ಕಳೆದ 5 ವರ್ಷಗಳಿಂದ ಕೇಂದ್ರ ಸರ್ಕಾರದಲ್ಲಿ ಅರ್ಥಸಚಿವೆಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರಿಂದ ಯಾವೊಬ್ಬ ನಾಗರೀಕನೂ ಇಂತಹ ಮೂರನೇ ದರ್ಜೆಯ ರಾಜಕಾರಣವನ್ನು ನಿರೀಕ್ಷಿಸಿರಲಿಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ದೆಹಲಿಯ ಜವಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಿರ್ಮಲಾ ಸೀತಾರಾಮನ್ ಅವರು 1947ರ ನಂತರ ಭಾರತ ಕಂಡ ಕೇಂದ್ರ ಸರ್ಕಾರದ ಅತ್ಯಂತ ಕೆಟ್ಟ ಆರ್ಥಿಕ ವ್ಯವಹಾರಗಳ ಸಚಿವೆಯಾಗಿದ್ದಾರೆ.
ಅಧಿಕಾರದ ಆಸೆಗಾಗಿ ಕಣ್ಣಮುಂದಿನ ಕಟುವಾಸ್ತವ ಸಂಗತಿಗಳನ್ನು ಮುಚ್ಚಿಟ್ಟು ಅಥವಾ ಮಾತನಾಡದೆ, ತನಗೆ ಹುದ್ದೆ ಕಲ್ಪಿಸಿಕೊಟ್ಟ ಸುಳ್ಳು ಮತ್ತು ಕಪಟತನವನ್ನು ಮನೆ ದೇವರನ್ನಾಗಿ ಮಾಡಿಕೊಂಡ ವ್ಯಕ್ತಿಯ ಆರಾಧನೆಯಲ್ಲಿ ತೊಡಗಿಕೊಂಡಿರುವ ಈ ಹೆಣ್ಣು ಮಗಳು, ಒಮ್ಮೆಯಾದರೂ ತಾನು ಕೈ ಹಿಡಿದು, ದಾಂಪತ್ಯ ಜೀವನ ನಡೆಸುತ್ತಿರುವ ತನ್ನ ಪತಿ ಹಾಗೂ ದೇಶದ ನಿಷ್ಠಾವಂತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿರುವ ಪ್ರೊ. ಪರಕಾಲ ಪ್ರಭಾಕರರಾವ್ ಅವರ ಎದೆಯ ಧ್ವನಿಗೆ ಕಿವಿಗೊಟ್ಟಿದ್ದರೆ ಸಾಕಿತ್ತು ನಿರ್ಮಲಾ ಅವರ ಸಾರ್ವಜನಿಕ ಬದುಕು ಕನಿಷ್ಠ ಘನತೆಯಿಂದ ಕೂಡಿರುತ್ತಿತ್ತು.
ಭಾರತದ ಜನತೆ ಎಂದರೆ, ರಾಮನ ಭಕ್ತರು ಮತ್ತು ಎರಡು ರೂಪಾಯಿಗಳ ಗಿರಾಕಿಗಳು ಎಂದು ಪ್ರಧಾನಿ ಹಾಗೂ ಗೃಹಸಚಿವ ಎಂಬ ವ್ಯಕ್ತಿಗಳು ನಂಬಿರುವ ರೀತಿಯಲ್ಲಿ ಈ ಹೆಣ್ಣು ಮಗಳು ನಂಬಿರುವುದು ದುರಂತ. ಭಾರತದ ನೀತಿ ಆಯೋಗಕ್ಕೆ ಮತ್ತು ರಿಸರ್ವ್ ಬ್ಯಾಂಕ್ ಇಂಡಿಯಾ ಸಂಸ್ಥೆಗೆ ಆರ್ಥಿಕ ತಜ್ಞರನ್ನು ನೇಮಕ ಮಾಡುವ ಬದಲು ತಮ್ಮ ಪಕ್ಷಕ್ಕೆ ನಿಷ್ಟಾವಂತ ಐ.ಎ.ಎಸ್. ಅಧಿಕಾರಿಗಳಾಗಿ ದುಡಿದ ನಿವೃತ್ತ ವ್ಯಕ್ತಿಗಳನ್ನು ತಂದು ಕೂರಿಸಿದಾಗ, ನಿರ್ಮಲಾ ಸೀತಾರಾಮನ್ ತಾನು ಎಂತಹ ಕತ್ತಲೆಯ ಕೂಪದಲ್ಲಿ ಆಸೀನನಾಗಿದ್ದೀನಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು.
ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗುವ ವಿಶ್ವ ಆರೋಗ್ಯ ಸಂಘಟನೆ, ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಮತ್ತು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕಿನ ವರದಿಗಳೆಲ್ಲವೂ ಭಾರತದ ಬಡತನ, ನಿರುದ್ಯೋಗ, ಮಕ್ಕಳ ಅಪೌಷ್ಟಿಕತೆ, ಮುಂತಾದ ವಿಷಯಗಳಲ್ಲಿ ಭಾರತದ ಶೋಚನೀಯ ಸ್ಥಿತಿಯನ್ನು ತೆರೆದಿಡುತ್ತಿವೆ. ಓರ್ವ ಅರ್ಥಶಾಸ್ತ್ರಜ್ಞೆಯಾಗಿ ಇವುಗಳನ್ನು ಅರ್ಥಮಾಡಿಕೊಳ್ಳುವ ಕನಿಷ್ಠ ಪ್ರಜ್ಞೆ ಇವರಿಗ ಇರಬೇಕಾಗಿತ್ತು. ಅದು ಇಲ್ಲವಾಗಿದೆ.
2014ರಲ್ಲಿ 54 ಲಕ್ಷ ಕೋಟಿ ರೂಪಾಯಿಗಳ ವಿದೇಶಿ ಸಾಲವಿದ್ದ ಭಾರತವು ಈಗ 150 ಲಕ್ಷಕ್ಕೂ ಹೆಚ್ಚಿನ ಕೋಟಿ ರೂಪಾಯಿ ಸಾಲವನ್ನು ಮಾಡಿದೆ. ಈ ಹತ್ತು ವರ್ಷಗಳಲ್ಲಿ ಪ್ರಧಾನಿ ಎಂಬ ವ್ಯಕ್ತಿ ನೂರು ಲಕ್ಷ ಕೋಟಿ ಸಾಲವನ್ನು ಮಾಡಿ ಅಭಿವೃದ್ಧಿ ಕುರಿತಂತೆ ಮಾತನಾಡುವುದು ಆತ್ಮಸಾಕ್ಷಿಗೆ ದ್ರೋಹ ಬಗೆದುಕೊಳ್ಳುವ ಸಂಗತಿಯಲ್ಲದೆ ಬೇರೇನೂ ಅಲ್ಲ. ಇಂದು ಭಾರತ ತೆರಿಗೆ ಮತ್ತು ಇತರೆ ಮೂಲಗಳಿಂದ ಸಂಪಾದಿಸುತ್ತಿರುವ ಆದಾಯದಲ್ಲಿ ಶೇಕಡಾ 21 ರಿಂದ 23 ರಷ್ಟು ಸಾಲದ ಮೊತ್ತಕ್ಕೆ ಬಡ್ಡಿಯ ರೂಪದಲ್ಲಿ ಪಾವತಿಯಾಗುತ್ತಿದೆ.
ಇಡೀ ಜಗತ್ತು ಶ್ರೇಷ್ಠ ಅರ್ಥಶಾಸ್ತ್ರಜ್ಞರು ಎಂದು ಪರಿಗಣಿಸಿದ್ದ ರಘುರಾಂ ರಾಜನ್ ಏಕೆ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆ ತೊರೆದು ಹೋದರು? ಪ್ರಧಾನಿಯವರ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣ್ಯಂ ಏಕೆ ಹುದ್ದೆ ತೊರೆದರು? ಎಂಬುದನ್ನು ಯೋಚಿಸಿದ್ದರೆ, ತಾನು ಎಂತಹವರ ಕೈ ಕೆಳಗೆ ಕಾರ್ಯನಿರ್ವಹಿಸುತ್ತಿದ್ದೀನಿ ಎಂಬುದು ನಿರ್ಮಲಾ ಸೀತಾರಾಮನ್ ಗೆ ಅರ್ಥವಾಗುತ್ತಿತ್ತು.
ಈ ದೇಶದ ಪ್ರಧಾನಿಯ ರಕ್ಷಣೆ ಮತ್ತು ಪ್ರವಾಸದ ವೆಚ್ಚಕ್ಕೆ ದಿವೊಂದಕ್ಕೆ ಸರಾಸರಿ ಏಳರಿಂದ ಹದಿಮೂರು ಕೋಟಿ ರೂಪಾಯಿ ಖರ್ಚಾಗುತ್ತಿದೆ. ಪ್ರಧಾನಿಯಾದ ವ್ಯಕ್ತಿ ದೇಶದ ಅಭಿವೃದ್ಧಿಗೆ ದೇಶ ಸುತ್ತುವುದನ್ನು ನಾವು ನೋಡಿದ್ದೆವು. ಆದರೆ, ಈ ದೇಶದ ಪ್ರಜೆಗಳ ತೆರಿಗೆ ಹಣದಲ್ಲಿ ಪಕ್ಷ ಕಟ್ಟಲು ಸುತ್ತುತ್ತಿರುವ ಇಂತಹ ಪ್ರಧಾನಿಯನ್ನು ಭಾರತ ಮಾತ್ರವಲ್ಲ, ಇಡೀ ಜಗತ್ತಿನ ಯಾವ ದೇಶವೂ ನೋಡಿರಲಿಲ್ಲ. ಈ ಕಾರಣದಿಂದಾಗಿ ನೆರೆಯ ನೇಪಾಳ, ಶ್ರೀಲಂಕಾ ಮತ್ತುಬಾಂಗ್ಲಾ ದೇಶಗಳಿಂತಲೂ ತಲಾ ಆದಾಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಭಾರತವು ಹಿಂದುಳಿದಿದೆ. ಇದು ನಾಚಿಕೆಗೇಡಿನ ಸಂಗತಿ.
ನಿನ್ನೆ ಅಂತರಾಷ್ಟ್ರೀಯ ಕಾರ್ಮಿಕರ ಒಕ್ಕೂಟ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. 2000ದಲ್ಲಿ ಶೇಕಡಾ 35.2ರಷ್ಟು ಇದ್ದ ನಿರುದ್ಯೋಗಿಗಳ ಸಂಖ್ಯೆ 2022ರಲ್ಲಿ ಶೇಕಡಾ 65.7ಕ್ಕೆ ಏರಿದೆ. ಉತ್ತರ ಪ್ರದೇಶದಲ್ಲಿ ಕನಿಷ್ಠ ಐದನೇ ತರಗತಿ ಅರ್ಹತೆ ಹೊಂದಿರುವ 62 ಮಂದಿ ಜವಾನರ ಹುದ್ದೆಗೆ 3,700 ಮಂದಿ ಪಿ.ಹೆಚ್.ಡಿ. ಪದವೀಧರರು ಮತ್ತು 28 ಸಾವಿರ ಎಂ.ಎ, ಎಂ.ಎಸ್ಸಿ ಪದವೀಧರರು ಮತ್ತು 50 ಸಾವಿರ ಮಂದಿ ಪದವೀಧರರು ಅರ್ಜಿಹಾಕಿರುವ ವಿಷಯ ಸ್ಥಳೀಯ ನ್ಯೂಸ್ ಚಾನಲ್ ನಲ್ಲಿ ಪ್ರಸಾರವಾಗಿದೆ.
ನೈಜ ಸ್ಥಿತಿಗತಿ ಈ ರೀತಿಯಲ್ಲಿ ಇರುವಾಗ ಭಾರತದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಲ್ಲಿ ಆಗಿದೆ? ಪಕೋಡ ಮಾರುವರ ಸಂಖ್ಯೆ ಅಥವಾ ಚಹಾ ಮಾರುವರ ಸಂಖ್ಯೆ ಕೂಡಾ ದ್ವಿಗುಣಗೊಂಡಿಲ್ಲ.
ಚುನಾವಣಾ ಬಾಂಡ್ ಗಳ ಕುರಿತಾಗಿ ನಿರ್ಮಲಾ ಸೀತಾರಾಮನ್ ಪತಿ ಪ್ರೊ.ಪರಕಾಲ ಪ್ರಭಾಕರ ಹೇಳಿರುವ “ಇದು ಭಾರತದ ಅತಿ ದೊಡ್ಡ ಭ್ರಷ್ಟಾಚಾರದ ಹಗರಣ ಮಾತ್ರವಲ್ಲ, ವಿಶ್ವದ ಅತಿ ದೊಡ್ಡ ಹಗರಣ” ಎಂಬ ಆತ್ಮಸಾಕ್ಷಿಯ ಮಾತನ್ನ ಗಂಭೀರವಾಗಿ ಮಂಥನ ಮಾಡಿಕೊಂಡು ಈ ಹೆಣ್ಣುಮಗಳು ರಾಜಕೀಯವನ್ನು ಈ ಕ್ಷಣದಲ್ಲಿ ತೊರೆಯುವುದು ಲೇಸು.
- ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




