ಇತ್ತೀಚಿನ ದಿನಗಳಲ್ಲಿ ಔಷಧಿ ಮತ್ತು ಮಾತ್ರಗಳ ದರ ಹಾಗೂ ದೀಪಾವಳಿಯಲ್ಲಿ ಸುಡುವ ಪಟಾಕಿ ದರವು ಒಂದೇ ರೀತಿಯಲ್ಲಿ ಇರುತ್ತದೆ. ಪಟಾಕಿ ಮಾರಾಟ ಮಾಡುವವರು, ಪ್ಯಾಕೆಟ್ ಮೇಲೆ ಹಾಕಿರುವ ದರದಲ್ಲಿ ಹತ್ತರಿಂದ ಹಿಡಿದು ಶೇಕಡ 80ರಷ್ಟು ರಿಯಾಯಿತಿಯನ್ನು ಕೊಡುತ್ತಾರೆ. ಇದೇ ರೀತಿಯಲ್ಲಿ, ಔಷಧಿ ಮತ್ತು ಮಾತ್ರೆಗಳ ದರದಲ್ಲೂ ಹಲವಾರು ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಗಳಲ್ಲಿ ಪರಿಚಯ ಇರುವವರಿಗೆ ಶೇಕಡ ಶೇಕಡ 10 ರಿಂದ 40% ರಿಯಾಯಿತಿಯನ್ನು ಕೊಡುತ್ತಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕೆಲವು ಔಷಧಿ ಮಳಿಗೆಯವರು ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಮಳಿಗೆಗಳನ್ನ ಸ್ಥಾಪಿಸಬೇಕಾದರೆ ಅಲ್ಲಿನ ಆಸ್ಪತ್ರೆಯವರಿಗೆ ಶೇಕಡ 40ರಷ್ಟು ರಿಯಾಯಿತಿಯನ್ನು ಕೊಟ್ಟರೆ ಮಾತ್ರ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ ಎಂಬ ಮಾತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ನೇರವಾಗಿ ಔಷಧಿ ತಯಾರಕರ ಕಂಪನಿಗಳಿಂದ ಔಷಧಿಯನ್ನು ಖರೀದಿಸಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಔಷಧಿ ಮಳಿಗೆಗಳನ್ನ ಸ್ಥಾಪಿಸಿದರೆ, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸಿಕೊಟ್ಟರೆ, ಸಾಕಷ್ಟು ಅನುಕೂಲವಾಗುತ್ತದೆ.
ಈಗಾಗಲೇ ಜನರಿಕ್ ಔಷಧಿ ಮಳಿಗೆಗಳು ಇರುತ್ತವೆ. ಆದರೆ ಬಹಳಷ್ಟು ಔಷಧಿಗಳು ಅಲ್ಲಿ ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ನಾಗರಿಕರು ಅನಿವಾರ್ಯವಾಗಿ ಔಷಧಿ ಮಳಿಗೆಗಳ ಬಳಿಯಲ್ಲಿ ಔಷಧಿಯನ್ನು ಖರೀದಿಸುತ್ತಾರೆ. ಆದುದರಿಂದ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆಲೋಚನೆಯನ್ನು ಮಾಡಿ ಯಾವ ರೀತಿಯಲ್ಲಿ ಆಹಾರ ಪದಾರ್ಥಗಳ ವಿತರಣೆಗೆ ಪಡಿತರ ಅಂಗಡಿಗಳು ಇದೆಯೋ ಅದೇ ರೀತಿಯಲ್ಲಿ ಔಷಧಿಗಳ ಮಾರಾಟಕ್ಕೂ ಸಹ ಆರೋಗ್ಯ ಇಲಾಖೆ ವತಿಯಿಂದ ಮಳಿಗೆಗಳನ್ನು ಸ್ಥಾಪಿಸಿ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳ ಕಾಂಪೌಂಡಿನ ಒಳಗಡೆ ಮೊದಲು ಸ್ಥಾಪಿಸಿ ನಂತರ ಇದನ್ನು ವಿಸ್ತರಿಸಿ.
– ಕೆ ಎಸ್ ನಾಗರಾಜ್, ಬೆಂಗಳೂರು




