ಬೆವರು ಸುರಿಸಿ ದುಡಿಯುವ ಜನರ ಹೊಟ್ಟೆ ಹಸಿವನ್ನ ಕಡಿಮೆ ಬೆಲೆಯಲ್ಲಿ ನೀಗಿಸಿಕೊಳ್ಳುವ ಸಲುವಾಗಿ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ
ಕುಣಿದು ಕುಪ್ಪಳಿಸುವ ಪುಟ್ಟ ಪುಟ್ಟ ಮಕ್ಕಳ ಪೌಷ್ಟಿಕಾಂಶವನ್ನು ಹೆಚ್ಚಿಸುವ ಸಲುವಾಗಿ ಶಾಲೆಗಳಲ್ಲಿ ಕ್ಷೀರಭಾಗ್ಯದ ಮೂಲಕ ಹಾಲು ನೀಡಿದ ತಾಯಿ ಕರುಳಿನ ಸರ್ಕಾರ
ದುಡಿಯುವ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಗ್ರಾಮೀಣ ಪ್ರದೇಶದ ಸಹೋದರಿಯರ ಆರ್ಥಿಕ ಹೊರೆಯನ್ನ ಕಡಿಮೆ ಮಾಡಿದ ಶಕ್ತಿ ಯೋಜನೆಯನ್ನು ನೀಡಿದ ತಾಯಿ ಕರುಳಿನ ಸರ್ಕಾರ
ಪ್ರತಿ ತಿಂಗಳು 2000ಗಳ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ ಕೋಟ್ಯಾಂತರ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ ನೋವಿನ ಸಂದರ್ಭದಲ್ಲಿ ನೆರವಾಗಲೆಂದು ಯೋಜನೆಯ ರೂಪಿಸಿದ ತಾಯಿ ಕರುಳಿನ ಸರ್ಕಾರ
ಮನೆಮನೆಗೆ ತೆರಳಿ ಕಣ್ಣಿನ ತಪಾಸಣೆಯನ್ನ ಮಾಡಿ ಉಚಿತವಾಗಿ ಕನ್ನಡಕ ಮತ್ತು ಚಿಕಿತ್ಸೆಯನ್ನ ನೀಡುವ ಆಶಾಕಿರಣವೆಂಬ ಮಾನವೀಯ ಮೌಲ್ಯದ ಯೋಜನೆಯನ್ನು ಜಾರಿಗೆ ತಂದ ತಾಯಿ ಕರುಳಿನ ಸರ್ಕಾರ
ರಸ್ತೆ ಸಾರಿಗೆ ನಿಗಮದ ಎಲ್ಲ ವಲಯಗಳ ಮತ್ತು ಬಿಟಿಎಸ್ ಚಾಲಕರು ಮತ್ತು ನಿರ್ವಾಹಕರ ಅಪಘಾತದಲ್ಲಿನ ಮರಣಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ , ಗಂಭೀರ ಕಾಯಿಲೆಗಳಿಂದ ಮೃತರಾದ ನೌಕರರ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ವಿಮೆ ಪರಿಹಾರ ಯೋಜನೆಯನ್ನ ಜಾರಿಗೆ ತಂದಿರುವ ತಾಯಿ ಕರುಳಿನ ಸರ್ಕಾರ
ಮನೆ ಮನೆಗೆ ತೆರಳಿ ಅಗತ್ಯ ವಸ್ತುಗಳನ್ನ ಸರಬರಾಜು ಮಾಡುವ ಕಾರ್ಮಿಕರ ವರ್ಗಕ್ಕೆ, ದಿನಪತ್ರಿಕೆಗಳನ್ನ ಮನೆಮನೆಗೆ ಮುಟ್ಟಿಸುವ ಕಾಯಕಯೋಗಿಗಳಿಗೆ ಚಾಲಕರುಗಳಿಗೆ ವಿಮೆ ಯೋಜನೆಯ ಅಡಿಯಲ್ಲಿ ನೆರವನ್ನ ಘೋಷಿಸಿರುವ ತಾಯಿ ಕರುಳಿನ ಸರ್ಕಾರ
ಅನ್ನಭಾಗ್ಯ ಯೋಜನೆಯ ಮೂಲಕ ಹಸಿವು ಮುಕ್ತ ಕರ್ನಾಟಕದ ಕನಸನ್ನು ನನಸಾಗಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ತಾಯಿ ಕರುಳಿನ ಸರ್ಕಾರ
80 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಮನೆಯ ಬಾಗಿಲಿಗೆ ಪಡಿತರ ಆಹಾರ ಪದಾರ್ಥಗಳನ್ನು ತಲುಪಿಸುವ ಯೋಜನೆಯನ್ನು ರೂಪಿಸಿರುವ ತಾಯಿ ಕರುಳಿನ ಸರ್ಕಾರ
ಜನಸ್ಪಂದನ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನೆ ಬಾಗಿಲಿಗೆ ಸರ್ಕಾರ ಯೋಜನೆಯ ಮೂಲಕ ಉಪಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ರವರು ನಾಗರೀಕರನ್ನು ಭೇಟಿ ಮಾಡಿ ಸಮಸ್ಯೆಯನ್ನ ಪರಿಹರಿಸಿ ಕೊಡುವ ಮೂಲಕ ಪ್ರಜಾಪ್ರಭುತ್ವದ ಪ್ರಜೆಗಳ ಆಶಯದಂತೆ ಆಡಳಿತವನ್ನು ನಡೆಸುತ್ತಿರುವ ತಾಯಿ ಕರುಳಿನ ಸರ್ಕಾರ
– ಕೆ.ಎಸ್.ನಾಗರಾಜ್, ಬೆಂಗಳೂರು




