ಬೆಂಗಳೂರುನಿಂದ ಚಾಲನೆ
ಬೆಂಗಳೂರು: ಕೆಪಿಸಿಸಿ ಕಛೇರಿಯ ಮುಂಭಾಗದಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ವತಿಯಿಂದ 34ನೇ ವರ್ಷದ ರಾಜೀವ್ ಗಾಂಧಿ ಯಾತ್ರೆ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ರಾಜ್ಯಸಭಾ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ಅಧ್ಯಕ್ಷ ಆರ್.ದೊರೈ, ಕಾಂಗ್ರೆಸ್ ಮುಖಂಡರಾದ ಮುಳಗುಂದ್, ಸೇವಾದಳದ ಅಧ್ಯಕ್ಷ ರಾಮಚಂದ್ರ, ಕಾರ್ಮಿಕ ವಿಭಾಗ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಐ.ಎನ್.ಟಿಯು.ಸಿ ಅಧ್ಯಕ್ಷ ಲಕ್ಷ್ಮಿವೆಂಕಟೇಶ್, ಗೌರವಾಧ್ಯಕ್ಷ ಶ್ರೀನಿವಾಸಪ್ಪ, ಪ್ರಧಾನ ಕಾರ್ಯದರ್ಶಿ ಪಿ.ಮಾಣಿಕ್ಯ ರೆಡ್ಡಿ, ಕಾರ್ಯದರ್ಶಿ ರಾಲ್ಫ್ ಚಾಲನೆ ನೀಡಿದರು.
ಜಿ.ಸಿ.ಚಂದ್ರಶೇಖರ್ ಮಾತನಾಡಿ, ರಾಜೀವ್ ಗಾಂಧಿ ದೂರದೃಷ್ಟಿ ಚಿಂತನೆಯುಳ್ಳ ನಾಯಕ. ಅವರ ಆಡಳಿತದ ಅವಧಿಯಲ್ಲಿ ದೇಶದ ಐ.ಟಿ. ತಂತ್ರಜ್ಞಾನ ವೇಗ ಕಂಡಿತು ಎಂದರು.
1971ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ನಡೆದಾಗ ಅಮೇರಿಕಾ ದೇಶವು ಯುದ್ಧ ನಿಲ್ಲಿಸಿ ಎಂದು ಹೇಳಿತು. ಅಂದಿನ ಪ್ರಧಾನಿ ಇಂದಿರಾಗಾಂಧಿರವರು ಯಾರ ಮಾತು ಲೆಕ್ಕಿಸದೇ ಪಾಕಿಸ್ತಾನ ವಿರುದ್ದ ಯುದ್ಧ ಮಾಡಿ ಜಯಶಾಲಿಯಾದರು. ಆದರೆ ಪಾಕಿಸ್ತಾನದ ವಿರುದ್ಧ ಸಿಂಧೂರ ಯುದ್ಧದಲ್ಲಿ ಅಮೇರಿಕಾದ ಮಾತು ಮೇಲೆ ಯುದ್ಧ ಸಗ್ವಿತಗೊಳಿಸುವುದು ಭಾರತೀಯ ಪಾಲಿಗೆ ನೋವಿನ ಸಂಗತಿಯಾಗಿದೆ. ದೇಶದಲ್ಲಿ ಉಗ್ರವಾದದ ವಿರುದ್ಧ ಹೋರಾಟ, ದೇಶದಲ್ಲಿ ಶಾಂತಿ ನೆಲಸಲು ರಾಜೀವ್ ಗಾಂಧಿ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಯಾತ್ರಾ ಸಮಿತಿ ಅಧ್ಯಕ್ಷ ಆರ್.ದೊರೈ ಮಾತನಾಡಿ, ರಾಜೀವ್ ಗಾಂಧಿ ಜ್ಯೋತಿ ಯಾತ್ರೆಯು ಕಳೆದ 34 ವರ್ಷಗಳಿಂದ ನಡೆಯುತ್ತಿದೆ. ಉಗ್ರಗಾಮಿಗಳ ಸಂಚಿಗೆ ರಾಜೀವ್ ಗಾಂಧಿಯವರು ಹತ್ಯೆಯಾದರು. ರಾಜೀವ್ ಗಾಂಧಿರವರು ಪ್ರಧಾನಿಯಾಗಿ ತಂತ್ರಜ್ಞಾನ, ವಿಜ್ಞಾನ ಕೃಷಿ, ಶಿಕ್ಷಣ ಉದ್ಯೋಗ ಎಲ್ಲ ರಂಗದಲ್ಲಿ ಮಹತ್ವಪೂರ್ಣ ಬದಲಾವಣೆ ತಂದು ದೇಶ ಅಭಿವೃದ್ಧಿಯತ್ತ ಸಾಗುವಂತೆ ಮಾಡಿದರು. ಉಗ್ರವಾದದ ವಿರುದ್ಧ ಹೋರಾಡಲು ರಾಜೀವ್ ಗಾಂಧಿ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ, ಪಾಂಡಿಚೇರಿ, ಕೇರಳ ಮೂಲಕ ಚೆನ್ನೈ ತಲುಪಲಿದೆ ಎಂದರು.
15 ತಾರೀಖು ಬೆಂಗಳೂರಿನಿಂದ ಆರಂಭವಾಗಿ ಮೈಸೂರು, ಚಾಮರಾಜನಗರ, ಸತ್ಯಮಂಗಲ ಪಾಲಕ್ಕಾಡ್ ನಿಂದ ತ್ರಿಶೂರ್ ಕೊಚ್ಚಿನ್, ತಿರುವಂತಪುರ, ನಾಗರಕೋಯಿಲ್ ಮಾರ್ಗವಾಗಿ ಶಿವಕಾಶಿ, ಮಧುರೈ, ಪಾಂಡಿಚೇರಿ, ಮಹಾಬಲಿಪುರಂ, ಚೆನ್ನೃ 21ನೇ ತಾರೀಖು ಶ್ರೀ ಪೆರಂಬದೂರ್ ಜ್ಯೋತಿಯಾತ್ರೆ ಕೊನೆಗೊಳ್ಳಲಿದೆ.




