ಕರ್ನಾಟಕದಲ್ಲಿ ಕೆರೆ ತುಂಬಿಸಿಧ ಭಗೀರಥ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

1 year ago

ಚಿತ್ರದುರ್ಗ(ಭರಮಸಾಗರ) ಸಿರಿಗೆರೆಯ ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಮಧ್ಯ ಕರ್ನಾಟಕದಲ್ಲಿ ಕೆರೆ ತುಂಬಿಸುವ ಮೂಲಕ ಈ ಭಾಗದ ಭಗೀರಥರಾಗಿದ್ದಾರೆ.

ಸಿರಿಗೆರೆಯ ತರಳಬಾಳು ಬೃಹನ್ಮಠದ ಯಾವುದೇ ಕಾರ್ಯಕ್ರಮ ಇದ್ದರೆ ಅದು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ. ಒಂದು ಚಿಂತನ ಮಂಥನ ಮಾಡಿ, ಪ್ರಸ್ತುತ ಸವಾಲುಗಳಿಗೆ ಪರಿಹಾರವನ್ನು ಪರಮಪೂಜ್ಯರು ಕೊಡುತ್ತಿದ್ದಾರೆ. ಇಂದಿನ ಆಧುನಿಕ ಭಾರತದಲ್ಲಿ ನಮ್ಮ ಪರಂಪರೆ ಸಂಸ್ಕಾರದಲ್ಲಿ ಬದುಕಿನ ಉತ್ತರ ಪಡೆಯಬೇಕೆಂದರೆ ಸಿರಿಗೆರೆ ಮಠಕ್ಕೆ ಬರಬೇಕು.

ಹಿರಿಯ ಜಗದ್ಗುರುಗಳು ಹಾಕಿರುವ ಪರಂಪರೆ ಬಹಳ ಅದ್ಭುತವಾಗಿದ್ದು, ಭಕ್ತರೆಂದರೆ ಭೇದವಿಲ್ಲ. ಭಕ್ತರೆಂದರೆ ಶ್ರೀಮಂತ, ಬಡವರಲ್ಲ. ಗುರುಗಳ ಪ್ರೀತಿಯೇ ಆಶೀರ್ವಾದ, ಅಂತಹ ಕಷ್ಟ ಕಾಲದಲ್ಲಿಯೇ ಮಠವನ್ನು ಉಳಿಸಿ ಬೆಳೆಸಿ ಪ್ರತಿಯೊಬ್ಬ ಭಕ್ತರೂ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿರುವುದು ನಮ್ಮ ಹಿರಿಯ ಗುರುಗಳು ಹಾಗೂ ಈಗಿನ ಜಗದ್ಗುರುಗಳು. ಎಂತಹ ಕಠಿಣ ಪರಿಸ್ಥಿತಿ ಬರಲಿ ಗಟ್ಟಿಯಾಗಿ ನಿಂತು ಎದುರಿಸುವ ಶಕ್ತಿ ನಮ್ಮ ಗುರುಗಳಿಗೆ ಇದೆ. ವಿಜ್ಞಾನ ಮತ್ತು ಧರ್ಮ ಒಂದೇ ನಾಣ್ಯದ ಮುಖಗಳು. ಅದನ್ನು ಆಧುನಿಕ ಬದುಕಿನಲ್ಲಿ ನೋಡಬೇಕೆಂದರೆ ಅದನ್ನು ಈ ಜಗದ್ಗುರುಗಳಲ್ಲಿ ನೋಡಬೇಕು. ಅವರು ನ್ಯಾಯ, ನೀತಿ, ಧರ್ಮವನ್ನು ಪ್ರತಿ ನಿತ್ಯ ನಮಗೆ ಮಾರ್ಗದರ್ಶನ ಮಾಡುವವರು, ಅವರು ವೈಜ್ಞಾನಿಕ ಆಧ್ಯಾತ್ಮಿಕ ಜಗದ್ಗುರುಗಳು. ಒಬ್ಬ ವಿದ್ಯಾರ್ಥಿಯಲ್ಲಿರುವ ಆಸಕ್ತಿ, ಒಬ್ಬ ಪರಿಣಿತರಲ್ಲಿ ಇರುವ ಹುಮ್ಮಸ್ಸು ನಮ್ಮ ಜಗದ್ಗುರುಗಳಲ್ಲಿ ನೋಡುತ್ತಿದ್ದೇವೆ. ಇಲ್ಲಿ ಋಷಿ ಮತ್ತು ಕೃಷಿ ಸಂಪತ್ತು ಎರಡೂ ಮೇಳವೇ ತರಳಬಾಳು ಮಹೋತ್ಸವ.

ಬರದ ನಾಡಿನಲ್ಲಿ ಕೆರೆಗಳನ್ನು ತುಂಬಿಸುವ ಕೆಲಸವನ್ನು ಯಾರೂ ಯೋಚನೆ ಮಾಡಿರಲಿಲ್ಲ. ಈ ನಾಡಿಗೆ ಎಂದು ಬರ ಬರದಂತೆ ಯೋಚನೆ ಮಾಡಿ ಸರ್ಕಾರದ ಮೇಲೆ ಒತ್ತಡ ತಂದು ಅದನ್ನು ಮಾಡಿಸಿರುವುದು ಪರಮಪೂಜ್ಯರು. ಚನ್ನಗಿರಿ ತಾಲೂಕು. ಭರಮಸಾಗರ ತಾಲೂಕಿನ ಕೆರೆಗಳನ್ನು ತುಂಬಿಸುವುದು ಭಗೀರಥ ಸಾಹಸ. ಗುರುಗಳು ಅಂತಹ ಸಾಹಸ ಮಾಡಿ ತೋರಿಸಿದ್ದಾರೆ. ಯಾವುದು ಅಸಾಧ್ಯವೋ ಅದನ್ನು ಸಾಧಿಸಿ ತೋರಿಸುವುದೇ ಪವಾಡ. ಅದನ್ನು ಪರಮಪೂಜ್ಯರು ಮಾಡಿ ತೋರಿಸಿದ್ದಾರೆ. ಮಾಜಿ ಸಚಿವ ಮಾಧುಸ್ವಾಮಿಯವರು ಸಣ್ಣ ನೀರಾವರಿ ಸಚಿವರಾಗಿದ್ದರು, ನಾನು ಗೃಹ ಸಚಿವನಾಗಿದ್ದೆ. ನಮ್ಮ ನಾಯಕ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದರು. ನಾವು ಅದನ್ನು ಕ್ಯಾಬಿನೆಟ್ನಲ್ಲಿ ಇಟ್ಟು ಪಾಸ್ ಮಾಡಿದ್ದೇವು. ಅದನ್ನು ಸ್ವಾಮೀಜಿಗಳು ನೋಡಿ, ಅರ್ಧ ಕೆಲಸ ಮಾಡಿದ್ದೀರಿ ಎಂದು ಹೇಳಿದರು. ನಾವು ಎರಡು ಹಂತದಲ್ಲಿ ಮಾಡುತ್ತೇವೆ ಎಂದು ಹೇಳಿದೇವು. ಆದರೆ, ಸ್ವಾಮೀಜಿಯುವರು ಒಂದೇ ಹಂತದಲ್ಲಿ ಆಗಬೇಕು ಎಂದು ಹೇಳಿದರು. ಅದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದೆವು. ತಕ್ಷಣ ಮತ್ತೊಂದು ಕ್ಯಾಬಿನೆಟ್ ಕರೆದು ಒಂದೇ ಹಂತದಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದೆವು.

ಮಧ್ಯ ಕರ್ನಾಟಕದ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿ. ಈ ಭಾಗದ ಭಗೀರಥ ಪರಮಪೂಜ್ಯ ತರಳಬಾಳು ಸ್ವಾಮೀಜಿ, ರೈತನದು ಬಯಲ ಬದುಕು. ಒಬ್ಬ ಕಾರ್ಮಿಕ ಕೆಲಸ ಮಾಡಲು ಕಾರ್ಖಾನೆ ಮೇಲೆ ಛಾವಣಿ ಇರುತ್ತದೆ. ರೈತ ಬಯಲಿನಲ್ಲಿ ನಿಸರ್ಗದಲ್ಲಿ ಕೆಲಸ ಮಾಡುತ್ತಾನೆ. ರೈತ ನಿಸರ್ಗದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಾನೆ. ರೈತ ಲಾಭ ನಷ್ಟ ನೋಡುವುದಿಲ್ಲ. ಅವನು ಬೆಳೆದದ್ದು ಕಿಮೀ ಕೀಟಗಳು, ಪಕ್ಷಿಗಳು ತಿನ್ನುತ್ತವೆ. ಅಂತಹ ರೈತನ ಭೂಮಿ ತಾಯಿಗೆ ನೀರು ಕೊಟ್ಟರೆ ಅವನು ಬೆವರ ಹನಿ ಸೇರಿಸಿ ಬಂಗಾರದ ಬೆಳೆ ಬೆಳೆಯುತ್ತಾನೆ.

ಇವತ್ತು ಕೃಷಿ ಶ್ರೀಮಂತ ಆಗಿದೆ. ರೈತ ಬಡವನಾಗಿದ್ದಾನೆ. ಕೃಷಿ ವಿಶ್ವ ವಿದ್ಯಾಲಯ ಕ್ಯಾಂಪಸ್ನಲ್ಲಿ ಸಂಶೋಧನೆ ಮಾಡಿದರೆ ಉಪಯೋಗವಿಲ್ಲ. ಕ್ಯಾಂಪಸ್ ಆಧಾರಿತ ಕೃಷಿ ವಿಶ್ವ ವಿದ್ಯಾಲಯ ತೆಗೆದು ರೈತರ ಹೊಲವನ್ನೇ ಕ್ಯಾಂಪಸ್ ಮಾಡುವ ವಿಶ್ವ ವಿದ್ಯಾಲಯಗಳು ಬರಬೇಕು. ಕೃಷಿ ಸಂಪತ್ತಿಗೆ ಋಷಿ ಸಂಪತ್ತು ಸೇರಬೇಕು. ಒಂದು ಮಠದ ಸಂಪತ್ತು ಅದರ ಶ್ರೀಮಂತಿಕೆಯ ಮೇಲೆ ಅಲ್ಲ, ಅದರ ಭಕ್ತರು ಎಷ್ಟು ಶ್ರೀಮಂತರಾಗುತ್ತಾರೆ ಮಠ ಅಷ್ಟು ಶ್ರೀಮಂತವಾಗುತ್ತದೆ. ಇದು ಬಸವಣ್ಣನ ನಾಡು ಇಲ್ಲಿ ಎಲ್ಲದಕ್ಕೂ ಉತ್ತರ ಇದೆ. ಧರ್ಮದ ಬಗ್ಗೆ ಜಿಜ್ಞಾಸೆ ಇದೆ. ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ, ಕಳಬೇಡ ಕೊಲಬೇಡ ಅಂತ ಹೇಳಿದ್ದಾರೆ. ಭಾರತದ ಸಾಹಿತ್ಯಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ದೊಡ್ಡ ಕೊಡುಗೆಗಳು, ಈ ಮಠ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುತ್ತ ಬಂದಿದೆ.

ಮನುಷ್ಯ ಜನ್ಮ ಬಹಳ ಪುಣ್ಯವಂತರು. ಪಾಣಿಗಳಾಗಿ ಹುಟ್ಟಿದ್ದರೆ ನಾವು ಯಾರೂ ಇಲ್ಲಿ ಕೂಡುತ್ತಿರಲಿಲ್ಲ. ವಿಚಾರ ಮಾಡುವ ಶಕ್ತಿಯನ್ನು ಭಗವಂತ ನಮಗೆ ಕೊಟ್ಟಿದ್ದಾರೆ. ಇಡೀ ಪ್ರಕೃತಿಯ ಅಭಿವೃದ್ಧಿಗಾಗಿ ಭಗವಂತ ನಮಗೆ ಕೊಟ್ಟಿದ್ದಾನೆ. ಮನುಷ್ಯ ಜನ್ಮ ಅತಿಹೆಚ್ಚು ಕಾಲ ಬದುಕುವುದು. ಈ ಭೂಮಿಯ ಮೇಲೆ ಬದುಕುವ ಕೊನೆಯ ಸಂಕೋಲೆ ಮನುಷ್ಯ ಮನುಷ್ಯನಿಗೆ ಹೊಂದಾಣಿಕೆಯ ಸಭಾವ ಇದೆ. 50 ಡಿಗ್ರಿ ಇರುವ ವಾತಾವರಣದಲ್ಲಿಯೂ ಇರುತ್ತಾನೆ. ಮೈನಸ್ ಡಿಗ್ರಿಯಲ್ಲೂ ಬದುಕುತ್ತಾನೆ. ಮನುಷ್ಯನ ಚಿಂತನೆ. ವಿಕಾಸ ಇಡೀ ಪ್ರಕೃತಿಯ ವಿಕಾಸ. ನಮಗೆಲ್ಲರಿಗೂ ಆ ಜಾಗೃತಿ ಮೂಡಿದರೆ ನಮ್ಮ ಪರಿಸರ. ಕಾಡು ಎಲ್ಲವೂ ರಕ್ಷಣೆಯಾಗುತ್ತದೆ. ಈ ನಾಡಿಗೆ ಗುರುಗಳ ಮಾರ್ಗದರ್ಶನ ಬಹಳ ಬೇಕಾಗಿದೆ. ಶ್ರೀಮಂತ ನಾಡು, ಬಡತನದತ್ತ ಸಾಗುತ್ತಿದೆ. ನಾವು ಸಾಲದ ಶೂಲದಲ್ಲಿ ಸಿಲುಕುತ್ತಿದ್ದೇವೆ. ಅರಮನೆಗೂ ಗುರುಮನೆಗೂ ಏನು ಸಂಬಂಧ ಇತ್ತು ಅನ್ನುವುದನ್ನು ಇಲ್ಲಿಗೆ ಬಂದಿದ್ದ ಮಹಾರಾಜರನ್ನು ನೋಡಿ ತಿಳಿದುಕೊಳ್ಳಬೇಕು.

– ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

Leave a Reply