ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ಬೃಹತ್ ಮಹಿಳಾ ಸಮಾವೇಶ

3 years ago

ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ, ಚಿಕ್ಕಪೇಟೆ ವಾರ್ಡಿನ ಮಹಿಳೆಯರ ಮತ್ತು ಅಭಿಮಾನಿಗಳ ಸಮಾವೇಶವನ್ನು ವಿಜಯವಿಹಾರ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್, ಆರ್.ಗುಂಡೂರಾವ್ ಫೌಂಡೇಷನ್ ಅಧ್ಯಕ್ಷರಾದ ತಬು ದಿನೇಶ್ ಗುಂಡೂರಾವ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಜಿ.ರಾಮಚಂದ್ರರವರು, ಕಾಂಗ್ರೆಸ್ ಪಕ್ಷದ ಮುಖಂಡ ರಘುರವರು ಹಾಗೂ ಮಹಿಳಾ ಮುಖಂಡರು, ಮೇರುನಟ ಡಾ.ರಾಜ್ ಕುಮಾರ್ ಮತ್ತು ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸಿ ಮಹಿಳಾ ಸಮಾವೇಶ ಉದ್ಘಾಟನೆ ಮಾಡಿದರು.

ದೇಶದಲ್ಲಿ ಆಹಾರ ಮತ್ತು ತೈಲಬೆಲೆ ಏರಿಕೆಯಿಂದ ಹಾಗೂ ಅವೈಜ್ಞಾನಿಕ ಜಿ.ಎಸ್.ಟಿ.ಯಿಂದ ಬಡವರು, ಮಧ್ಯಮವರ್ಗದ ಕುಟುಂಬದವರು ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ.

ದಿನೇಶ್ ಗುಂಡೂರಾವ್ ಮಾತನಾಡಿ, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರವರು ದೇಶ ಕಂಡ ಅದ್ಬುತ ನಟ ಮತ್ತು ಮಾನವೀಯ ಗುಣವುಳ್ಳ ವ್ಯಕ್ತಿ. ಪುನೀತ್ ರಾಜ್ ಕುಮಾರ್ ರವರು ಎಲೆ ಮರೆ ಕಾಯಿಯಂತೆ ಸಮಾಜ ಸೇವೆ ಮಾಡಿದರು ಎಂದರು.

ನಾಡಿನ ಜನರ ಸಂಕಷ್ಟದಿಂದ ದೂರ ಮಾಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ ನಾಲ್ಕು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಎಂದರು.

200 ಯೂನಿಟ್ ವಿದ್ಯುತ್ ಉಚಿತ, ಮನೆಯ ಯಾಜಮಾನಿಗೆ 2000 ಹಾಗೂ ಪ್ರತಿ ವ್ಯಕ್ತಿಗೆ 10 ಕೆ.ಜಿ.ಅಕ್ಕಿ ಹಾಗೂ ನಿರುದ್ಯೋಗ ಭತ್ಯೆ ಗ್ಯಾರಂಟಿ ಕಾರ್ಡ್ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಬಡವರ ಪರ ಇರುವ ಪಕ್ಷ ಎಂದು ಹೇಳಿದರು.

ತಬು ದಿನೇಶ್ ಗುಂಡೂರಾವ್ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗಲಿ ಎಂದು ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಟೈಲರಿಂಗ್, ನಿಟ್ಟಿಂಗ್ ತರಬೇತಿ ಮತ್ತು ಎಂಬ್ರಾಯಿಡರಿ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಮಹಿಳೆ ಸಮಾಜದಲ್ಲಿ ತಾಯಿ, ತಂಗಿ ಮತ್ತು ಅಕ್ಕ ತಂಗಿಯಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸುವಳು ಎಂದು ಹೇಳಿದರು.

ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮತ್ತು ಬೆಂಗಾಲಿ ಆಸೋಸಿಯೇಷನ್ ಮತ್ತು ಮಾರ್ವಾಡಿ ಸಂಘ ಭಾಗವಹಿಸಿದ್ದರು.

Leave a Reply