ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಖಂಡನೀಯ

2 years ago

ಕೊಪ್ಪಳ: ಕೊಪ್ಪಳ ನಗರಕ್ಕೆ 3 ಕಿಲೋ ಮೀಟರ್  ಹಂತರದಲ್ಲಿರುವ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿ ದಲಿತ ಜನಾಂಗವನ್ನು ಅವಮಾನಿಸಿರುವುದು ಖಂಡನೀಯ ಎಂದು ದಲಿತ ಮುಖಂರು ಹೇಳಿದ್ದಾರೆ.


ದಲಿತ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರ ನೇತೃತ್ವದ ಸತ್ಯಶೋಧನ ಸಮಿತಿ ದಿನಾಂಕ 17-02-2024 ರಂದು ಗ್ರಾಮಕ್ಕೆ ಬೇಟಿ ಕೊಟ್ಟು ಯುವಕರಿಗೆ ಮತ್ತು ಮಹಿಳೆಯರಿಗೆ ಧರ್ಯ ತುಂಬಿ ಸಾಂತ್ವನ ಹೇಳಿದರು.

ನಾಗರಿಕ ಸಮಾಜ ತಲೆ ತಗ್ಗಿಸುವಂತ ಇಂತಹ ಘಟನೆಗಳನ್ನು ಮಾನವತಾ ಮನಸುಳ್ಳವರು ಯಾರು ಸಹಿಸಿಕೊಳ್ಳುವುದಿಲ್ಲ. 12 ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ನಿರ್ಮೂಲನೆ ಮತ್ತು ಅಸ್ಪೃಶ್ಯತೆ ಆಚರಣೆಯ ವಿರುದ್ಧ ಹೋರಾಡಿದರು.. ಅಂಬೇಡ್ಕರವರು ಜಾತಿಯ ವ್ಯವಸ್ಥೆಯ ನಿರ್ಮೂಲನೆಗೆ ತಮ್ಮ ಪ್ರಾಣವನ್ನು ಸವಿಸಿಕೊಂಡು ಹೋರಾಡಿದರು ಮತ್ತು ದೇಶಕ್ಕೆ  ಸಂವಿಧಾನ ಕೊಟ್ಟು ಹೊಸ  ಚರಿತ್ರೆಯನ್ನು ನಿರ್ಮಿಸಿದರು ಎಂದು ಅಭಿಪ್ರಾಯಪಟ್ಟರು.

ಆದರೂ ಜಾತಿ ವ್ಯವಸ್ಥೆಯ ತಾರತಮ್ಯ ಅಸ್ಪೃಶ್ಯತೆಯ ಆಚರಣೆ ಮುಂದುವರಿದಿದೆ. ಇತ್ತೀಚಿನ ಕೋಮುವಾದಿ ದ್ವೇಷದ ರಾಜಕೀಯ ವ್ಯವಸ್ಥೆಯು, ಜಾತಿ ತಾರತಮ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿ ಬೆಳೆಸುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ ಮುಖಂಡರು ದಲಿತರಿಗೆ ಸೂಕ್ತ ರಕ್ಷಣೆ ಕೊಡಬೇಕು ಮತ್ತು ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಒತ್ತಾಯಿಸಿದರು.

ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಸತ್ಯಶೋಧನ ಸಮಿತಿಯ ಮುಖಂಡರಾದ ಬಸವರಾಜ ಶೀಲವಂತರ, ಡಿ.ಹೆಚ್.ಪೂಜಾರ, ಮಹಾಂತೇಶ ಕೊತಬಾಳ, ಕರಿಯಪ್ಪ ಗುಡಿಮನಿ,ಕೆ.ಬಿ.ಗೋನಾಳ, ಮುದಕಪ್ಪ ಹೊಸಮನಿ ನರೆಗಲ್, ಸಂಜಯದಾಸ್, ರಮೇಶ ಬೇಳೂರ ಇತರರು ಇದ್ದರು.

ಜಿಲ್ಲಾ ಮತ್ತು ತಾಲೂಕ ಆಡಳಿತದ ನಿರ್ಲಕ್ಷ್ಯತೆಯಿಂದ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ. ಹಾಲವರ್ತಿ ಗ್ರಾಮದ ಹರಿಜನ ವಾರ್ಡಿನಲ್ಲಿ ನಡೆದ ಸಭೆಯಲ್ಲಿ ಜೆಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ ತಂಗಡಗಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply