ಬೆಂಗಳೂರು: ಪಡಿತರ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ದೃಷ್ಟಿಯಿಂದ ಬಿಪಿಎಲ್ ಕಾರ್ಡುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ವೇಳೆ ಅನರ್ಹರಿಗೆ ಬಿಪಿಎಲ್ ಕಾರ್ಡು ಸಿಕ್ಕಿದ್ದರೆ ಅದನ್ನು ವಾಪಸ್ ಪಡೆದು ಎಪಿಎಲ್ ಕಾರ್ಡ್ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದ ರಾಜ್ಯದಲ್ಲಿ ಶೇ.15ರಷ್ಟು ಅನರ್ಹ ಬಿಪಿಎಲ್ ಪಡಿತರ ಚೀಟಿ ರದ್ದಾಗಬಹುದು. ಇದಕ್ಕಿಂತ ಹೆಚ್ಚು ಪಡಿತರ ಚೀಟಿಗಳು ರದ್ದಾಗುವುದಿಲ್ಲ ಎಂದರು.
ಅರ್ಹರು ಬಿಪಿಎಲ್ ಕಾರ್ಡ್ನಿಂದ ವಂಚಿತರಾಗಬಾರದು, ಅನರ್ಹರು ಈ ಕಾರ್ಡ್ಗಳನ್ನ ಪಡೆಯಬಾರದು ಎಂಬುದು ಸರ್ಕಾರದ ಉದ್ದೇಶ. ಹೀಗಾಗಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಪರಿಶೀಲನೆ ವೇಳೆ ಅರ್ಹರು ಇದ್ದರೆ, ಅಂಥವರ ಕಾರ್ಡ್ಗಳನ್ನು ವಾಪಸ್ ಕೊಡುತ್ತೇವೆ. ಕೆಲವರು ಕಾರ್ಡ್ ಬೇಡ ಎನ್ನುತ್ತಿದ್ದಾರೆ. ಅವರ ಕಾರ್ಡ್ ವಾಪಸ್ ಪಡೆಯಲಾಗುತ್ತದೆ ಎಂದರು.
ಕಾರ್ಮಿಕರ ಕಾರ್ಡ್ಗಳನ್ನು ಆನ್ಲೈನ್ ಮೂಲಕ ನೀಡಲು ಅಂಬೇಡ್ಕರ್ ಸೇವಾ ಕೇಂದ್ರ ಮಾಡಿದ್ದೇವೆ. ಯಾರು ಅರ್ಜಿ ಹಾಕುತ್ತಾರೋ ಅವರ ಮನೆಗೆ ಹೋಗಿ ನೇರ ಪರಿಶೀಲನೆ ಮಾಡಿ ಕಾರ್ಡ್ ಕೊಡುತ್ತೇವೆ. ನಕಲಿ ಕಾರ್ಡ್ ಮಾತ್ರ ರದ್ದು ಮಾಡುತ್ತೇವೆ. ಅರ್ಹರನ್ನು ಗುರುತಿಸಿ ಕಾರ್ಡ್ ಕೊಡುತ್ತೇವೆ. ಸ್ಥಳೀಯ ಶಾಸಕರ ಮೂಲಕ ಸರ್ವೆ ಮಾಡಿಸಿ ಕಾರ್ಮಿಕರ ಕಾರ್ಡ್ ಮಾಡಲಿಸಿದ್ದೇವೆ ಎಂದರು.




