ಪವರ್ ಗ್ರಿಡ್ ಸಿ ಎಸ್ ಆರ್ ನಿಧಿಯಡಿ ರೂ.95.64 ಲಕ್ಷಗಳಲ್ಲಿ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ಮೂಲಭೂತ ಸೌಕರ್ಯ
ಸಿಆರ್ಸಿಸ ಕೇಂದ್ರಕ್ಕೆ ವಾಹನ ನೀಡಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮನವಿ
ದಾವಣಗೆರೆ: ಕೇಂದ್ರ ಮಹಾರತ್ನ ಕಂಪನಿ ಪವರ್ಗ್ರಿ ಡ್ನರ ಸಿಎಸ್ಆವರ್ ನಿಧಿಯಡಿ ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಮತ್ತು ತ್ಯಾವಣಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ.95.64 ಲಕ್ಷದಲ್ಲಿ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಕಂಪನಿ ಅಧಿಕಾರಿಗಳು ಹಸ್ತಾಂತರಿಸಿದರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಪವರ್ ಗ್ರಿಡ್ ಸಿ.ಎಸ್.ಆರ್. ನಿಧಿಯಡಿ ಜಿಲ್ಲೆಗೆ 2023-24 ನೇ ಸಾಲಿನಿಂದ ಇಲ್ಲಿಯವರೆಗೆ ರೂ.12.12 ಕೋಟಿ ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನವನ್ನು ಜಿಲ್ಲೆಗೆ ನೀಡಲು ಜಿ.ಎಂ.ಗಂಗಾಧರಸ್ವಾಮಿ ಕಂಪನಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಸಿಆರ್ಸಿ ಸಂಯುಕ್ತ ಪ್ರಾದೇಶಿಕ ಕೌಶಲ್ಯ ಅಭಿವೃದ್ದಿ ಮತ್ತು ಪುನರ್ವ ಸತಿ ಮತ್ತು ದಿವ್ಯಾಂಗ ಜನರ ಸ್ವಾವಲಂಭಿ ಕೇಂದ್ರಕ್ಕೆ ಹೆಚ್ಚಿನ ನೆರವು ನೀಡಲು ಮನವಿ ಮಾಡಿ ರಾಜ್ಯದಲ್ಲಿಯೇ ಇದು ಮೂರನೇ ಕೇಂದ್ರವಾಗಿದೆ. ಇಲ್ಲಿ ಎಲ್ಲಾ ತರಹದ ದಿವ್ಯಾಂಗ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅತ್ಯುತ್ತಮ ಕೆಲಸವನ್ನು ಕೇಂದ್ರ ಮಾಡುತ್ತಿದೆ ಎಂದರು.
ಕೇಂದ್ರದಲ್ಲಿ ಈಗಾಗಲೇ ಒಂದು ವಾಹನವಿದೆ. ಸುತ್ತಮುತ್ತಲಿನ 15 ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಸಂಚರಿಸಬೇಕಾಗಿರುವುದರಿಂದ ಹೆಚ್ಚುವರಿ ವಾಹನದ ಅವಶ್ಯಕತೆ ಇದ್ದು ಸಿಎಸ್ಆ1ರ್ ನಿಧಿಯಲ್ಲಿ ನೀಡಲು ಮನವಿ ಮಾಡಿದಾಗ ಪವರ್ಗ್ರಿ ಡ್ ಅಧಿಕಾರಿಗಳು ಪರಿಶೀಲಿಸಿ ಒದಗಿಸಲು ಕ್ರಮ ಜರುಗಿಸಲಾಗುತ್ತದೆ ಎಂದರು.
ಬಸವಾಪಟ್ಟಣ ಮತ್ತು ತ್ಯಾವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೂ.95.64 ಲಕ್ಷಗಳಲ್ಲಿ ಸ್ವಯಂ ಚಾಲಿತ ವಾಟರ್ ಪ್ಯೂರಿಪೈಯರ್, ಸೋಲಾರ್ ದೀಪ ಅಳವಡಿಕೆ, 3 ಕೆವಿ ಸೋಲಾರ್ ವಿದ್ಯುತ್, ನೀರು ಪೂರೈಕೆ, ಬಣ್ಣ, ಟೈಲ್ಸ್, ಬಾಗಿಲು ಅಳವಡಿಕೆ ಸೇರಿದಂತೆ ಚಿಕಿತ್ಸೆಗೆ ಆಗಮಿಸುವವರಿಗೆ ಕುಳಿತುಕೊಳ್ಳಲು ಕುರ್ಚಿ ಅಳವಡಿಕೆ ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಈ ವೇಳೆ ಪವರ್ಗ್ರಿನಡ್ನಾ ಮುಖ್ಯ ಜನರಲ್ ಮ್ಯಾನೇಜರ್ ಎಂ.ಎಸ್.ಹಜೀಬ್, ಹಿರಿಯೂರು ಕೇಂದ್ರದ ಉಪ ವ್ಯವಸ್ಥಾಪಕ ಪಿ.ರವಿಚಾಂದ್, ಆರ್.ಸಿ.ಹೆಚ್.ಅಧಿಕಾರಿ ಡಾ. ಮರುಳಾರಾಧ್ಯ ಹಾಜರಿದ್ದರು.




