ನಾರಾಯಣ ನೇತ್ರಾಲಯಕ್ಕೆ ಚನ್ನಮ್ಮನವರ ಅವರ ನೇತ್ರದಾನ

3 years ago

ಬೆಂಗಳೂರು: ಕೃಷ್ಣರಾಜಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚನ್ನಮ್ಮ w/o ವರದರಾಜುಲು ಚೆಟ್ಟಿ 78 ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಮೃತರಮಗ ಕೆ.ವಿ.ನಂದಕುಮಾರ್ ನೇತ್ರದಾನಿ ಪುನೀತ್ ರಾಜ್ ಕುಮಾರ್ ನಮಗೆ ಮಾದರಿ. ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ, ನಮ್ಮ ತಾಯಿಯ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ ಎಂದರು.

ಇಡೀ ದೇಶವೇ ಹೆಮ್ಮಾರಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಅವರ ಕುಟುಂಬದವರು ಕಳಕಳಿಯ ಪ್ರಾರ್ಥನೆ ಮಾಡಿದರು.

ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಮೃತ ಚನ್ನಮ್ಮನವರ ಮಗ ಕೆ.ವಿ.ನಂದಕುಮಾರ್ ಮತ್ತು ಶಿವಕುಮಾರ್, ಮಾವ ವೆಂಕಟೇಶ್, ಮಕ್ಕಳಾದ ಶೇಖರ್ ಮತ್ತು ಗುರು ಹಾಗು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ ನೇತ್ರನಿಧಿಯ ವೈದ್ಯರು ಹಾಜರಿದ್ದರು

ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ರಕ್ತದಾನಕ್ಕೆ ಅಂಗಾoಗದಾನಕ್ಕೆ ಹೆಸರಾದ ಹೊಸಬೆಳಕು ಟ್ರಸ್ಟಿನ ಡಾ.ಎಂ.ರಾಮಕೃಷ್ಣ ಮತ್ತು ಮೃತರ ಕುಟುಂಬ. ನೇತ್ರದಾನ – ಅಂಗಾoಗದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.
ನೇತ್ರದಾನ – ಅಂಗಾಗದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.

Leave a Reply