ಶ್ರೀ ಹಿಮವತ್ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭ
ಬೆಂಗಳೂರು: ನಗರದ ಬಸವನಗುಡಿಯ ಶ್ರೀ ನಿಜಗುಣ ಕಲ್ಯಾಣ ಮಂಟಪದಲ್ಲಿ ಶ್ರೀ ಹಿಮವತ್ ಕೇದಾರ ಪೂಜಾ ಸಮಿತಿ ವತಿಯಿಂದ ಶ್ರೀ ಹಿಮವತ್ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭವನ್ನು ಆಯೋಜಿಸಲಾಗಿತ್ತು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಉತ್ತರಾಖಂಡ ಮಠದ ಶ್ರೀಮದ್ ಹಿಮವತ್ ಕೇದಾರ ವೈರಾಗ್ಯ ಸಿಂಹಸನಾಧಿಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಮತ್ತು ರಾಜಾಪುರ ಸಂಸ್ಥಾನ ಮಠದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು, ಜಡೇದೇವರ ಮಠದ ಇಮ್ಮಡಿ ಬಸವರಾಜೇಂದ್ರ ಸ್ವಾಮಿಗಳು, ಗುರುವಿನಮಠದ ಜಗದೀಶ ಶಿವಾಚಾರ್ಯ ಸ್ವಾಮಿಗಳು, ಹಿರೀಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಕಣ್ವಮಠ ಮುತ್ನಾಳ್ ನಾಲ್ಪಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ನಾಗಲಾರಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣರವರು, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಡಿ.ಎಸ್.ಮ್ಯಾಕ್ಸ್ ವ್ಯವಸ್ಥಾಪಕ ನಿರ್ದೇಶಕ ದಯಾನಂದ್, ವೀಣಾ ಕಾಶಪ್ಪನವರ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಶ್ರೀ ಶ್ರೀ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಪರಮಾತ್ಮ ಕೊಟ್ಟರೆ ಅತಿಯಾಗಿ ಕೊಡುತ್ತಾನೆ, ಕಸಿದುಕೊಳ್ಳಬೇಕು ಎಂದರೆ ಕಸಿದುಕೊಳ್ಳುತ್ತಾನೆ. ಪ್ರಗತಿ ಪಥದಲ್ಲಿ ಹೋಗಬೇಕಾದರೆ ಏನು ಮಾಡಬೇಕು ಎಂಬುದು ಚಿಂತನೆ ಮಾಡಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದವರು ಕೇಂದ್ರ ಸರ್ಕಾರದ ಜೊತೆಯಲ್ಲಿ ಸಮಲೋಚನೆ ಮಾಡಬೇಕು. 15 ರಾಜ್ಯಗಳಲ್ಲಿ ವೀರಶೈವ ಸಮಾಜದವರು ಇದ್ದಾರೆ, ರಾಜ್ಯದಲ್ಲಿ ಎರಡು ಕೋಟಿ ವೀರಶೈವ ಸಮುದಾಯದವರು ಇದ್ದಾರೆ ಎಂದರು.
ಪರಂಪರೆ ಉಳಿದರೆ ಪರಿವರ್ತನಯಾಗಲು ಸಾಧ್ಯ, ಭೂಮಿ, ಜಲ, ಆಗ್ನಿ, ಆಕಾಶ, ವಾಯು ಪಂಚಭೂತಗಳಲ್ಲಿ ಶಕ್ತಿ ಇದೆ. ಇವುಗಳು ಇದ್ದಾಗ ಮಾತ್ರ ಮನುಷ್ಯ ಉಳಿಯುತ್ತಾನೆ ಎಂದರು.
ತಂದೆ ಮಗನ ಕಾಲು ಮುಗಿಯುವ ಕಾಲ ಬರಬಾರದು. ಅದು ಬಂದರೆ ಭೂಮಿ ಉಳಿಯುವುದಿಲ್ಲ. ಬೇರು ಸಧೃಡವಾಗಿ ಇದ್ದರೆ ಮರ ಚನ್ನಾಗಿ ಬೆಳಯುತ್ತದೆ, ಮರ ಬೆಳದರೆ ಹಣ್ಣುಗಳು ಬೀಡುತ್ತದೆ ಎಂದರು.
ಲಿಂಗದಲ್ಲಿ 33 ಕೋಟಿ ದೇವರುಗಳು ಇದ್ದಾರೆ. ಅದನ್ನ ಪೂಜೆ ಮಾಡಿದರೆ ಮತ್ತು ರುದ್ರಾಕ್ಷೀಯನ್ನು ದಾನ ಮಾಡಿದರೆ ಪುಣ್ಯ ಬರುತ್ತದೆ ಎಂದರು.
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ಕೇದಾರ ಜಗದ್ಗುರುಗಳಿಂದ ಧರ್ಮ ಜಾಗೃತಿ ಸಭೆ ಮತ್ತು ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯುತ್ತಿರುವುದು ಪುಣ್ಯ ದಿನವಾಗಿದೆ ಎಂದರು.
ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯಿಂದ ಭಕ್ತಿಯಿಂದ ದೇವರನ್ನ ನೆನದರೆ ಒಲಿಯುತ್ತಾನೆ. ವೀರಶೈವ ಲಿಂಗಾಯಿತು ಎಲ್ಲ ಧರ್ಮೀಯರ ಜೊತೆಯಲ್ಲಿ ಬೆರೆಯುತ್ತಾರೆ. ಇವರಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹರಗುರು ಆಶೀರ್ವಾದದಿಂದ ರಾಜಕೀಯದಲ್ಲಿ ಯಶ್ವಸಿಯಾಗಲು ಸಾಧ್ಯವಾಗಿದೆ. ಗುರುವಿನ ಗುಲಾಮನಾದರೆ ಮಾತ್ರ ದೊರೆಯುತ್ತದೆ ಮುಕ್ತಿ ಎಂದರು.
ಪ್ರಧಾನಿ ನರೇಂದ್ರಮೋದಿರವರು ಬಲಿಷ್ಠ ಭಾರತ ನಿರ್ಮಾಣ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ. ಕೇದಾರದಲ್ಲಿ ಭೀಕರ ಪ್ರವಾಹ ಬಂದರು ಕೇದರನಾಥನಿಗೆ ಯಾವುದೇ ಧಕ್ಕೆಯಾಗಲಿಲ್ಲ. ಭಗವಂತ ಇರುವುದಕ್ಕೆ ಸಾಕ್ಷಿಯಾಗಿದೆ. ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿರವರು ಕೇದಾರನಾಥನ ಕೃಪೆಯಿಂದ ದಿಟ್ಟತನದಿಂದ ಸಮಸ್ಯೆಗಳನ್ನು ಎದುರಿಸಿ ರಾಷ್ಟ್ರವನ್ನು ಕಾಪಾಡುತ್ತಿದ್ದಾರೆ ಎಂದರು.







