ಬೆಂಗಳೂರು: ಯಾರಂಡಹಳ್ಳಿಯ ಟಿ.ನಾಗರಾಜ ರೆಡ್ಡಿ(ಎಲ್ ಐ ಸಿ) ಅವರ 101 ವರ್ಷದ ತಾಯಿ ಗೌರಮ್ಮನವರು ವಯೋಸಹಜವಾಗಿ ಮೃತಪಟ್ಟಿದ್ದು ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಆನೇಕಲ್ ನಗರದ ನೇಹಾ ಅವರ ತಂದೆ 56 ವರ್ಷದ ಮೇಸ್ತಿ ಎಸ್.ಮೂರ್ತಿ ಅವರು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆದಾನ ಮಾಡಿದ್ದಾರೆ.
ಮೃತ ಗೌರಮ್ಮನವರ ಮಗ ಟಿ.ನಾಗರಾಜ ರೆಡ್ಡಿ ಮಾತನಾಡಿ, ಹೋದವರುಷ ನನ್ನ ತಾಯಿಯ 100ನೇ ಜನ್ಮದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಿದ್ದೆವು. ಇಂದು ಅವರ ಕಣ್ಣುಗಳನ್ನು ದಾನ ಮಾಡಿದ್ದು ನಮ್ಮ ಕುಟುಂಬದ ಹೆಮ್ಮೆ. ನನ್ನಮ್ಮ ನಾಳೆ ಇನ್ನಾರೋ ಕಣ್ಣುಕಾಣದ ಇಬ್ಬರ ಮನೆಯಲ್ಲಿ ಬದುಕಿರುತ್ತಾರೆ. ನೇತ್ರದಾನಿ ಡಾ.ರಾಜಕುಮಾರ್ ಕುಟುಂಬ ನಮಗೆ ಸ್ಪೂರ್ತಿ ಎಂದರು.
ಮೃತ ಮೇಸ್ತಿ ಎಸ್.ಮೂರ್ತಿ ಅವರ ಮಗಳಾದ ನೇಹಾ ಕಂಬನಿ ಮಿಡಿದು, ನಮ್ಮ ಕುಟುಂಬದ ಮುಖ್ಯ ಕಂಬವಾಗಿದ್ದ ನನ್ನ ತಂದೆಯವರ ನೇತ್ರಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರ ನಿಧಿಗೆ ದಾನಮಾಡಿದ್ದೇವೆ. ಇದು ನನ್ನ ತಂದೆಯವರ ಆಸೆಯಾಗಿತ್ತು. ಸತ್ತ ನಂತರ ಕೂಡ ಬದುಕಿರಬೇಕಾದರೆ ನೇತ್ರದಾನ ಮಾಡಬೇಕು ಎಂದರು.
ಮರಣಾನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಈ ಎರಡು ನೇತ್ರದಾನ ಕಾಯಕದಲ್ಲಿ ಜೊತೆಯಾದವರು ಹೊಸಬೆಳಕು ಟ್ರಸ್ಟಿನ ಜಿಗಣಿ ರಾಮಕೃಷ್ಣ
ಮೊನ್ನೇಯಷ್ಟೇ ಆನೇಕಲ್ ನಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ನೇತ್ರದಾನ ನೋಂದಣಿ ಯಶಸ್ವಿಯಾಗಿದ್ದು, 5000ಕ್ಕೂ ಹೆಚ್ಚು ಕರಪತ್ರಗಳನ್ನು ನೀಡಿ ಅರಿವು ಮೂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನೇತ್ರದಾನ – ಅಂಗಾಂಗ ದಾನ – ದೇಹ ದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ೨೪/೭ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದು.
ನೇತ್ರದಾನ – ಅಂಗಾಂಗ ದಾನ – ದೇಹ ದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.








