ಬೆಂಗಳೂರು: ಉಡುಪಿ ಸಮೀಪದ ಹೆಬ್ರಿಯ ಕಬ್ಬಿನಾಲೆ ಬಳಿ ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್ಕೌಂಟರ್ ಗೆ ಕರ್ನಾಟಕ ನಕ್ಸಲ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ ವಿಕ್ರಂ ಗೌಡ ಹತ್ಯೆಯಾದ ಬೆನ್ನಲ್ಲೇ ಇವರ ಉತ್ತರಾಧಿಕಾರಿ ಆಯ್ಕೆಗೆ ಕಸರತ್ತು ನಡೆದಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ವಿಕ್ರಂ ಗೌಡ ಸಾವಿಗೆ ಕಂಬನಿ ಮಿಡಿದಿರುವ ನಕ್ಸಲ್ ಸಂಘಟನೆಯ ರಾಷ್ಟ್ರೀಯ ಮಂಡಳಿ ಇದೀಗ ಕರ್ನಾಟಕ ಮತ್ತು ಕೇರಳ ವಿಭಾಗಕ್ಕೆ ನೂತನ ಉತ್ತರ ಅಧಿಕಾರಿ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.
ಸಂಘಟನೆಯಲ್ಲಿರುವ ಮುಂಚೂಣಿ ನಾಯಕರು ಮತ್ತು ಸಂಘಟನೆಯ ಪರ ಒಲವು ಹೊಂದಿರುವ ವ್ಯಕ್ತಿಗಳ ಜೊತೆ ಸಮಾಲೋಚನೆ ನಡೆಸಿದ್ದು ವಿಕ್ರಂ ಗೌಡ ಸ್ಥಾನಕ್ಕೆ ಕಳೆದೆರೆಡು ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಂಡಗಾರು ಲತಾ ಅವರನ್ನು ನೇಮಕ ಮಾಡುವ ಸಾಧ್ಯತೆಯಿದೆ.
ವಿಕ್ರಂ ಗೌಡ ಅನುಪಸ್ಥಿತಿಯಲ್ಲಿ ಮುಂಡಗಾರು ಲತಾ ರಾಜ್ಯ ನಕ್ಸಲ್ ಚಟುವಟಿಕೆಯ ಮುಂದಾಳತ್ವ ವಹಿಸಿದ್ದರು. ಕೇರಳ ಮತ್ತು ತಮಿಳುನಾಡಿನಲ್ಲಿರುವ ಸಂಘಟನೆಯ ಕಾರ್ಯಕರ್ತರು ಜೊತೆಗೆ ಮುಂಡಗಾರು ಲತಾ ಉತ್ತಮ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಸಂಘಟನೆ ವಿಷಯದಲ್ಲಿ ತಮ್ಮದೇ ಕಾರ್ಯತಂತ್ರ ಹೊಂದಿರುವ ಅವರು, ಕಳೆದ ಸುಮಾರು ಎರಡು ದಶಕಗಳಿಂದ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಡಗಾರು ಲತಾ ಕರ್ನಾಟಕ ನಕ್ಕಲ್ ಸಂಘಟನೆಯ ನಾಯಕತ್ವ ವಹಿಸುವ ಸಾಧ್ಯತೆ ಇದೆ.




