ಕರ್ನಾಟಕದ ಮಾನ್ಯ ಶಾಸಕವೃಂದದವರೆ, ತಮ್ಮನ್ನು ರಾಜ್ಯ ಚುನಾಯಿಸಿ ಕಳುಹಿಸಿರುವುದು ನಮ್ಮ ಜನಪ್ರತಿನಿಧಿಗಳಾಗಿ, ವಿಧಾನಮಂಡಲದಲ್ಲಿ ಶಾಸನ ರಚನೆ ಮಾಡಿ, ಕಾರ್ಯಕ್ರಮ ಅನುಷ್ಠಾನಗಳ ಬಗ್ಗೆ ಚರ್ಚೆ ಮಾಡಿ, ನಿಮ್ಮ ಕೆಲಸಗಳಿಗೆ ಉತ್ತರದಾಯಿತ್ವ ಇರಲಿ ಎಂದು. ನೀವು ಅಲ್ಲಿ ವ್ಯಯಿಸುವ ಪ್ರತೀ ನಿಮಿಷಕ್ಕೂ ನಾವು ನಮ್ಮ ಕಿಸೆಯಿಂದ ತೆರಿಗೆ ಹಣ ಕಟ್ಟಿದ್ದೇವೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ನಿಮ್ಮ ಖಾಸಗಿ ತೆವಲುಗಳು, ಹನಿಟ್ರ್ಯಾಪು ಇತ್ಯಾದಿಗಳನ್ನೆಲ್ಲ ಸದನದಲ್ಲಿ ಚರ್ಚೆ ಮಾಡುವುದಿದ್ದರೆ, ದಯಮಾಡಿ ಆ ವಿಚಾರಕ್ಕೆ ನೀವು ವ್ಯಯಿಸುವ ಸಮಯದ ಖರ್ಚನ್ನು ನಿಮ್ಮೆಲ್ಲರ ಕಿಸೆಯಿಂದ ಭರಿಸಿ. ನೀವೆಲ್ಲರೂ ಎಷ್ಟೆಷ್ಟೆಲ್ಲ ಮಹಾತ್ಮರೆಂದು ನಾಡಿನ ಜನತೆಗೆ ಈಗಾಗಲೇ ಗೊತ್ತಿದೆ. ಅದನ್ನು ನೀವು ಮತ್ತೆ ತೋರಿಸಿಕೊಡಬೇಕಾಗಿಲ್ಲ.
ಮಾನ್ಯ (ಶ್ರೀ. UT Khader) ಸ್ಪೀಕರ್ ಸರ್, ಇಂತಹ ಪ್ರತೀಯೊಂದು “ಅಸಂಸದೀಯ”, “ಅನಗತ್ಯ” ಕಾಲಹರಣಗಳಾದಾಗ, ಅಂತಹ ಸಂಬಂಧಿತ ಶಾಸಕರಿಗೆ, ಸಚಿವರಿಗೆ ಆ ವ್ಯಯವಾದ ಸಮಯದ “ಖರ್ಚಿನ ಬಿಲ್” ಕಳುಹಿಸುವುದನ್ನು ಮತ್ತು ಆಯಾಯ ಅಧಿವೇಶನದಲ್ಲೇ ಆ ವೆಚ್ಚವನ್ನು ಸಂಬಂಧಿತರಿಂದ ವಸೂಲಿ ಮಾಡಿ, ಸರ್ಕಾರದ ಬೊಕ್ಕಸಕ್ಕೆ ಭರ್ತಿಮಾಡುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ. ವಿಧಾನಮಂಡಲದ ಹಣ ಅಪವ್ಯಯ ಆಗದಂತೆ ತಡೆಯುವ ಸಾಂವಿಧಾನಿಕ ಹೊಣೆಗಾರಿಕೆ ತಮಗಿದೆ.
ಸದನವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗುವುದಕ್ಕೆ ಬೇಕಾದ ಎಲ್ಲ ತೀರ್ಮಾನಗಳನ್ನೂ ತೆಗೆದುಕೊಳ್ಳುವ ಅಧಿಕಾರವನ್ನು ಭಾರತದ ಸಂವಿಧಾನ ತಮಗೆ ನೀಡಿದೆ. ದಯವಿಟ್ಟು ಅದನ್ನು ಸದುಪಯೋಗಪಡಿಸಿಕೊಳ್ಳಿ, ಸಾರ್ವಜನಿಕ ದುಡ್ಡು, ಸದನದಲ್ಲಿ ಅನಗತ್ಯ ಚರ್ಚೆಗಳ ಮೂಲಕ ಪೋಲಾಗದಂತೆ ಜಾಗ್ರತೆ ವಹಿಸಿ. ಅದನ್ನೆಲ್ಲ ಅವರು ಬೀದಿ ಬದಿಯಲ್ಲಿ ಚರ್ಚೆ ಮಾಡಿಕೊಳ್ಳಲಿ. ಸದನದ ಒಳಗೆ ಬೇಡ. ಈ ಬಗ್ಗೆ ಗಟ್ಟಿ ಮನಸ್ಸು ಮಾಡಿ ತೀರ್ಮಾನ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ನಮ್ರ ವಿನಂತಿ.
– ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತರು



