ಬಿಜೆಪಿ ನಾಯಕರು ಪ್ರತಿಯೊಂದು ಪ್ರಕರಣದ ವಿಚಾರದಲ್ಲೂ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಸದಾ ಒತ್ತಾಯ ಮಾಡುತ್ತಿರುವುದನ್ನು ಕೇಳುತ್ತಿದ್ದರೆ ಬಹುಷಃ ಇವರಿಗೆ ಕರ್ನಾಟಕ ರಾಜ್ಯದ ಪೊಲೀಸ್ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೆಂದು ಅನಿಸುತ್ತದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಆದುದರಿಂದ ಎಲ್ಲಾ ಪೊಲೀಸ್ ಅಧಿಕಾರಿಗಳ ಮೇಲೆ ಅನುಮಾನವನ್ನು ಪಡುತ್ತಿದ್ದಾರೆ ಎನ್ನಬಹುದು. ಇದೇ ಪೊಲೀಸ್ ಅಧಿಕಾರಿಗಳು ಬಿಜೆಪಿ ಸರ್ಕಾರವಿದ್ದಾಗ ಹಗರಣಗಳು ನಡೆದಾಗ ತನಿಖೆಯನ್ನು ನಡೆಸಿರುವುದು ಎಂಬುದನ್ನು ಮರೆತುಬಿಟ್ಟಿದ್ದಾರೆ. ಅಂದು ಇವರಿಗೆ ಸಿಬಿಐ ನೆನಪಿಗೆ ಬರಲಿಲ್ಲ. ರಾಜ್ಯದ ತನಿಖಾ ಸಂಸ್ಥೆಗಳ ಮೇಲೆ ಅತಿಯಾದ ವಿಶ್ವಾಸವಿತ್ತು. ಇಂದು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದರಿಂದ ಇವರು ಪದೇ ಪದೇ ಸಿಬಿಐ ಸಂಸ್ಥೆಯ ಜಪವನ್ನ ಮಾಡುತ್ತಿದ್ದಾರೆ.
ಇವರು ಮಾತನಾಡುತ್ತಿರುವ ರೀತಿಯನ್ನು ನೋಡಿದರೆ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿ ತನಿಖಾ ಸಂಸ್ಥೆಯನ್ನು ಮತ್ತು ಎಸ್ಐಟಿ ಗಳನ್ನು ರದ್ದು ಮಾಡಿ ಎಲ್ಲವನ್ನು ಸಿಬಿಐಗೆ ಒಪ್ಪಿಸಬೇಕು ಎನ್ನುವ ಮನೋಭಾವವಾಗಿದೆ.
ಕಳೆದ ಎರಡು ದಶಕದಲ್ಲಿ ಹಲವಾರು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದೆ. ಅದರಲ್ಲೂ ವಿಶೇಷವಾಗಿ 2013ರಿಂದ 2018ರ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಹಲವಾರು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿರುತ್ತಾರೆ. ಆದರೆ ಬಿಜೆಪಿಯವರು ತಾವು ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಸಹಸ್ರಾರು ಕೋಟಿ ರೂಪಾಯಿಗಳ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಹಗರಣದಿಂದ ಹಿಡಿದು ಯಾವುದನ್ನು ಎಷ್ಟೇ ಒತ್ತಾಯ ಮಾಡಿದರು ಸಿಬಿಐಗೆ ಕೊಡಲಿಲ್ಲ. ಆದರೆ ಈಗ ಎಲ್ಲ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂದು ಹೇಳುವುದು ಇವರ ಎರಡು ನಾಲಿಗೆಯ ಸಂಸ್ಕೃತಿಯನ್ನು ತೋರಿಸುತ್ತದೆ.
ರಾಜ್ಯ ಸರ್ಕಾರದ ಪೊಲೀಸ್ ಅಧಿಕಾರಿಗಳು ಭಾರತ ದೇಶದಲ್ಲಿಯೇ ಅತ್ಯಂತ ನುರಿತವರು, ಅನುಭವಿಶಾಲಿಗಳು ಮತ್ತು ಚುರುಕಾಗಿ ಕೆಲಸವನ್ನು ನಿರ್ವಹಿಸುತ್ತಾರೆ. ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ತನಿಖೆಯನ್ನು ನಡೆಸುತ್ತಾರೆ ಎನ್ನುವ ವಿಶ್ವಾಸ ಸಮಸ್ತ ಕನ್ನಡಿಗರಲ್ಲಿದೆ. ಆದರೆ ಬಿಜೆಪಿ ನಾಯಕರಿಗೆ ಮಾತ್ರ ನಮ್ಮ ರಾಜ್ಯದ ಪೊಲೀಸ್ ಅಧಿಕಾರಿಗಳ ಬಗ್ಗೆ ಅನುಮಾನವಿದೆ.
ನಮ್ಮ ರಾಜ್ಯದ ಪೊಲೀಸ್ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಯಾವುದೇ ಹಗರಣವನ್ನು ತನಿಖೆ ನಡೆಸಿ ಪಕ್ಷಾತೀತವಾಗಿ ವರದಿಯನ್ನ ನೀಡುತ್ತಾರೆ. ತಪ್ಪು ಮಾಡಿದವರ ಮೇಲೆ ಕಾನೂನಿನ ಕ್ರಮವನ್ನ ಕೈಗೊಳ್ಳುತ್ತಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆ ಇದೆ. ಯಾವುದೇ ಕಾರಣದಲ್ಲಿಯೂ ನಮ್ಮ ರಾಜ್ಯದ ಪೊಲೀಸ್ ಅಧಿಕಾರಿಗಳು ಸರ್ಕಾರಗಳ ಹಸ್ತಕ್ಷೇಪವನ್ನು ಒಪ್ಪುವರಲ್ಲ ಮತ್ತು ಅಂತಹ ಒತ್ತಡಗಳಿಗೆ ಮಣಿಯುವವರು ಅಲ್ಲ. ಆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪದೇಪದೇ ಸಿಬಿಐ ತನಿಖೆಯ ವಿಚಾರವನ್ನು ಬಿಟ್ಟು ನಮ್ಮ ರಾಜ್ಯದ ಪೊಲೀಸ್ ಅಧಿಕಾರಿಗಳ ದಕ್ಷತೆಯ ವಿಚಾರದಲ್ಲಿ ಅನುಮಾನವನ್ನ ವ್ಯಕ್ತಪಡಿಸುವಂತಹ ಮನಸ್ಥಿತಿಯಿಂದ ಹೊರಬರಲಿ.
ಈಗಾಗಲೇ ಸಿಬಿಐಗೆ ಒಪ್ಪಿಸಿರುವ ಅನೇಕ ಪ್ರಕರಣಗಳಲ್ಲಿ ಯಾವುದೇ ರೀತಿಯ ಪ್ರಗತಿಗಳಾಗಿಲ್ಲ. ರಾಜಕೀಯ ಉದ್ದೇಶವಿದ್ದರೆ ಮಾತ್ರ ಮತ್ತು ಬಿಜೆಪಿಗೆ ಅನುಕೂಲವಾಗುವ ಪ್ರಕರಣಗಳಾದರೆ ಮಾತ್ರ ತ್ವರಿತ ಗತಿಯಲ್ಲಿ ತನಿಖಾಧಿಕಾರಿಗಳನ್ನು ನೇಮಿಸುವ ಸಿ ಬಿ ಐ, ಅನ್ಯಪ್ರಕರಣಗಳಲ್ಲಿ ಇಂತಹ ಉತ್ಸಾಹವನ್ನು ಏಕೆ ತೋರಿಸುತ್ತಿಲ್ಲ?
ಸಿಬಿಐಗೆ ನಿಜಕ್ಕೂ ಸಹ ಅಪರಾಧಿಗಳ ವಿಚಾರದಲ್ಲಿ ಕಠಿಣವಾದ ನಿಲುವು ಇರುವುದಾದರೆ ಕೂಡಲೇ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿನ ತನಿಖೆಯನ್ನು ಆರಂಭಿಸಿ, ಅಪರಾಧಿಗಳನ್ನು ಪರಪ್ಪನ ಅಗ್ರಹಾರಕ್ಕೆ ಹಾಕಿ, ನೊಂದ ನಾಗರೀಕ ಬಂಧುಗಳಿಗೆ ನ್ಯಾಯವನ್ನು ಒದಗಿಸಿಕೊಳ್ಳಲು ಕಾರ್ಯಪ್ರವೃತ್ತರಾಗಿ.
– ಕೆ ಎಸ್ ನಾಗರಾಜ್, ಬೆಂಗಳೂರು




