ಮೊಹಮ್ಮದ್ ಸಿರಾಜ್ ಮತ್ತೊಂದು ಕಾರಣಕ್ಕೆ ಬಹು ಇಷ್ಟವಾಗುತ್ತಾರೆ

3 years ago

#MohammadSiraj #like #reason

ಇಂದು ಅದ್ಬುತ ಬೌಲಿಂಗ್ ಪ್ರದರ್ಶನದ ಮೂಲಕ ಏಷ್ಯಾ ಕಪ್ ಫೈನಲ್ ಗೆಲ್ಲಲು ಕಾರಣರಾದ ಮೊಹಮ್ಮದ್ ಸಿರಾಜ್ ಮತ್ತೊಂದು ಕಾರಣಕ್ಕೆ ಬಹು ಇಷ್ಟವಾಗುತ್ತಾರೆ. ಅದೆಂದರೆ ತಮಗೆ ಬಹುಮಾನವಾಗಿ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಶ್ರೀಲಂಕಾದ ಮೈದಾನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡಿದ್ದಾರೆ. ಇದರಲ್ಲಿ ದೊಡ್ಡದೇನೂ ಇಲ್ಲ ಎಂದು ಹಲವರಿಗೆ ಅನಿಸಬಹುದು. ಆದರೆ ಇದು ನಿಜಕ್ಕೂ ಬಹು ದೊಡ್ಡದು..

ಸಚಿನ್, ಧೋನಿ, ಕೊಹ್ಲಿ ಈ ರೀತಿ ನೀಡಿದರೆ ದೊಡ್ಡದಲ್ಲ.. ಏಕೆಂದರೆ ಅವರು ಹಲವು ದಶಕಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಆಡಿ ದೊಡ್ಡ ಸಂಭಾವನೆ ಪಡೆದಿದ್ದಾರೆ. ಹತ್ತಾರು ಜಾಹೀರಾತುಗಳ ಮೂಲಕ ನೂರಾರು ಕೋಟಿ ರೂ ಸಂಪಾದಿಸಿದ್ದಾರೆ. ಹಾಗಾಗಿ ಅವರಿಗೆ ಅದು ದೊಡ್ಡ ಮೊತ್ತವಲ್ಲ. ಆದರೆ ಸಿರಾಜ್ ಕಡಿಮೆ ಪಂದ್ಯಗಳಾನ್ನಾಡಿದ್ದಾರೆ ಮತ್ತು ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿಲ್ಲ..

ಸಿರಾಜ್ ತಂದೆ ಸಾಮಾನ್ಯ ಆಟೋ ಡ್ರೈವರ್ ಆಗಿದ್ದವರು‌‌. ಕೆಲ ವರ್ಷಗಳ ಹಿಂದೆ ಸಿರಾಜ್ ಐಪಿಎಲ್ ನಿಂದ ಬಂದ ಹಣದಲ್ಲಿ ತಮ್ಮ ತಂದೆ ತಾಯಿಗಳಿಗೆ ಹೈದರಾಬಾದ್ ನಲ್ಲಿ ಮನೆ ಕೊಂಡು ಕೊಟ್ಟಿದ್ದರು. ಆಗ ಕೊಹ್ಲಿ ಇಡೀ ತಂಡ ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ಬಿರಿಯಾನಿ ಆತಿಥ್ಯ ಸವಿದಿದ್ದರು. ಬಡತನದಲ್ಲಿ ಬೆಳೆದು ಬಂದ, ಈಗಲೂ ದೊಡ್ಡ ಶ್ರೀಮಂತನೇನೂ ಅಲ್ಲದ ಸಿರಾಜ್ ಪಾಲಿಗೆ ಇಂದಿನ ಬಹುಮಾನ ಮೊತ್ತ ಬಹಳ ದೊಡ್ಡದೆ. ಅದನ್ನು ಕಾರ್ಮಿಕರಿಗೆ ನೀಡುವ ಮೂಲಕ ಅವರು ಮತ್ತಷ್ಟು ದೊಡ್ಡವರಾಗಿದ್ದಾರೆ. ಅವರಿಗೆ ಪ್ರೀತಿಯ ಸಲಾಂ….

– ಮುತ್ತು ರಾಜ್

Leave a Reply