ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಪೊಲೀಸ್ ಠಾಣೆ ಲೋಕಾರ್ಪಣೆ

4 years ago

ಬೆಂಗಳೂರು: ಸರಸ್ವತಿನಗರ ಪೋಲಿಸ್ ಠಾಣೆ ನಿರ್ಮಾಣಕ್ಕೆ ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಅನುಮತಿ ನೀಡಿದ್ದೆ. ಇಂದು ಮುಖ್ಯಮಂತ್ರಿಯಾಗಿ ಉದ್ಘಾಟನೆ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಪೊಲೀಸ್ ದಿನದ ಪ್ರತಿ ದಿನ 24 ಘಂಟೆ ಕಾರ್ಯನಿರ್ವಹಿಸುತ್ತಾರೆ. ಸಂಕಷ್ಟದಲ್ಲಿ ಇರುವವರು ಮೊದಲು ಪೊಲೀಸರನ್ನು ನೆನಪಿಸಿಕೊಳ್ಳುತ್ತಾರೆ. ಮಗು ತಾಯಿಯನ್ನ ನೆನಪಿಸಿಕೊಳ್ಳುವಂತೆ ಜನ ಪೋಲಿಸರ ಒಡಿನಾಡಿಯಾಗಿದ್ದಾರೆ. ದೇಶದಲ್ಲಿ ಕರ್ನಾಟಕ ಪೊಲೀಸರಿಗೆ ವಿಶೇಷ ಸ್ಥಾನಮಾನವಿದೆ ಎಂದರು.

ರಾಜಕೀಯ ಇಚ್ಛಾಶಕ್ತಿ ಇದ್ದರೆ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುತ್ತದೆ. ಮಾದಕ ವಸ್ತುಗಳ ವಿರುದ್ದ ಸಮರ ಸಾರಲಾಗಿದೆ. ಮಾದಕ ದಂಧೆಯಲ್ಲಿ ಇದ್ದವರನ್ನು ಜೈಲಿಗೆ ಕಳುಹಿಸಲಾಗಿದೆ. 50 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ನಾಶಮಾಡಲಾಗಿದೆ. ಜೂಜಾಟ, ಆನ್ ಲೈನ್ ಜೂಜಾಟಕ್ಕೆ ಕಡಿವಾಣ ಹಾಕಲಾಗಿದೆ. ಮಕ್ಕಳು ಜೂಜಾಟಕ್ಕೆ ಬಲಿಯಾಗಬಾರದೆಂದು ಆನ್ ಲೈನ್ ವಿರುದ್ದ ಕಾನೂನು ರೂಪಿಸಲಾಗಿದೆ ಎಂದರು.

ದುಷ್ಟಶಕ್ತಿಗಳ ವಿರುದ್ದ ಸೆಣಸಲು ಸರ್ಕಾರ ಸಜ್ಜಾಗಿದೆ. ಬೆಂಗಳೂರು ನಗರಕ್ಕೆ 195 ಕಿಲೋ ಮೀಟರ್ ಸಿಗ್ನಲ್ ಮುಕ್ತ ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ. ಬೆಂಗಳೂರು ನಗರದ ಸರ್ವಾಂರ್ಗಿಣ  ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸರಸ್ವತಿನಗರ ಪೊಲೀಸ್ ಠಾಣೆ ಅತ್ಯಾಧುನಿಕ ಸೌಲಭ್ಯ ಹೊಂದಿದ ಬೆಂಗಳೂರಿನ ಹೈಟೆಕ್ ಪೊಲೀಸ್ ಠಾಣೆಯಾಗಿದೆ. 200 ಕೋಟಿ ರೂಪಾಯಿ ವೆಚ್ಚದಲ್ಲಿ 100 ಪೋಲಿಸ್ ಠಾಣೆ ನಿರ್ಮಿಸಲಾಗುವುದು. ಪೊಲೀಸ್ ಕುಟುಂಬಗಳಿಗೆ ಸುಸ್ಜಜಿತ ಮನೆಯನ್ನು ನಿರ್ಮಿಸಲಾಗುವುದು. ರಾಜ್ಯದಲ್ಲಿ 5 ಎಫ್.ಎಸ್.ಎಲ್. ಲ್ಯಾಬ್ ಇವೆ. ಫಿನ್ ಲ್ಯಾಂಡ್ ದೇಶದಿಂದ ನೂರಾರು ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ವಾಹನ ತರಿಸಲಾಗುತ್ತಿದೆ. ಮಾದಕ ಪದಾರ್ಥಗಳಿಗೆ ಕಡಿವಾಣ ಹಾಕಲಾಗುವುದು ಎಂದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಗೋವಿಂದರಾಜನಗರ ಜನರ ಸುರಕ್ಷತೆ, ರಕ್ಷಣೆಗಾಗಿ ಪೊಲೀಸ್ ಠಾಣೆ ಲೋಕರ್ಪಣೆ ಮಾಡಲಾಗಿದೆ. ಸುತ್ತಮುತ್ತಲ ಪ್ರದೇಶದವರು ದೂರದ ವಿಜಯನಗರ ಪೊಲೀಸ್ ಠಾಣೆಗೆ ಹೋಗಬೇಕಿತ್ತು. ಆದ್ದರಿಂದ ಸಮಸ್ಯೆ ನಿವಾರಿಸಲು ಇಲ್ಲಿ ಪೊಲೀಸ್ ಠಾಣೆ ಆರಂಭಿಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ದಾಸರಹಳ್ಳಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಒಂದೇ ಸೂರಿನಡಿ 3500 ವಿದ್ಯಾಭ್ಯಾಸ ಅನುಕೂಲಕ್ಕೆ ಹೈಟೆಕ್ ಶಾಲೆ ಲೋಕರ್ಪಣೆಗೆ ಸಿದ್ದವಾಗಿದೆ ಎಂದರು.

8 ಕಿಲೋ ಮೀಟರ್ ಭೂಗತ ಕೇಬಲ್ ಆಳವಡಿಸಲಾಗಿದೆ. ವಸತಿ ಇಲಾಖೆ ವತಿಯಿಂದ 5 ಲಕ್ಷ ಮನೆಗಳನ್ನು ವಿತರಿಸಲಾಗುವುದು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪೊಲೀಸ್ ಠಾಣೆಯಿಂದ ನೊಂದವರಿಗೆ ನ್ಯಾಯ ಸಿಗಲಿದೆ ಮತ್ತು ಅಪರಾಧ ಚಟುವಟಿಕೆ, ರೌಡಿಗಳ ಉಪಟಳಕ್ಕೆ ಕಡಿವಾಣ ಬೀಳಲಿದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಸ್ವತಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಪೊಲೀಸ್ ಠಾಣೆ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ವಸತಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್, ಲೋಕಸಭೆ ಸದಸ್ಯ ತೇಜಸ್ವಿ ಸೂರ್ಯ, ಪೋಲಿಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಜರಿದ್ದರು.

ರಾಜ್ಯ ಬಿ.ಜೆ.ಪಿ. ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ಡಾ.ಎಸ್.ರಾಜು, ಮೋಹನ್ ಕುಮಾರ್, ದಾಸೇಗೌಡ, ಮಧುಕುಮಾರಿ ವಾಗೇಶ್, ರೂಪ ಲಿಂಗೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply