ಬೆಂಗಳೂರು: ತಂತ್ರಜ್ಞಾನ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗಕ್ಕೆ ವೇದಿಕೆಯಾಗಲಿರುವ ಏಷ್ಯಾದ ಅತಿದೊಡ್ಡ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಟೆಕ್ ಸಮಿಟ್-ಬಿಟಿಎಸ್) 29ನೆ ಆವೃತ್ತಿ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇಂದು (ನ.17) ಆರಂಭಗೊಳ್ಳುತ್ತಿದ್ದು, ಸಿಎಂ ಡಿ.ಕೆ.ಶಿವಕುಮಾರ್, ಫ್ರಾನ್ಸ್ ನ ಇಲ್-ದೆ-ಫ್ರಾನ್ಸ್ ಪ್ರಾದೇಶಿಕ ಮಂಡಳಿಯ ಅಧ್ಯಕ್ಷೆ ವ್ಯಾಲೆರಿ ಪೆಕ್ರೆಸ್ ಚಾಲನೆ ನೀಡಲಿದ್ದಾರೆ.
- ಸೋನಿಯಾ ಗಾಂಧಿಯವರ ಬಗ್ಗೆ ಮಾತ್ರ ವಿಕೃತ ಭಾವದ ಟೀಕೆ ಏಕೆ?
- ಏಷ್ಯಾದ ಅತಿದೊಡ್ಡ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ
- 4 ಸಾರಿಗೆ ನಿಗಮಗಳ ಹಿಂಬಾಕಿ ಪೈಕಿ 280 ಕೋಟಿ ರೂ. ಬಿಡುಗಡೆ: ಬೈರತಿ ಸುರೇಶ್
- ಕೆಪಿಎಸ್ಸಿ ಹಗರಣ: ರಂಗ ಪ್ರವೇಶಿಸಿದ ಇಡಿ
- ಬಿಜೆಪಿ ನಾಯಕರು ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅಗತ್ಯ ಅನುಮತಿ ಕೊಡಿಸಲಿ
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ವಿದ್ಯುನ್ಮಾನ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಆಶಯದ ಈ ಮೂರು ದಿನಗಳ ಸಮಾವೇಶವು ನವೆಂಬರ್ 17ರಿಂದ 19ರವರೆಗೆ ನಡೆಯಲಿದೆ. ಮೈಕ್ರೊಸಾಫ್ಟ್ ಇಂಡಿಯಾ ಅಧ್ಯಕ್ಷ ಪುನೀತ್ ಚಂಡೋಕ್, ಮೈಕ್ರಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಆನಂದ್ ರಾಮಮೂರ್ತಿ, ಕರ್ನಾಟಕದ ವಿಷನ್ ಗ್ರೂಪ್ ಅಧ್ಯಕ್ಷ ಎಸ್.ಗೋಪಾಲಕೃಷ್ಣನ್ (ಕ್ರಿಸ್), ಡಾ.ಕಿರಣ್ ಮಜುಂದಾರ್ ಶಾ, ಪ್ರಶಾಂತ್ ಪ್ರಕಾಶ್ ಮತ್ತು ಡಾ.ಎ.ಎಸ್.ಕಿರಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
‘ಬೆಂಗಳೂರು ಟೆಕ್ ಸಮಿಟ್-2026’ ಜಾಗತಿಕ ತಂತ್ರಜ್ಞಾನ ವ್ಯವಸ್ಥೆ ಸಂಗಮಗೊಳ್ಳುವ ಪ್ರಮುಖ ವೇದಿಕೆಯಾಗಲಿದೆ. ವಿಶ್ವದಾದ್ಯಂತ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 700ಕ್ಕೂ ಹೆಚ್ಚು ಭಾಷಣಕಾರರು ಮತ್ತು 1,500ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಒಟ್ಟು 50,000ಕ್ಕೂ ಹೆಚ್ಚು ಜನ ಭೇಟಿ ನೀಡುವ ನಿರೀಕ್ಷೆಯಿದೆ. 16 ವಿಷಯಾಧಾರಿತ ವಿಭಾಗಗಳು ಮತ್ತು 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚು ಜ್ಞಾನಾಧಾರಿತ ಅಧಿವೇಶನಗಳು ನಡೆಯಲಿವೆ. ಸ್ವೀಡನ್-ಈ ಸಮಾವೇಶದ ಪಾಲುದಾರ ರಾಷ್ಟ್ರವಾಗಿದ್ದು, ಆಸ್ಟ್ರೇಲಿಯಾ, ಪೋಲೆಂಡ್ ಮತ್ತು ಇಟಲಿ ಬೆಂಬಲ ನೀಡುವ ದೇಶಗಳಾಗಿವೆ. ದೇಶದ 100 ನಗರಗಳಿಂದ 30ಕ್ಕೂ ಹೆಚ್ಚು ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರಗಳನ್ನು ಪ್ರತಿನಿಧಿಸುವ 1,000ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಲಿವೆ ಎಂದರು.
ಈ ವರ್ಷದ ‘ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ’ ಆಶಯ ತಂತ್ರಜ್ಞಾನ ಉದ್ಯಮ ಪ್ರವೇಶಿಸುತ್ತಿರುವ ಪರಿವರ್ತನೆಯ ಹೊಸ ಹಂತ ಹಾಗೂ ವಿವಿಧ ವಲಯಗಳಲ್ಲಿ ಕೃತಕ ಬುದ್ಧಿಮತ್ತೆಯು ಸೃಷ್ಟಿಸಲಿರುವ ವಿಪುಲ ಅವಕಾಶಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಲಿದೆ. ಜತೆಗೆ, ‘ಕೃತಕ ಬುದ್ಧಿಮತ್ತೆ, ಡೀಪ್ಟೆಕ್, ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ರೊಬೊಟಿಕ್ಸ್, ಸಾರಿಗೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಮೂರು ದಿನಗಳ ಚರ್ಚೆಗಳು, ಪ್ರದರ್ಶನಗಳು ಮತ್ತು ಸಹಯೋಗಗಳಿಗೆ ದೇಶ-ವಿದೇಶಗಳ ಸಂದರ್ಶಕರು ಸಾಕ್ಷಿಯಾಗಲಿದ್ದಾರೆ. ವಿಶೇಷ ಎಐ ಮತ್ತು ರೊಬೊಟಿಕ್ಸ್ ಪೆವಿಲಿಯನ್, ಭಾರತದ ನವೋದ್ಯಮಗಳ ನಾವೀನ್ಯತೆಗಳನ್ನು ಪರಿಚಯಿಸುವ ಭವಿಷ್ಯ ರೂಪಿಸುವವರ ಸಮಾವೇಶ, ವಿವಿಧ ದೇಶಗಳ ಪೆವಿಲಿಯನ್ಗಳು, ಹೂಡಿಕೆದಾರರ ಜೊತೆಗಿನ ಸಂವಾದ, ಉತ್ಪನ್ನಗಳ ಬಿಡುಗಡೆ, ವಿಶೇಷ ತರಬೇತಿ ಗೋಷ್ಠಿಗಳು ಹಾಗೂ ನಿರ್ದಿಷ್ಟ ಉದ್ಯಮ ವಲಯಗಳ ಚರ್ಚೆಗಳು ಸೇರಿದಂತೆ ನಾವೀನ್ಯತೆ ಪರಿಸರ ವ್ಯವಸ್ಥೆಯ ಪ್ರತಿಯೊಂದು ವಿಭಾಗಕ್ಕೂ ಈ ಸಮಾವೇಶದಲ್ಲಿ ಅವಕಾಶಗಳಿವೆ ಎಂದರು.
ಮೂರು ದಿನಗಳವರೆಗಿನ ಕಾರ್ಯಕ್ರಮಗಳು 13 ವೇದಿಕೆಗಳಲ್ಲಿ ನಡೆಯಲಿವೆ. ಬಹುವಿಷಯ ಆಧಾರಿತ ಸಮಾವೇಶ, ಜಾಗತಿಕ ನಾವೀನ್ಯತೆ ಒಕ್ಕೂಟದ ಪಾಲುದಾರರ ಜೊತೆಗಿನ ಅಂತರರಾಷ್ಟ್ರೀಯ ಸಹಭಾಗಿತ್ವ, ತಂತ್ರಜ್ಞಾನ ಬಳಕೆ ಪ್ರದರ್ಶಿಸುವ ಕೈಗಾರಿಕಾ ವಸ್ತುಪ್ರದರ್ಶನ ಹಾಗೂ ನವೋದ್ಯಮಗಳಿಗೆ ಆದ್ಯತೆ ನೀಡುವ ಭವಿಷ್ಯ ರೂಪಿಸುವವರು (ಫ್ಯೂಚರ್ ಮೇಕರ್ಸ್) ಕಾರ್ಯಕ್ರಮಗಳನ್ನು ಒಳಗೊಂಡಿವೆ. ಜತೆಗೆ, ದತ್ತಾಂಶ ಮತ್ತು ಸೈಬರ್ ಸುರಕ್ಷತೆ, ವಿಶೇಷ ನೆರವು ನೀಡುವ ತಂತ್ರಜ್ಞಾನ, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಮರುಬಳಕೆ ಆರ್ಥಿಕತೆ, ಸೃಜನಶೀಲ ಆರ್ಥಿಕತೆ. ಹಣಕಾಸು ಜಗತ್ತು, ಕೌಶಲ ಅಭಿವೃದ್ಧಿ ಮತ್ತು ಶಿಕ್ಷಣ ತಂತ್ರಜ್ಞಾನ, ಭಾರತ-ಅಮೆರಿಕ ತಂತ್ರಜ್ಞಾನ ಸಮಾವೇಶ, ಜಾಗತಿಕ ಸಹಯೋಗ ಮತ್ತು ಇಂಡಿಯಾ ಇನ್ನೋವೇಟ್ಸ್ ಸೇರಿದಂತೆ 16 ವಿಷಯಾಧಾರಿತ ವಿಭಾಗಗಳಲ್ಲಿ 120ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ನಡೆಯಲಿವೆ.




