ಶ್ರೀರಾಮಲಿಂಗಾರೆಡ್ಡಿರವರಿಗೆ ಧನ್ಯವಾದಗಳು.
ಬಸವನಗುಡಿ ಕ್ಷೇತ್ರದ ಇತಿಹಾಸದಲ್ಲಿ ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಈ ವರ್ಷದ ಕಡಲೆಕಾಯಿ ಪರಿಷೆ ಆಯೋಜಿಸಿ ಕೊಟ್ಟಿದ್ದಕ್ಕೆ ಸಮಸ್ತ ಬೆಂಗಳೂರು ನಾಗರೀಕರ ಪರವಾಗಿ ವಿಶೇಷವಾಗಿ ಬಸವನಗುಡಿ ಜನತೆಯ ಪರವಾಗಿ ಮುಜರಾಯಿ ಇಲಾಖೆಯ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಒಬ್ಬ ಸಚಿವರು ಇಂತಹ ವಿಶೇಷವಾದ ಕಾರ್ಯಕ್ರಮಗಳ ವಿಚಾರದಲ್ಲಿ ಎಷ್ಟು ಶ್ರದ್ಧೆ ಮತ್ತು ಆಸಕ್ತಿಯನ್ನು ವಹಿಸಬೇಕು ಎನ್ನುವುದಕ್ಕೆ ಇವರು ಮಾದರಿಯಾಗಿದ್ದಾರೆ. ವಿದ್ಯುತ್ ದೀಪಾಲಂಕರ ಬೆಂಗಳೂರು ನಗರದ ಜನರಿಗೆ ಮೈಸೂರು ದಸರಾವನ್ನು ಮತ್ತೆ ನೆನಪು ಮಾಡಿಕೊಟ್ಟಿತು. ಅದೇ ರೀತಿಯಲ್ಲಿ ಹಾಸನಾಂಬೆಯ ದೇವಿಯ ಹೂವಿನ ಅಲಂಕಾರವನ್ನು ನೋಡಲು ಸಾಧ್ಯವಾಗದವರು ಬಸವಣ್ಣನ ದೇವಾಲಯದಲ್ಲಿ ಏರ್ಪಡಿಸಿದ್ದ ಹೂವಿನ ಅಲಂಕಾರವನ್ನು ಕಂಡು ಕಣ್ತುಂಬಿಕೊಂಡರು.
ಸುಮಾರು ಹದಿಮೂರು ಲಕ್ಷ ಜನ ಸೇರಿದಂತಹ ಈ ಒಂದು ಜಾತ್ರೆಯಲ್ಲಿ ಯಾವುದೇ ಸಣ್ಣ ಲೋಪ ಬಾರದ ರೀತಿಯಲ್ಲಿ ಯಾವುದೇ ನಾಗರೀಕರಿಗೆ ಸಣ್ಣ ತೊಂದರೆಯೂ ಆಗದ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರಿ ವ್ಯವಸ್ಥೆ ಹಾಗೂ ಭಕ್ತಾದಿಗಳಿಗೆ ಸೂಕ್ತವಾದಂತಹ ಸರತಿ ಸಾಲಿನ ಏರ್ಪಾಟು ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಸವನಗುಡಿಯ ಜನರಿಗೆ ನಮ್ಮ ಭಾಗದ ಜನಪದ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ತಂದುಕೊಟ್ಟಿದೆ. ನಮ್ಮ ಗ್ರಾಮೀಣ ಸೊಗಡಿನ ಜಾತ್ರೆ ಇಷ್ಟೊಂದು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಪ್ರತಿದಿನವೂ ದೇವಾಲಯಕ್ಕೆ ಬಂದು ವ್ಯವಸ್ಥೆಗಳ ಬಗ್ಗೆ ಗಮನಹರಿಸಿ ಆಯಾ ಸಂದರ್ಭದಲ್ಲಿ ಅಗತ್ಯವೆನಿಸಿದ ಮತ್ತಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟು, ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಕಾರಣಕರ್ತರಾಗಿದ್ದಾರೆ.
ಮುಜರಾಯಿ ಇಲಾಖೆಯ ಸಚಿವರು ಇಲ್ಲಿಯ ತನಕ ಈ ನಮ್ಮ ಭಾಗದ ಜನಪದ ಸೊಗಡಿನ ಜಾತ್ರೆಗೆ ಯಾರು ಸಹ ಇಷ್ಟೊಂದು ಆಸಕ್ತಿಯನ್ನು ವಹಿಸಿರಲಿಲ್ಲ. ತಾವು ನಿಜಕ್ಕೂ ನಿಮ್ಮ ಇಲಾಖೆಯ ಬಗ್ಗೆ ಇರುವಂತಹ ಕಾಳಜಿ ಮತ್ತು ಕಳಕಳಿಯನ್ನು ನಿಮ್ಮ ನಡವಳಿಕೆಗಳ ಮೂಲಕ ತೋರಿಸಿಕೊಟ್ಟಿದ್ದೀರಿ.
-ಕೆ ಎಸ್ ನಾಗರಾಜ್, ಬೆಂಗಳೂರು



















