ವಿವೇಕಾನಂದ ಎಂಬ ನೈಜ ಪ್ರಜ್ಞೆ
ಭಾರತ ಕಂಡ ಅಪರೂಪದ ಸಂತ ಹಾಗೂ ಯುವಕರಿಗೆ ನಿಜ ಸ್ವರೂಪದ ಸ್ಪೂರ್ತಿಯೇ ಆಗಿದ್ದ ಸ್ವಾಮಿ ವಿವೇಕಾನಂದರನ್ನು ಕೋಮು ಶಕ್ತಿಗಳ ಬಹಳಷ್ಟು ಕಾಲ ತಮ್ಮ ಜೀವ ವಿರೋಧಿ ನೀತಿಗಳನ್ನು ಪ್ರಚಾರ ಮಾಡಲು ಬಳಸಿಕೊಂಡರು.
- ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ದೀರ್ಘಾವಧಿ ಯೋಜನೆ: ಕೃಷ್ಣ ಬೈರೇಗೌಡ
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
ಆದರೆ ಇತ್ತೀಚೆಗೆ ಇಂತಹ ದುರುಪಯೋಗಕ್ಕೆ ಪ್ರತಿರೋಧವಾಗಿ ಸ್ವಾಮಿ ವಿವೇಕಾನಂದರ ನಿಜದ ತತ್ವಗಳು ಹೆಚ್ಚು ಮುನ್ನೆಲೆಗೆ ಬಂದ ಮೇಲೆ ಕೋಮುವಾದಿಗಳು ವಿವೇಕಾನಂದರನ್ನು ಹೊತ್ತು ಮೆರೆಸಲು ಹಿಂದೆ ಮುಂದೆ ನೋಡುತ್ತಿವೆ.
ಈ ಮಾತಿಗೆ ಅನೇಕ ವಿವರಗಳನ್ನು ನಾವು ಉದಾಹರಣೆಯಾಗಿ ಕಾಣಬಹುದು.
ಕ್ರೈಸ್ತರ ಬಗ್ಗೆ ಸದಾ ವಿಷಕಾರುವ ಕೋಮುಶಕ್ತಿಗಳು ವಿವೇಕಾನಂದರ ಕ್ರಿಸ್ತನ ಮೇಲಿನ ಮಹಾಪ್ರೇಮವನ್ನು ಅರಿತಿಲ್ಲ. ಒಂದು ವೇಳೆ ಅರಿತರೂ ಸಹ ನಾಟಕ ಮಾಡುತ್ತಾರೆ ಎನಿಸುತ್ತದೆ.
ಜೀಸಸ್ ಬಗ್ಗೆ ಮಾತನಾಡುತ್ತಾ ವಿವೇಕಾನಂದರು
“ನಾನೇನಾದರೂ ಜೀಸಸ್ ಕಾಲದಲ್ಲಿ ಪ್ಯಾಲೆಸ್ಟೈನ್ ನಲ್ಲಿ ಹುಟ್ಟಿದ್ದರೆ ನನ್ನ ಕಣ್ಣೀರಿನಿಂದ ಅಲ್ಲ, ನನ್ನ ಹೃದಯವನ್ನು ಬಸಿದು ಕ್ರಿಸ್ತನ ಪಾದ ತೊಳೆಯುತ್ತಿದ್ದೆ” ಎನ್ನುತ್ತಾರೆ
ಇನ್ನು ಅಮೇರಿಕಾದಲ್ಲಿ ಗುಲಾಮಗಿರಿಗೆ ಒಳಗಾಗಿದ್ದ ಆಫ್ರಿಕಾದ ಕಪ್ಪು ವರ್ಣದ ಜನರಿಗೆ ಸಮಾನತೆ ಮತ್ತು ಘನತೆಯ ಸ್ಥಾನ ಸಿಗುವಂತೆ ಮಾಡಿದ ಇಸ್ಲಾಂ ಧರ್ಮಫದ ಬಗ್ಗೆಯೂ ವಿವೇಕಾನಂದರು ಉತ್ತಮ ಅಭಿಪ್ರಾಯ ಹೊಂದಿದ್ದರು.
ಅವರ ಪ್ರಕಾರ, ಅಮೇರಿಕಾದಲ್ಲಿ ಗುಲಾಮಗಿರಿಗೆ ಒಳಗಾಗಿದ್ದ ಆಫ್ರಿಕಾದ ಕಪ್ಪು ವರ್ಣದ ಜನರಿಗೆ ಸಮಾನತೆ ಮತ್ತು ಘನತೆಯ ಸ್ಥಾನ ಸಿಗುವಂತೆ ಮಾಡಿದ ಇಸ್ಲಾಂ ಧರ್ಮದ ಬಗ್ಗೆಯೂ ವಿವೇಕಾನಂದರು ಉತ್ತಮ ಅಭಿಪ್ರಾಯ ಹೊಂದಿದ್ದರು.
ಅವರು ಹೇಳುವಂತೆ, “ಕಷ್ಟಕರ, ಅರ್ಥವಾಗದ ಸಿದ್ಧಾಂತಕ್ಕೆ ಎದುರಾದ ಸರಳ ಮತ್ತು ಸಮಾನ ಬೋಧನೆಗಳ ಇಸ್ಲಾಂ ಧರ್ಮದ ಸಮತೆಯ ಪ್ರಜ್ಞೆ ನನಗಿಷ್ಟ”.
ಇನ್ನು ಅಲ್ಲಿ ದೇವರು ಮತ್ತು ಮಾನವರ ನಡುವೆ ಯಾವ ಪುರೋಹಿತರಿಲ್ಲ ಎಂದು ಎಲ್ಲರೂ ಕೂಡಾ ತಮ್ಮ ಧರ್ಮದ ಬಗ್ಗೆ ಹೊಂದಲೇ ಬೇಕಾಗಿರುವ ಪ್ರೀತಿಯಿಂದ ಮಾತನಾಡುತ್ತಾರೆ.
ಇನ್ನು ಹಿಂದೂ ಧರ್ಮದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ವಿವೇಕಾನಂದರು ತಮ್ಮದೇ ಧರ್ಮದ ಒಳಗಿನ ಅಸಮಾನತೆಗಳನ್ನು, ನಕಲಿ ಧಾರ್ಮಿಕತೆ, ನಕಲಿ ಗೋ ಪ್ರೇಮ ಮತ್ತು ನಕಲಿ ದೇಶಭಕ್ತಿಯನ್ನು ಸದಾ ವಿರೋಧಿಸುತ್ತಾರೆ.
ಅವರೇ ಹೇಳುವಂತೆ, “ನನಗೆ ದೇಶದ ಬಗ್ಗೆ ಹುಸಿ ಅಭಿಮಾನವಿಲ್ಲ. ನಾನು ಎಷ್ಟು ಭಾರತೀಯನೋ ಅಷ್ಟೇ ಜಾಗತಿಕ. ನನ್ನ ಮೇಲೆ ಯಾವ ದೇಶದ ಹಕ್ಕೂ ಇಲ್ಲ, ನಾನು ಯಾವ ದೇಶದ ಗುಲಾಮನೂ ಅಲ್ಲ”.
ಇನ್ನು ಕಣ್ಣೆದುರಿಗೆ ಕಾಣುವ ಹಸಿದವರಿಗೆ ಬಡವರಿಗೆ ಅನ್ನ ನೀಡದೇ ಗೋವುಗಳಿಗೆ ಧಾನ್ಯ ನೀಡಿ ಪೂಜೆ ಮಾಡುವ ಜನರನ್ನು ನಾನು ಸುತಾರಾಂ ಒಪ್ಪುವುದಿಲ್ಲ. ಮುಖ್ಯವಾಗಿ ಪುರೋಹಿತಶಾಹಿಗಳಿಗೆ ಇವರು ಹೇಳಿದ ಮಾತು ಉಲ್ಲೇಖನೀಯ.
ಇವರು “ಪುರೋಹಿತ ಶಾಹಿಗಳೇ ನಿಮಗೆ ಜಾತಿಯ ಮತ್ತು ವಂಶ ಪಾರಂಪರ್ಯದ ಕಾರಣಕ್ಕೆ, ಹೆಚ್ಚು ಶೈಕ್ಷಣಿಕ ಅರ್ಹತೆಗಳು ಲಭಿಸಿದ್ದರೆ, ಮುಂದೆ ನೀವು ಅಸ್ಪೃಶ್ಯರ ಶಿಕ್ಷಣಕ್ಕೆ ಕೊಡುಗೆ ನೀಡಿ, ಎಲ್ಲರೂ ಉಚ್ಛ ಕನಿಷ್ಠ ನೀತಿಯ ಪ್ರಜ್ಞೆ ಇಲ್ಲದೇ ಪ್ರತಿಯೊಬ್ಬರಲ್ಲೂ ಅನಂತಾತ್ಮನಿದ್ದಾನೆಂದು ಅರಿಯಿರಿ” ಎಂದು ಹೇಳುತ್ತಾರೆ.
ಸರಳ ಸತ್ಯಗಳ ಮೂಲಕವೇ ಸಮಾನತೆಯ ಕನಸು ಕಂಡ ವಿವೇಕಾನಂದರು ತಮ್ಮ ಸಾಮಾಜಿಕ ಕಳಕಳಿಯ ಕಾರಣಕ್ಕೆ ಮೆಚ್ಚಿಕೊಳ್ಳಬೇಕಾದ ವ್ಯಕ್ತಿ.
ಇಂತಹ ವ್ಯಕ್ತಿಯ ಚೈತನ್ಯ ಮತ್ತು ಸಮಾನ ಸಮಾಜದ ತಿಳುವಳಿಕೆಯು ಎಂದಿಗೂ ಮಾದರಿ. ಇಂತಹ ನೈಜ ಸ್ಫೂರ್ತಿದಾಯಕ ಚೇತನವಾದ ವಿವೇಕಾನಂದರ ಜಯಂತಿಯಂದು ಅವರಿಗೆ ನನ್ನ ನಮನಗಳು.
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




