ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಂತಲಾ ಸಿಲ್ಕ್ಸ್ ಮುಂಭಾಗದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಪ್ರತಿಮೆ ಅನಾವರಣ ಮತ್ತು ವೃತ್ತ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯರವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಚಿವರಾದ ಬೋಸರಾಜು, ಸುಧಾಕರ್, ಶಾಸಕರುಗಳಾದ ಪಿ.ಎಂ.ಅಶೋಕ್ ರಿಜ್ವಾನ್ ಅರ್ಹದ್, ವಿಧಾನಪರಿಷತ್ ಸಚೇತಕ ಸಲೀಮ್ ಅಹಮದ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಟಬೂ ದಿನೇಶ್ ಗುಂಡೂರಾವ್, ಅನನ್ಯಾರಾವ್ ರವರು ಪ್ರತಿಮೆಯನ್ನು ಉದ್ಘಾಟನೆಗೊಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ರವರ ಪುತ್ಥಳಿ ಮತ್ತು ವೃತ್ತ (ಸರ್ಕಲ್)ಅನಾವರಣ ಮಾಡಲಾಗಿದೆ. ಗುಂಡೂರಾವ್ ರವರು ಮುಖ್ಯಮಂತ್ರಿಯಾಗಿದ್ದಾಗ, ಜನತಾ ಪಕ್ಷದಲ್ಲಿ ಇದ್ದೇ, ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಹೋಗಿದ್ದೆ ಎಂದರು.
1983ರಲ್ಲಿ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದರು. ದೇವರಾಜ ಅರಸು ಕಾಂಗ್ರೆಸ್ ತೊರೆದಾಗ, ಗುಂಡೂರಾವ್ ರವರು ಕಾಂಗ್ರೆಸ್ ಪಕ್ಷದಲ್ಲಿ ಉಳಿದರು. ಲೋಕಸಭಾ ಚುನಾವಣೆಯಲ್ಲಿ ದೇವರಾಜ ಅರಸುರವರ ಪಾರ್ಟಿ ಒಂದು ಸೀಟು ಗೆಲ್ಲಲಿಲ್ಲ ಎಂದರು.
ಎಫ್.ಎಂ.ಖಾನ್ ರವರು ಇಂದಿರಾಗಾಂಧಿರವರ ಫೋಟೋ ತೋರಿಸಿದರೆ ಸಾಕು ಗೆಲ್ಲುತ್ತೀರ ಎಂದು ಹೇಳಿದ್ದರು. ಅದರಂತೆ ಆರ್.ಗುಂಡೂರಾವ್ ರವರ ನೇತೃತ್ವದಲ್ಲಿ 27 ಲೋಕಸಭಾ ಕ್ಷೇತ್ರದಲ್ಲಿ ವಿಜಯಶಾಲಿಯಾದರು ಎಂದರು.
ಮೈಸೂರಿನಲ್ಲಿ ರೈತ ಸಂಘ ಚರ್ಚೆಯಲ್ಲಿ ನಂಜುಂಡಸ್ವಾಮಿರವರ ಜೊತೆಯಲ್ಲಿ ನಾನು ಭಾಗವಹಿಸಿದ್ದೆ. ಅಂದೇ ನಾನು ಗುಂಡೂರಾವ್ ರವರನ್ನ ನೇರ ಭೇಟಿ ಮಾಡಿದೆ. ಆರ್.ಗುಂಡೂರಾವ್ ರವರು ದಕ್ಷ ಆಡಳಿತಗಾರ. ಮುಖ್ಯಮುಖ್ಯಮಂತ್ರಿಯಾಗಿ ಜನಪರ ಕೆಲಸ ಮಾಡಿದ್ದಾರೆ. ಅನೇಕ ಕೆಲಸ ಮಾಡಿ ಸಾಕ್ಷ್ಮಿ ಗುಡ್ಡೆಗಳು ಇವೆ. ಶಿಕ್ಷಣಕ್ಕೆ ಒತ್ತು ನೀಡಿದರು ಎಂದರು.
ವರ್ಗಾವಣೆ ನೀತಿಯಲ್ಲಿ ಕಠಿಣ ನಿಲುವು ತಾಳಿದ್ದರು ದಿ.ಮಾಜಿ ಪ್ರಧಾನಿ ಇಂದಿರಾಗಾಂಧಿ, ಸಂಜಯ್ ರವರ ಹತ್ತಿರ ನಿಕಟ ಸಂಪರ್ಕವಿತ್ತು. ರಾಜಕೀಯದಲ್ಲಿ ಹಲವಾರು ಜನರನ್ನ ಬೆಳಸಿದರು 44ವರ್ಷ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದರು. ಮೂರು ವರ್ಷ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ ಅವರ ಪ್ರತಿಮೆ ಸ್ಥಾಪಿಸಿರುವುದು ಒಳ್ಳೆಯ ಕೆಲಸ ಎಂದರು
ದಿನೇಶ್ ಗುಂಡೂರಾವ್ ಮಾತನಾಡಿ, ನಮ್ಮ ತಂದೆಯವರಾದ ಆರ್.ಗುಂಡೂರಾವ್ ರವರು ಮುಖ್ಯಮಂತ್ರಿಯಾಗಿರುವ ಇತಿಹಾಸ, ಬ್ರಾಹ್ಮಣ ಸಮುದಾಯ, ಶಿಕ್ಷಕ ಕುಟುಂಬದ ಮಗನಾದ ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದರು ಎಂದರು.
ಹಂತಹಂತವಾಗಿ ಬೆಳದ ಎರಡು ಬಾರಿ ಶಾಸಕರಾಗಿ ನಂತರ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾದರು. ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿದರು. ಮೂರು ವರ್ಷದ ಮುಖ್ಯಮಂತ್ರಿಯಾಗಿ ಆಡಳಿತ ಅವಧಿಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣವನ್ನು 40 ವರ್ಷಗಳ ಹಿಂದೆ ಸ್ಥಾಪಿಸಿದರು. ನಗರ ಸಿಲಿಕಾನ್ ಸಿಟಿಯಾಗಿ ಬೆಳಯಲು ಕಾರಣರಾದರು ಎಂದರು.
ಇಂಜನಿಯರ್, ವೈದ್ಯಕೀಯ ಕಾಲೇಜು ಸ್ಥಾಪನೆ ಮತ್ತು ವಿಧಾನಸೌಧ ಮುಂಭಾಗ ಅಂಬೇಡ್ಕರ್ ಪ್ರತಿಮೆ, ವಿಧಾನಸೌಧದ ಎಲ್ಲ ಕಛೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಮತ್ತು ವರ್ಗಾವಣೆಯಲ್ಲಿ ಕಠಿಣ ನಿಲುವು ಮತ್ತು ವಿಶ್ವ ಕನ್ನಡ ಸಮ್ಮೇಳನ, ಮೈಸೂರು ಕಲಾಮಂದಿರ, ಜಂಗಲ್ ಲಾಡ್ಜ್ ಸ್ಥಾಪನೆ ಸೇರಿದಂತೆ ಹಲವಾರು ಜನ ಪರ ಕಾರ್ಯ ಮಾಡಿದ ಧೀಮಂತ ನಾಯಕರು ಅಡತಡೆ ಬಂದರು ವರ್ಣರಂಜಿತ ರಾಜಕಾರಣಿ ಎಂದು ಕೀರ್ತಿ ಪಡೆದರು ಎಂದರು.




