ವಿದೇಶದಲ್ಲಿ ಭಾರತೀಯ ಮೂಲದವರು ಪ್ರಮುಖ ಹುದ್ದೆ ಪಡೆದರೆ ಸಂಭ್ರಮಿಸುವ ಭಾರತೀಯರ ಕೆಲವು ಮನಸ್ಸುಗಳು, ಸೋನಿಯಾ ಗಾಂಧಿಯವರ ಬಗ್ಗೆ ಮಾತ್ರ ವಿಕೃತ ಭಾವದಿಂದ ಟೀಕಿಸುತ್ತಾರೆ.
- ಸೋನಿಯಾ ಗಾಂಧಿಯವರ ಬಗ್ಗೆ ಮಾತ್ರ ವಿಕೃತ ಭಾವದ ಟೀಕೆ ಏಕೆ?
- ಏಷ್ಯಾದ ಅತಿದೊಡ್ಡ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ
- 4 ಸಾರಿಗೆ ನಿಗಮಗಳ ಹಿಂಬಾಕಿ ಪೈಕಿ 280 ಕೋಟಿ ರೂ. ಬಿಡುಗಡೆ: ಬೈರತಿ ಸುರೇಶ್
- ಕೆಪಿಎಸ್ಸಿ ಹಗರಣ: ರಂಗ ಪ್ರವೇಶಿಸಿದ ಇಡಿ
- ಬಿಜೆಪಿ ನಾಯಕರು ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅಗತ್ಯ ಅನುಮತಿ ಕೊಡಿಸಲಿ
ಭಾರತ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ಸಾಮಾಜಿಕ ಚಳವಳಿಯಲ್ಲಿ ಅನೇಕ ವಿದೇಶಿಯರು ತಮ್ಮದೇ ಆದ ಕೊಡುಗೆಗಳನ್ನು ನೀಡಿ ಸಂಪೂರ್ಣವಾಗಿ ತಮ್ಮ ಬದುಕನ್ನ ಈ ದೇಶಕ್ಕೆ ಸಮರ್ಪಿಸಿಕೊಂಡಿದ್ದಾರೆ, ಇವರಲ್ಲಿ ಸಿಸ್ಟರ್ ನಿವೇದಿತ, ಅನಿಬೆಸೆಂಟ್, ಮೀರಾ ಬೆನ್, ಸ್ವಾಮಿಯಲ್ ಇವಾನ್ ಸ್ಟ್ರೋಕ್ ಸತ್ಯಾನಂದ ಹೆಸರಿನಲ್ಲಿ, ಸಿ, ಎಫ್, ಆಂಡ್ರೋಸ್ ಧೀನ ಬಂಧು ಹೆಸರಿನಲ್ಲಿ, ಬಡವರು ಮತ್ತು ಕುಷ್ಟರೋಗಿಗಳ ಸೇವೆಯಲ್ಲಿ ಮದರ್ ತೆರೇಸಾ, ಕೆಲವು ವಿದೇಶಿ ಪತ್ರಕರ್ತರು. ಈ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ ಕೆಲವರು ಬುಡಕಟ್ಟು ಜನರ ಕಲ್ಯಾಣಕ್ಕಾಗಿ, ಆದಿವಾಸಿ ಜನಾಂಗದ ಜನರ ಕಲ್ಯಾಣಕ್ಕಾಗಿ, ಬಡವರ ಕಲ್ಯಾಣಕ್ಕಾಗಿ, ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ಸ್ವಾತಂತ್ರ ಚಳುವಳಿಯಲ್ಲಿಯೂ ಸಹ ಸಕ್ರಿಯವಾಗಿ ಪಾಲ್ಗೊಂಡು ಮಹಾತ್ಮ ಗಾಂಧೀಜಿ ರವರ ಜೊತೆ, ಜೊತೆಯಲಿ, ಹೋರಾಟ ಮಾಡಿದ್ದಾರೆ.
ಹಲವಾರು ದಶಕಗಳ ಹಿಂದೆಯೇ ಭಾರತದಲ್ಲಿ ರಾಜೀವ್ ಗಾಂಧಿ ಅವರನ್ನು ವಿವಾಹವಾಗಿ ಭಾರತಕ್ಕೆ ಬಂದು, ಭಾರತದ ಸಂಸ್ಕೃತಿ, ಆಚಾರ ವಿಚಾರಗಳಿಗೆ, ತಮ್ಮನ್ನು ಸಮರ್ಪಿಸಿಕೊಂಡು ಭಾರತೀಯರಾಗಿ ಭಾರತದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಲೋಕಸಭಾ ಸದಸ್ಯರಾಗಿ ಹಲವಾರು ಬಾರಿ ಆಯ್ಕೆಯಾಗಿ, ರಾಜ್ಯಸಭಾ ಸದಸ್ಯರಾಗಿ ಈಗ ಕರ್ತವ್ಯವನ್ನ ನಿರ್ವಹಿಸುತ್ತಿರುವ, 2004ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಶ್ರೀಮತಿ ಸೋನಿಯಾ ಗಾಂಧಿರವರು ಇಟಲಿ ದೇಶದವರು ಎನ್ನುವ ಕಾರಣಕ್ಕೆ, ಕೆಲವು ವಿಕೃತ ಮನಸ್ಸಿನ ವ್ಯಕ್ತಿತ್ವಗಳು ಸದಾಕಾಲ ಅವರನ್ನು ಟೀಕಿಸುವುದರಲ್ಲಿ ಕಾಲ ಕಳೆಯುತ್ತಾರೆ. ಆದರೆ ಇಂತಹ ವಿಕೃತ ಮನಸ್ಸುಗಳಿಗೆ ವಿದೇಶದಲ್ಲಿ ಭಾರತದ ಮೂಲದ ಕಮಲ ಹ್ಯಾರಿಸ್ ಉಪರಾಷ್ಟ್ರಪತಿಯಾದರೆ ಎಲ್ಲಿಲ್ಲದ ಆನಂದ. ಅದೇ ರೀತಿಯಲ್ಲಿ ನಮ್ಮ ದೇಶದ ಮೂಲದವರು ಎಂದು ಬ್ರಿಟನ್ ನಲ್ಲಿ ಸುನಕ್ ಪ್ರಧಾನಿಯಾದರೆ ಎಲ್ಲಿಲ್ಲದ ಸಂಭ್ರಮ. ಅದೇ ರೀತಿಯಲ್ಲಿ ಅಮೆರಿಕ, ಬ್ರಿಟನ್, ಮತ್ತು ಇತರ ದೇಶಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಚುನಾವಣೆಗಳಲ್ಲಿ ಆಯ್ಕೆಯಾದರೆ ಸಂಭ್ರಮಿಸುವಂತಹ, ಈ ಮನಸ್ಸುಗಳಿಗೆ ಹಲವಾರು ದಶಕಗಳ ಹಿಂದೆಯೇ ಈ ದೇಶದಲ್ಲಿ ಬಂದು ನೆಲೆಸಿರುವ ಶ್ರೀಮತಿ ಸೋನಿಯಾ ಗಾಂಧಿಯವರ ಬಗ್ಗೆ ಮಾತ್ರ ಅಸಹನೆ. ತನ್ನ ಪತಿಯನ್ನ ಕಳೆದುಕೊಂಡು ಈ ದೇಶದಲ್ಲಿಯೇ ಉಳಿದು ಈ ದೇಶದ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಂತಹ ಇವರ ಬಗ್ಗೆ ಪೂರ್ವಾಗ್ರಹ ಪೀಡಿತವಾದಂತ ಮಾತುಗಳು ಮತ್ತು ಟೀಕೆಗಳು ಆಡುವ ಮನಸ್ಸುಗಳ ಇಬ್ಬದಿ ನೀತಿಗೆ ಏನನ್ನಬೇಕು ತಿಳಿಯುತ್ತಿಲ್ಲ. ಯಾರು ಎಲ್ಲಿ ಹುಟ್ಟಿದ್ದಾರೆ ಎನ್ನುವುದು ಮುಖ್ಯವಲ್ಲ, ಯಾರು ಯಾವ ದೇಶಕ್ಕೆ, ಯಾವ ಸಂಸ್ಕೃತಿಗೆ, ತಮ್ಮನ್ನು ಅರ್ಪಿಸಿಕೊಂಡಿದ್ದಾರೆ, ಯಾವ ಮಣ್ಣಿಗಾಗಿ ಬದುಕುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.
ಯಾರು ಎಷ್ಟೇ ಬೊಬ್ಬೆ ಹೊಡೆದರು 2004ರಲ್ಲಿ ಸೋನಿಯಾ ಗಾಂಧಿಯವರು ಬಯಸಿದ್ದರೆ ದೇಶದ ಪ್ರಧಾನಮಂತ್ರಿ ಆಗುವುದನ್ನು ಯಾರೂ ತಡೆಯಲು ಆಗುತ್ತಿರಲಿಲ್ಲ. ಅವರು ಪ್ರಧಾನಿ ಹುದ್ದೆಯನ್ನು ತ್ಯಜಿಸುವುದರ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಕಾರಣವಾದ ಡಾ. ಮನಮೋಹನ್ ಸಿಂಗ್ ಇವರನ್ನು ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಿ, ದೇಶದ ಬಡ ಮತ್ತು ಮಧ್ಯವರ್ಗದ ಜನರ ಬದುಕನ್ನು ಬದಲಾಯಿಸಲು ಸಾಧ್ಯವಾಯಿತು. ತಮ್ಮದೇ ಆದ ಆರ್ಥಿಕ ಚಿಂತನೆಗಳ ಮೂಲಕ ಬಲಿಷ್ಠವಾದ ಆರ್ಥಿಕತೆಯನ್ನು ದೇಶಕ್ಕೆ ಕಟ್ಟಿಕೊಡುವಲ್ಲಿ ಡಾ.ಸಿಂಗ್ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




