ಜುಮುಕಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ವಿವಿಧ ತಲೆಮಾರುಗಳ ಹೆಣ್ಣುಮಕ್ಕಳ ಅಲಂಕಾರದ ಪ್ರಮುಖ ಪ್ರಾತಿನಿಧ್ಯದಲ್ಲಿ ಜುಮುಕಿ ಕೂಡ ಒಂದು. ಕಾಲದಿಂದ ಕಾಲಕ್ಕೆ ತನ್ನ ಆಕಾರ, ವಿನ್ಯಾಸದಲ್ಲಿ ಬದಲಾವಣೆ ಪಡೆದು ಸಾಗುತ್ತಿರುವ ಈ ಜುಮುಕಿ ಹೆಂಗಳೆಯರ ಆಪ್ತಸಖಿ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ

ಜುಮಕಿ ಹೆಣ್ಣಿನ ಮಾತು, ನಡಿಗೆ, ಹಾವಭಾವಕ್ಕೆ ತಕ್ಕಂತೆ ನೃತ್ಯ ಮಾಡುವ ಆಭರಣ. ಎಲ್ಲರ ಗಮನ ತನ್ನ ಕಡೆಗೆ ಕ್ಷಣಾರ್ಧದಲ್ಲಿ ಸೆಳೆದು ಬಿಡುತ್ತದೆ. ಗಂಟೆಯ ಆಕಾರದಲ್ಲಿರುವ ಜುಮಕಿ ಹೆಂಗಳೆಯರ ಎದೆಯಾ ದನಿಯಂತೆ ನೃತ್ಯ ಮಾಡುತ್ತಿರುತ್ತದೆ.

ಪ್ರಾಚೀನ ಕಾಲದಲ್ಲಿ ಪ್ರಕೃತಿಯಲ್ಲಿ ಸಿಗುತ್ತಿದ್ದ ಸ್ವಾಭಾವಿಕ ವಸ್ತುಗಳನ್ನು ಅಲಂಕಾರಕ್ಕಾಗಿ ಹೆಂಗಳೆಯರು ಬಳಸುತ್ತಿದ್ದರು. ಹೂವುಗಳು, ಮಣಿ, ಮರದ ತುಂಡುಗಳು, ಚಿಪ್ಪು, ಮೂಳೆ ಮತ್ತು ಕಲ್ಲುಗಳನ್ನು ಬಳಸಿ ಅಲಂಕಾರದ ವಸ್ತುಗಳನ್ನು ತಯಾರಿಸಿ ಬಳಸುತ್ತಿದ್ದರು. ನಂತರ ದಿನಗಳಲ್ಲಿ ಬೆಳ್ಳಿ, ಚಿನ್ನ, ಹರಳು ಮುಂತಾದ ಅಮೂಲ್ಯ ವಸ್ತುಗಳನ್ನು ಬಳಸಿ ತಯಾರಿಸುವ ಪರಿಪಾಠ ಪ್ರಾರಂಭವಾಯಿತು.

ಜುಮಕಿ ಶೈಲಿಯ ಕಿವಿಯೋಲೆಯ ಮೂಲವನ್ನು ಪುರಾತನ ಚೋಳ ದೇವಾಲಯದ ಪ್ರತಿಮೆಗಳಿಗೆ ಅಂದರೆ ಸುಮಾರು 300 BCE ಅಷ್ಟು ಹಿಂದಕ್ಕೆ ಹೋಗುತ್ತದೆ. ಸಿಂಧೂ ಕಣಿವೆ ನಾಗರಿಕತೆಯ ಅವಶೇಷಗಳಲ್ಲಿ ಮಣಿಗಳಿಂದ ಮಾಡಿದ ಆಭರಣಗಳು ದೊರೆತಿವೆ. ಹಿಂದಿನ ಕಾಲದ ವರ್ಣಚಿತ್ರಗಳು, ದೇವಾಲಯಗಳ ಶಿಲ್ಪಗಳಲ್ಲಿ ಕೂಡ ಇದರ ಇತಿಹಾಸವನ್ನು ಗುರುತಿಸಬಹುದು.

ಪ್ರಾಚೀನ ಕಾಲದಲ್ಲಿ ಆಭರಣಗಳು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಅತೀಂದ್ರಿಯ ಶಕ್ತಿಯನ್ನು ಹೊಂದಿರುತ್ತವೆ, ದುಷ್ಟಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಧರಿಸುತ್ತಿದ್ದರು. ನವರತ್ನಗಳು, ಮಣಿರತ್ನಗಳು, ಸರ್ಪಕಲ್ಲು ಮುಂತಾದವುಗಳನ್ನು ಈ ನಂಬಿಕೆಯ ಹಿನ್ನೆಲೆಯಲ್ಲಿ ಇಂದಿಗೂ ಧರಿಸುವುದನ್ನು ಕಾಣಬಹುದು. ಇದು ಮಂಗಳಕರ ಹಾಗೂ ಇದು ಉತ್ಪಾದಿಸುವ ಶಬ್ದ ದುಷ್ಟ ಶಕ್ತಿಗಳನ್ನು ದೂರವಾಗಿಸುತ್ತದೆ ಎಂದು ನಂಬಲಾಗಿದೆ.

ಜುಮಕಿ ಪದದ ಮೂಲ ಹಿಂದಿಯ ಭಾಷೆಯದ್ದಾಗಿದೆ. ಇದರ ಅರ್ಥ ಚಿಕ್ಕ ಗಂಟೆ(little Bell). ಕಿವಿಯ ಓಲೆಗೆ ನೇತಾಡುವಂತೆ ಹೊಂದಿಸಿದ ಸಣ್ಣ ಛತ್ರಿಯಾಕಾರದ ಚಿನ್ನ, ಮುತ್ತು ಅಥವಾ ಹರಳಿನ ಕುಚ್ಚು ಇದರ ಹೊರ ವಿನ್ಯಾಸ.

ಗಂಟೆಯಾರದ ಈ ಜುಮುಕಿ ಒಳಗಿನಿಂದ ಟೊಳ್ಳಾಗಿರುವುದರಿಂದ ಭಾರ ಕಡಿಮೆಯಾಗಿರುತ್ತದೆ.ಆದ್ದರಿಂದ ಹೆಂಗಸರ ಪ್ರೀತಿಯ ಆಭರಣಗಳಲ್ಲಿ ಜುಮುಕಿ ಕೂಡ ಪ್ರಮುಖ ಸ್ಥಾನ ಪಡೆದಿದೆ. ಸಾಂಪ್ರದಾಯಿಕ ಹಾಗೂ ಮಾಡ್ರನ್ ಉಡುಪು ಗಳಿಗೂ ಹೊಂದಿಕೆ ಆಗುವುದರಿಂದ ಇದರ ಜನಪ್ರಿಯತೆ ಹೆಚ್ಚಿದೆ.

ಇಂದು ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ ಜುಮಕಿಗಳ ಟ್ರೆಂಡ್ ಚಾಲ್ತಿಯಲ್ಲಿದೆ. ಬಿಂದಿಗೆಯ ಹಾಗೆ ದೊಡ್ಡ ಗಾತ್ರದ ಈ ಆಭರಣ ಹೆಣ್ಣಿನ ಕಿವಿಯಲ್ಲಿ ನೃತ್ಯ ಮಾಡುತ್ತಿದ್ದರೆ ನೋಡುಗರ ಕಣ್ಮನ ಸೆಳೆಯುವುದರಲ್ಲಿ ಹಿಂದೆ ಬೀಳುವುದಿಲ್ಲ. ಹೆಣ್ಣಿನ ಸೌಂದರ್ಯ ಹಿಮ್ಮಡಿಗೊಳಿಸುವುದರ ಜೊತೆಗೆ ಅವಳನ್ನು ಕೇಂದ್ರದ ಆಕರ್ಷಣೆಯನ್ನಾಗಿಸುತ್ತದೆ ಈ ಕಿವಿಗಿಂತ ದೊಡ್ಡದಾದ ಕಿವಿಯೋಲೆ.



