ಭಾರತ ದೇಶದಲ್ಲಿಯೇ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಎಂಟು ಬಾರಿ ಆಯ್ಕೆಯಾಗಿ 45 ವರ್ಷಗಳನ್ನು ಪರಿಷತ್ತಿನ ಸದಸ್ಯರಾಗಿ ಪೂರೈಸಿದಂತಹ ಇತಿಹಾಸ ಹೊರಟಿರುವರು ನಿರ್ಮಿಸಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಚುನಾಯಿತ ಪ್ರತಿನಿಧಿ ಎಂಟು ಬಾರಿ ವಿದ್ಯಾವಂತ ಮತದಾರರು ಎಂದು ಗುರುತಿಸಲ್ಪಟ್ಟಿರುವ ಪ್ರಜ್ಞಾಪೂರ್ವಕ ನಿರ್ಣಯಗಳನ್ನ ಕೈಗೊಳ್ಳುವ ಪ್ರಬುದ್ಧ ಜನರನ್ನು ಹೊಂದಿರುವ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುವುದು ಎಂದರೆ ಸಾಮಾನ್ಯ ಸಂಗತಿಯಲ್ಲ.
ಚುನಾಯಿತ ಪ್ರತಿನಿಧಿ 45 ವರ್ಷಗಳ ಕಾಲ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ತೆರೆದ ಪುಸ್ತಕದಂತೆ ತಮ್ಮ ಸಾರ್ವಜನಿಕ ಬದುಕನ್ನು ನಡೆಸಿಕೊಂಡು, ಆರಂಭದಲ್ಲಿ ಗಳಿಸಿದ್ದ ವಿಶ್ವಾಸ, ಪ್ರೀತಿ ಜನರ ಅಭಿಮಾನವನ್ನು ಚುನಾವಣೆಯಿಂದ, ಚುನಾವಣೆಗೆ ಹೆಚ್ಚಿಸಿಕೊಳ್ಳುತ್ತಾ ಅಪಾರವಾದ ಜನರ ಪ್ರೀತಿ-ವಿಶ್ವಾಸದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರುವುದು ಸಾಮಾನ್ಯವಾದಂತ ಸಂಗತಿಯಲ್ಲ.
ಮತದಾರ ಪ್ರಭುಗಳು ಯಾವ ಚುನಾಯಿತ ಪ್ರತಿನಿಧಿಗಳಿಂದಲೂ ಬಯಸುವುದು ಗೌರವ ಮತ್ತು ಅವರ ಆತ್ಮಭಿಮಾನಕ್ಕೆ ಧಕ್ಕೆಯಾಗದಂತಹ ನಡವಳಿಕೆಗಳನ್ನು ಮಾತ್ರ. ಯಾವ ಚುನಾಯಿತ ಪ್ರತಿನಿಧಿ ತಮ್ಮ ಮತದಾರ ಬಂಧುಗಳ ಗೌರವಕ್ಕೆ ಸಾಸಿವೆ ಕಾಳಿನಷ್ಟು ಧಕ್ಕೆಯಾಗದಂತೆ ಅವರಿಗೆ ಸ್ಪಂದಿಸುತ್ತಾ ಪ್ರೀತಿಯಿಂದ ನಡೆದುಕೊಂಡರೆ, ಎಷ್ಟು ಚುನಾವಣೆಗಳನ್ನು ಬೇಕಾದರೂ ನಿರಾಯಾಸವಾಗಿ ಗೆಲ್ಲಬಹುದು ಎನ್ನುವುದಕ್ಕೆ ಶ್ರೀ ಬಸವರಾಜ ಹೊರಟ್ಟಿರವರು ಸಾಕ್ಷಿಯಾಗಿದ್ದಾರೆ.
ಒಬ್ಬ ಶಿಕ್ಷಕರಾಗಿ, ಶಿಕ್ಷಕರ ಸಂಘಟನೆಯ ಪ್ರಮುಖರಾಗಿ, ಶಿಕ್ಷಕರ ಸಮಸ್ಯೆಗಳನ್ನ ಅರಿತು ಹೋರಾಟದ ಮೂಲಕವೇ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿ, 1980ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ 45 ವರ್ಷಗಳು ಕಳೆದರೂ ಸಹ ಇಂದಿಗೂ ಅಷ್ಟೇ ಗೌರವ ಮತ್ತು ಅಭಿಮಾನವನ್ನು ಕೇವಲ ತಾವು ಪ್ರತಿನಿಧಿಸುವ ಮತದಾರ ಪ್ರಭುಗಳ ಮೂಲಕವಲ್ಲದೆ ನಾಡಿನ ಸಮಸ್ತ ಸೌಜನ್ಯದ ರಾಜಕಾರಣವನ್ನು ಬಯಸುವ ಎಲ್ಲ ರಾಜಕೀಯ ಆಸಕ್ತರಿಂದ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.
ಹೊರಟ್ಟಿಯವರ ಸುದೀರ್ಘವಾದ ರಾಜಕೀಯ ಪ್ರಯಾಣದ ಯಶಸ್ಸಿನ ಹಿಂದೆ ಇರುವುದು ಅವರ ಸರಳತೆ. ಯಾವುದೇ ವ್ಯಕ್ತಿ ಯಾವುದೇ ಮತ, ಜಾತಿ, ಧರ್ಮ ಯಾವುದೇ ಇರಲಿ ಅವರ ಆರ್ಥಿಕ ಪರಿಸ್ಥಿತಿ ಏನೇ ಇರಲಿ, ಸಮಸ್ಯೆಯನ್ನ ಹೊತ್ತು ಬಂದವರಿಗೆ ಪ್ರೀತಿಯಿಂದ ಮಾತನಾಡಿಸಿ ಅವರ ಕೆಲಸವನ್ನ ಮಾಡಿಕೊಡುವ ಇವರ ಜವಾಬ್ದಾರಿಯುತ ನಡವಳಿಕೆ ಇವರನ್ನು ಯಶಸ್ಸಿನ ದಾರಿಯಲ್ಲಿ ಸಾಗಲು ಪ್ರಮುಖ ಕಾರಣವನ್ನಾಗಿಸಿದೆ.
ಸೌಜನ್ಯದ ನಡವಳಿಕೆ ಇವರ ಮತ್ತೊಂದು ಯಶಸ್ಸಿನ ಗುಟ್ಟು. ಹಿರಿಯರ ಬಗ್ಗೆ ಅಪಾರವಾದ ಗೌರವ. ಕಿರಿಯರ ಬಗ್ಗೆ ಅಷ್ಟೇ ಪ್ರೀತಿ. ವಯಸ್ಸಿನ ಅಂತರ ಎಷ್ಟೇ ಇರಲಿ, ಸೌಜನ್ಯದಿಂದ ಅವರನ್ನ ಮಾತನಾಡಿಸಿ ಅವರ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅವರೊಂದಿಗೆ ನಡೆದುಕೊಳ್ಳುವುದರ ಮೂಲಕ ಸಮಾಜದಲ್ಲಿ ಗಣ್ಯರಾದ ವ್ಯಕ್ತಿ ಒಬ್ಬರು, ಎಷ್ಟು ಸೌಜನ್ಯವಾಗಿ ನಡೆದುಕೊಳ್ಳಬಹುದು ಎನ್ನುವುದನ್ನ ತಮ್ಮ ನಡವಳಿಕೆಯ ಮೂಲಕ ಅನ್ಯರಿಗೆ ತೋರಿಸಿಕೊಟ್ಟಿದ್ದಾರೆ.
ಹೊರಟ್ಟಿಯವರ ಯಶಸ್ಸಿನ ಹಾದಿಯಲ್ಲಿ ಅವರ ಸಜ್ಜನಿಕೆಯೂ ಸಹ ದೊಡ್ಡ ಪಾತ್ರವನ್ನು ವಹಿಸಿದೆ. ಅವರೊಂದಿಗೆ ಮಾತನಾಡಿದಾಗ, ಅವರೊಂದಿಗೆ ಪ್ರಯಾಣವನ್ನು ಮಾಡಿದಾಗ, ಅವರ ಸಜ್ಜನಿಕೆಯ ಪರಿಚಯವಾಗುತ್ತದೆ. ತಮ್ಮ ಜೊತೆಗಾರರ ಬಗ್ಗೆ ಕಾಳಜಿ ವಹಿಸುವ ಅವರು, ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ಮಾಡುವುದಿಲ್ಲ. ಎಲ್ಲರನ್ನೂ ಒಂದೇ ಭಾವದಿಂದ ನಡೆಸಿಕೊಳ್ಳುತ್ತಾರೆ.
ಹೊರಟ್ಟಿಯವರ ಯಶಸ್ಸಿನ ಮತ್ತೊಂದು ಗುಟ್ಟು ಅವರ ಸಂಸ್ಕಾರವಂತಿಕೆ. ಇದು ಪರಿಚಯವಾಗಬೇಕಾದರೆ ಅವರ ಜೊತೆಯಲ್ಲಿ ಓಡಾಡಿ ಅವರ ನಡವಳಿಕೆಯನ್ನು ಗಮನಿಸಬೇಕು. ತಮ್ಮ ಊರಿಗೆ ಯಾರಾದರೂ ಹಿರಿಯರು ಬಂದರೆ ಅವರನ್ನ ರೈಲ್ವೆ ನಿಲ್ದಾಣದಲ್ಲಿ ಬರಮಾಡಿಕೊಂಡು ಅವರು ಮತ್ತೆ ಮರಳಿ ತಮ್ಮ ಊರಿಗೆ ಹೊರಡುವ ತನಕ ಅವರ ಯೋಗ ಕ್ಷೇಮದ ಜವಾಬ್ದಾರಿಯನ್ನ ಹೊತ್ತುಕೊಂಡು, ಕರ್ತವ್ಯ ನಿರ್ವಹಿಸುವ ರೀತಿಯನ್ನು ನಾವು ಗಮನಿಸಿದ್ದೇವೆ.
ಶ್ರೀರಾಮಕೃಷ್ಣ ಹೆಗಡೆಯವರು , ಡಾ. ಜೀವರಾಜ್ ಆಳ್ವ ಅವರು, ಸಾಹಿತಿಗಳು, ಕಲಾವಿದರು, ಜೊತೆಗೆ ಸಾಮಾನ್ಯ ಕಾರ್ಯಕರ್ತರು, ಹುಬ್ಬಳ್ಳಿಗೆ ಬಂದ ಸಂದರ್ಭದಲ್ಲಿ ಅವರ ಬಗ್ಗೆ ತೋರಿಸಿದ್ದ ಕಾಳಜಿ ಅದೇ ಪ್ರಮಾಣದಲ್ಲಿ ಸಾಮಾನ್ಯ ಜನರು ಸಹ ವಿವಿಧ ಕಾರಣಗಳಿಗೆ ಅವರ ಊರಿಗೆ ಹೋದರೆ ಅವರ ಕಾಳಜಿ ಮತ್ತು ಪ್ರೀತಿಯನ್ನು ಸಹ ಗಮನಿಸಿದಾಗ ಇವರಲ್ಲಿರುವ ಸಂಸ್ಕಾರವಂತಿಕೆಯ ಗುಣ ಇವರನ್ನು ದೊಡ್ಡವರನ್ನಾಗಿಸಿದೆ. ಇವುಗಳಿಂದಾಗಿ ಜನರ ಪ್ರೀತಿ ಎಂದೂ ಬಾಡದಂತೆ ಇವರನ್ನ ರಕ್ಷಿಸಿದೆ ಎನ್ನುವುದನ್ನು ಅರಿಯಬಹುದು.
ಇವರ ಬಳಿಯಲ್ಲಿ ಸಹಾಯವನ್ನ ಪಡೆದುಕೊಳ್ಳುವವರು ಇವರಿಗೆ ಪರಿಚಯಸ್ಥರಾಗಿರಬೇಕಿಲ್ಲ, ಇವರ ಊರಿನವರು ಆಗಬೇಕಾಗಿಲ್ಲ, ಇವರ ಬಳಿಗೆ ಹೋಗಿ ಸಮಸ್ಯೆಯನ್ನ ಹೇಳಿಕೊಂಡರೆ ಸಾಕು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇದು ಇವರ ವಿಶೇಷವಾದ ಗುಣ. ಸಾಮಾನ್ಯವಾಗಿ ರಾಜಕಾರಣಿಗಳು ಸಹಾಯ ಮಾಡುವ ಸಂದರ್ಭದಲ್ಲಿ ಅವರು ಯಾರು, ಅವರ ಊರು ಯಾವುದು? ಅವರಿಂದ ನನಗೇನು ಅನುಕೂಲ, ಅವರು ನಮ್ಮ ಪಕ್ಷದವರೇ, ಅವರು ನಮ್ಮ ಜಾತಿಯವರೇ, ಅವರು ನಮ್ಮ ಬೆಂಬಲಿಗರೇ, ಎಂದೆಲ್ಲ ಲೆಕ್ಕ ಹಾಕಿ ನಂತರ ಸಹಾಯವನ್ನ ಮಾಡುತ್ತಾರೆ. ಇಲ್ಲದಿದ್ದರೆ ನೆಪಗಳನ್ನ ಹೇಳಿ ಕಳಿಸಿಕೊಡುತ್ತಾರೆ. ಇಂತಹ ಯಾವುದೇ ಪ್ರಸಂಗವನ್ನು ನಾವು ಹೊರಟ್ಟಿಯವರಲ್ಲಿ ಕಾಣಲು ಸಾಧ್ಯವಿಲ್ಲ. ಬಂದವರು ಯಾರಾದರೇನು, ನೊಂದವರು ಅವರು, ಎನ್ನುವ ಇವರ ನಡವಳಿಕೆ ಇವರನ್ನು ದೊಡ್ಡವರನ್ನಾಗಿಸಿವೆ.
ವಿಧಾನ ಪರಿಷತ್ತಿನ ಸದಸ್ಯರಾಗಿ, ಈ ರಾಜ್ಯದ ಮಂತ್ರಿಯಾಗಿ, ಸಭಾಪತಿಯಾಗಿ, ಹಲವಾರು ಹಂತದಲ್ಲಿ ಅಧಿಕಾರದ ಸ್ಥಾನದಲ್ಲಿ ಕರ್ತವ್ಯವನ್ನ ನಿರ್ವಹಿಸುತ್ತಿದ್ದರೂ ಸಹ, ಅಧಿಕಾರದ ಪಿತ್ತವನ್ನು ನೆತ್ತಿಗೆ ಏರಿಸಿಕೊಳ್ಳದೆ ತಾವೊಬ್ಬ ಮಾನವ ಎನ್ನುವುದನ್ನು ಅರಿತು ಮಾನವ ಸಹಜ ಪ್ರೀತಿಯಿಂದ ಎಲ್ಲರನ್ನೂ ಕಾಣುತ್ತಾ, ಯಾವುದೇ ರೀತಿಯ ಅಹಂಕಾರ, ಯಾವುದೇ ರೀತಿಯ ಆಡಂಬರವಿಲ್ಲದೆ, ಬದುಕು ಸಾಗಿಸುತ್ತಿರುವುದು ಇವರ ಸಾಧನೆಗಳಿಗೆ ಪೂರಕವಾಗಿದೆ.
ರಾಜಕಾರಣದಲ್ಲಿ ಸಾಧನೆ ಮಾಡಬೇಕೆಂದು ಅಥವಾ ಸುದೀರ್ಘವಾದ ಕಾಲ ಉಳಿಯಬೇಕೆಂದು ಬಯಸುವವರು ಇವರನ್ನ ನೋಡಿ ಕಲಿಯಬೇಕು. ಜನರ ಪ್ರೀತಿ ಮತ್ತು ವಿಶ್ವಾಸ ಎಲ್ಲಿಯ ತನಕ ಗಟ್ಟಿಯಾಗಿರುತ್ತದೆ ಅಲ್ಲಿಯ ತನಕ ಸಾರ್ವಜನಿಕ ಬದುಕಿನಲ್ಲಿರುವ ರಾಜಕಾರಣಿಗಳ ಸ್ಥಾನವು ಭದ್ರ. ಅವರ ಸ್ಥಾನಗಳು ಭದ್ರವಾಗುವುದು ಅವರ ಹಣದಿಂದಲ್ಲ, ಅವರ ಅಧಿಕಾರದಿಂದಲ್ಲ, ಅವರ ಅಹಂಕಾರಗಳಿಂದಲ್ಲ, ಅವರ ಜಾತಿಗಳಿಂದಲೂ ಅಲ್ಲ, ಎನ್ನುವುದನ್ನು ಹೊರಟ್ಟಿರವರು ತೋರಿಸಿಕೊಟ್ಟಿದ್ದಾರೆ.
ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ಸಣ್ಣ ವಯಸ್ಸಿನಲ್ಲಿ ತಂದೆಯ ಪ್ರೀತಿಯನ್ನು ಕಳೆದುಕೊಂಡು ತಾಯಿಯ ಕಣ್ಗಾವಲಿನಲ್ಲಿ ಸಾರ್ಥಕತೆಯ ಸಾಧನೆಯ ಬದುಕಿನಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ತಾಯಿಯ ಬಗ್ಗೆ ತಮಗಿರುವ ಪ್ರೀತಿಯ ಸಂಕೇತವೇ ಅವ್ವ ಸೇವಾ ಟ್ರಸ್ಟ್.
ಯಾವುದೇ ಕಾರ್ಯಕ್ರಮ ತಪ್ಪಿಸಿದರು ಅವ್ವ ಸೇವಾ ಟ್ರಸ್ಟಿನ ರಚನಾತ್ಮಕ ಕಾರ್ಯಕ್ರಮಗಳು, ಸೇವಾ ಕಾರ್ಯಗಳು ಯಾವ ವರ್ಷವೂ ತಪ್ಪುವುದಿಲ್ಲ, ಅಷ್ಟೊಂದು ಶ್ರದ್ದೆಯಿಂದ ತಮ್ಮ ತಾಯಿಯ ನೆನಪಿನ ಟ್ರಸ್ಟಿನ ಕಾರ್ಯಕ್ರಮವನ್ನು ನಿರ್ವಹಿಸಿಕೊಂಡು ಬಂದು ತಾಯಿ ಪ್ರೀತಿಗೆ ಮತ್ತೊಂದು ಮಾದರಿಯಾಗಿದ್ದಾರೆ.
ವಿಧಾನ ಪರಿಷತ್ತು ಹೊರಟ್ಟಿರವರು ಸಾಕು ಎನಿಸುವ ತನಕ ಬಾಗಿಲು ಮುಚ್ಚುವುದಿಲ್ಲ. ಏಕೆಂದರೆ ಇವರ ಕ್ಷೇತ್ರದ ಮತದಾರರು ಇವರು ಚುನಾವಣೆಗೆ ನಿಲ್ಲುವ ತನಕ ಇವರನ್ನು ಬಿಟ್ಟು ಮತ್ತೊಬ್ಬರ ಕಡೆಗೆ ತಿರುಗಿ ನೋಡುವ ಮಾತೇ ಇರುವುದಿಲ್ಲ.
ಹೊರಟ್ಟಿಯವರು ತಾವು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಸಹಾಯ ಮಾಡಿದ ಮತ್ತು ಪ್ರೋತ್ಸಾಹಿಸಿದ ನಾಯಕರುಗಳನ್ನು ಎಲ್ಲ ಸಂದರ್ಭಗಳಲ್ಲೂ ನೆನಪು ಮಾಡಿಕೊಂಡು, ತಮ್ಮ ಕೃತಜ್ಞತಾ ಸಂಸ್ಕಾರವಂತಿಕೆಯನ್ನು ಮೆರೆಯುತ್ತಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




