುಲಭದ ಗುರಿ ಬೆನ್ನಟ್ಟಿದ ಪಾಕಿಸ್ತಾನ 63 ಎಸೆತಗಳು ಬಾಕಿ ಇರುವಂತೆಯೇ ಸುಲಭ ಗೆಲುವುದಾಖಲಿಸಿ ನಗುವಿನ ಕೇಕೆ ಹಾಕಿತು.

ಬಾಂಗ್ಲಾ ಪರ ನಾಯಕ ಶಕೀಬ್ ಅಲ್ ಹಸನ್ ಮತ್ತು ಮುಶ್ಫಿಕರ್ ರಹೀಮ್ ಅರ್ಧಶತಕ ಗಳಿಸಿ ತಂಡಕ್ಕೆ ನೆರವಾಗಲು ಯತ್ನಿಸಿದರು. ಐದನೇ ವಿಕೆಟ್ಗೆ 100 ರನ್ ಸೇರಿಸಿ ಗೌರವಾಯುತ ಮೊತ್ತ ಗಳಿಸಲು ಕಾರಣರಾದರು. ಪಾಕ್ ಪರ ಹ್ಯಾರಿಸ್ ರೌಫ್ 4, ನಸೀಮ್ ಶಾ 3 ಹಾಗೂ ಶಾಹೀನ್ ಅಫ್ರಿದಿ, ಫಹೀಮ್ ಅಶ್ರಫ್ ಮತ್ತು ಇಫ್ತಿಕರ್ ಅಹ್ಮದ್ ತಲಾ ಒಂದು ವಿಕೆಟ್ ಗಳಿಸಿ ಬಾಂಗ್ಲಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಫಖರ್ ಜಮಾನ್ ಮತ್ತು ಇಮಾಮ್-ಉಲ್-ಹಕ್ ಬ್ಯಾಟಿಂಗ್ ಬಲದಿಂದ ಜಯ ದಾಖಲಿಸಿತು. ಇಮಾಮ್-ಉಲ್-ಹಕ್ 78 ರನ್ ಸಿಡಿಸಿದರು. ಮೊಹಮ್ಮದ್ ರಿಜ್ವಾನ್ ಅವರೊಂದಿಗೆ ಮೂರನೇ ವಿಕೆಟ್ಗೆ 85 ರನ್ ಕಲೆಹಾಕಿದರು. ರಿಜ್ವಾನ್ ಅರ್ಧಶತಕ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 63 ಎಸೆತಗಳು ಬಾಕಿ ಇರುವಂತೆ ಪಾಕ್ ಜಯಿಸಿತು.

ಬಾಂಗ್ಲಾ ಪರ ತಸ್ಕಿನ್ ಅಹ್ಮದ್, ಶೋರ್ಫುಲ್ ಇಸ್ಲಾಂ, ಹಸನ್ ಮಹಮೂದ್ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ 1 ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು.

Leave a Reply