ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರದಾನ
ಕನ್ನಡ ಬೆಳೆಸಲು ಮಾತೃ ಹೃದಯವಿರಬೇಕು, ಕನ್ನಡಿಗರು ಒಬ್ಬರ, ಒಬ್ಬರನ್ನ ಪ್ರೀತಿಸುವ ಹೃದಯ ವೈಶಾಲ್ಯತೆವುಳ್ಳವರು: ಟಿ.ಎಸ್.ನಾಗಾಭರಣ
ಬೆಂಗಳೂರು: ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕರ್ನಾಟಕ ವಿಕಾಸ ರಂಗ ಸಂಸ್ಥೆ ವತಿಯಿಂದ ಜನರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಚಲನಚಿತ್ರ, ನಟ, ನಿರ್ದೇಶಕ ಡಾ. ಟಿ.ಎಸ್.ನಾಗಭರಣ, ಸಾಹಿತಿ ರಾ.ನಂ.ಚಂದ್ರಶೇಖರ್, ನಾನು ನಮ್ಮರೊಂದಿಗೆ ಫೌಂಡೇಷನ್ ಸಂಸ್ಥಾಪಕರಾದ ಸರ್ವಮಂಗಳಾ ಅರಳಿಮಟ್ಟಿ, ಕರ್ನಾಟಕ ವಿಕಾಸರಂಗದ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಜರಗನಹಳ್ಳಿ ಶಿವಶಂಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನುಡಿಸಿರಿ ಸಾಹಿತ್ಯ ಪ್ರಶಸ್ತಿಯನ್ನು ಕವಿಗಳಾದ ಮಾಸ್ಕೇರಿ ಎಂ.ಕೆ.ನಾಯಕರಿಗೆ ಪ್ರದಾನ ಮಾಡಲಾಯಿತು.
ಟಿ.ಎಸ್.ನಾಗಭರಣ ಮಾತನಾಡಿ, ಕನ್ನಡದ ಒಬ್ಬ ಸಂಘಟಕ ನಾಡಿನ ಜನರನ್ನು ಒಂದುಗೂಡಿಸುತ್ತಾನೆ. ಜರಗನಹಳ್ಳಿ ಶಿವಶಂಕರ್ ಅವರ ಸಾಹಿತ್ಯ ಸ್ಪೂರ್ತಿದಾಯಕವಾಗಿತ್ತು. ಅವರ ಸಾಹಿತ್ಯ ಓದಿದವರ ಮನಸ್ಸಿನಲ್ಲಿ ಅಶರು ಉಳಿಯುತ್ತಾರೆ ಎಂದರು.
ಕನ್ನಡ ಬೆಳೆಸಲು ಮಾತೃ ಹೃದಯವಿರಬೇಕು, ಮಾತೃ ಹೃದಯ ಹಿಡಿತ ಸಾಧಸುವುದಿಲ್ಲ ಪ್ರೀತಿ ಹಂಚುತ್ತದೆ. ಜರಗನಹಳ್ಳಿ ಶಿವಶಂಕರ್ ಪ್ರಶಸ್ತಿ ಸಾಹಿತ್ಯ ಮತ್ತು ಹೋರಾಟಗಾರರಿಗೆ ನೀಡುತ್ತಿದೆ. ಅದು ಕನ್ನಡ ಭಾಷೆ ಬೆಳವಣಿಗೆ ಪೂರಕವಾಗಿದೆ ಎಂದರು.
ಕನ್ನಡಿಗರ ಮನಸ್ಸು ವಿಶಾಲತೆ ಹೊಂದಿದೆ. ಒಬ್ಬರಿಗೆ, ಒಬ್ಬರು ಪ್ರೀತಿ, ವಿಶ್ವಾಸದಿಂದ ಕೂಡಿರುತ್ತದೆ. ಆ ಸಂಬಂಧಗಳು ಎಷ್ಟೆ ದೂರವಿದ್ದರು ಪ್ರೀತಿ ಸ್ನೇಹ ಕಡಿಮೆಯಾಗುವುದಿಲ್ಲ. ಕನ್ನಡಿಗರು ಹೃದಯ ವೈಶಾಲ್ಯತೆವುಳ್ಳವರು ಎಂದರು.
ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಮಾತನಾಡಿ, ಕನ್ನಡಿಗರ ಸಾಧನೆ ಯಾರು ಗುರುತಿಸುವುದಿಲ್ಲ, ಹಿಂದಿ, ತಮಿಳುನಲ್ಲಿ ಬಹು ಬೇಗನೆ ಗುರುತಿಸುತ್ತಾರೆ. ಕನ್ನಡಿಗರಿಗೆ ಬಹಳ ನೋವಿನ ಸಂಗತಿಯಾಗಿದೆ ನಮ್ಮವರನ್ನ ನಾವು ಬಿಟ್ಟು ಕೊಡಬಾರದು ಎಂದರು.
ರಾಜ್ಯ ಸರ್ಕಾರದವರು ಆಡಳಿತ ಭಾಷೆ ಕನ್ನಡ ಎಂದು ಸುತ್ತೋಲೆ ಹೊರಡಿಸುತ್ತಾರೆ. ಜಾರಿಗೆ ಮಾತ್ರ ಬರುವುದಿಲ್ಲ, ಆದೇಶದಲ್ಲಿ ಮಾತ್ರ ಇರುತ್ತದೆ ಎಂದರು.
ಚುಟುಕು ಕವಿ ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ರವರ ಆಶಯದಂತೆ ನಾವು ನಡೆಯಬೇಕು. ಕನ್ನಡಿಗರು ಅಪಾರ ಅಭಿಮಾನ ಹೊಂದಿರುವ ಕಾರಣದಿಂದ ನಮ್ಮ ಭಾಷೆ ಉಳಿದಿದೆ ಎಂದರು.
ರಾ.ನಂ.ಚಂದ್ರಶೇಖರ್ ಮಾತನಾಡಿ, ಕವಿ ಮಾಸ್ಕೇರಿ ನಾಯಕ ಬರೆದ ಕವನಗಳು ಜನರ ಮನಸ್ಸನ್ನ ಮುಟ್ಟಿದೆ. ಕಥನ, ಕವನಗಳ ಪುಸ್ತಕ ಸಂಕಲನಗಳು ಹಲವಾರು ಬಾರಿ ಮರು ಮುದ್ರಣವಾಗಿದೆ ಎಂದರೆ ಮಾಸ್ಕೇರಿ ಎಂ.ನಾಯಕರವರ ಸಾಹಿತ್ಯ ಎಲ್ಲರ ಮನ ಮುಟ್ಚಿದೆ ಎಂದರ್ಥ ಎಂದರು.
ಗ್ರಂಥಾಲಯಗಳು ಬೆಳೆಯಬೇಕು, ಹರಕು ಚಪ್ಪಲಿ ಇದ್ದರು ಪರವಾಗಿಲ್ಲ ಕನ್ನಡಿಗರ ಕೈಯಲ್ಲಿ ಪುಸ್ತಕ ಇರಬೇಕು ಎಂದರು.
ಮಾಸ್ಕೇರಿ ಎಂ.ನಾಯಕ ಮಾತನಾಡಿ, ಜರಗನಹಳ್ಳಿ ಶಿವಶಂಕರ್ ರವರು ವಿನಯವಂತರು, ಸರಳ ವ್ಯಕ್ತಿತ್ವದವರು. ವಿನಯಕ್ಕಿಂತ ಶೇಷ್ಠವಾದದ್ದು ಯಾವುದು ಇಲ್ಲ. ಕನ್ನಡ ಭಾಷೆ ವಿಶ್ವ ಭಾಷೆಯಾಗಿದೆ ಎಂದು ವಿನೋಭಬಾವೆರವರು ಹೇಳಿದ್ದರು ಎಂದರು.
ಅಹಂಕಾರದಿಂದ ಮನುಷ್ಯ ದಾರಿ ತಪ್ಪುತ್ತಾನೆ. ವಿನಯತೆಯಿಂದ ಎಲ್ಲರ ಪ್ರೀತಿ ವಿಶ್ವಾಸ ಗೆಲ್ಲುತ್ತಾರೆ. ಪ್ರೀತಿಯಿಂದ ನೀಡುವ ಪ್ರಶಸ್ತಿ ಸ್ವೀಕರಿಸಬೇಕು ಎಂದರು.
ಸರ್ವಮಂಗಳ ಅರಳಿಮಟ್ಟಿ ಮಾತನಾಡಿ, ಜರಗನಹಳ್ಳಿ ಶಿವಶಂಕರ್ ರವರು ಯುವ ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು. ಕರ್ನಾಟಕ ವಿಕಾಸದ ರಂಗದ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಆಯೋಜಿಸಬೇಕು. ಅನ್ಯ ಭಾಷಿಕರಿಗೆ ಕನ್ನಡ ಭಾಷೆ ಕಲಿಸುವ ಕೆಲಸವಾಗಬೇಕು. ಅದರಿಂದ ಉಚಿತ ಕನ್ನಡ ಕಲಿಸುವ ತರಬೇತಿ ನೀಡಲಾಗುತ್ತಿದೆ. ಕನ್ನಡಿಗರು ಕನ್ನಡ ಕಲಿಯಬೇಕು, ಕಲಿಸಬೇಕು ಎಂದರು.
ಜರಗನಹಳ್ಳಿ ಶಿವಶಂಕರ್ ರವರ ಪುತ್ರಿ ಶುಭೋಧ ಶಿವಶಂಕರ್, ಕುಟುಂಬ ವರ್ಗದವರು, ಬಿ.ಎಂ.ಗಂಗಣ್ಣ, ಸುನಂದಾ ಲೋಕೇಶ್, ಕೆ.ಎಸ್.ಎಂ.ಹುಸೇನ್, ಸಾಹಿತಿಗಳು, ಕಲಾವಿದರು, ಕನ್ನಡ ಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










