ಪಠ್ಯ ಪುಸ್ತಕಗಳ ಮರು ಪರಿಷ್ಕರಣೆಯ ವಾಸ್ತವಿಕತೆ ವಿಷಯದ ಕುರಿತು ದುಂಡು ಮೇಜಿನ ಸಭೆ

4 years ago

ಬೆಂಗಳೂರು: ರಾಜ್ಯದ ಶಾಲಾ ಪಠ್ಯ ಪುಸ್ತಕಗಳ ಮರು ಪರಿಷ್ಕರಣೆಯ ವಿಷಯವಾಗಿ ಪ್ರಸ್ತುತ ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿವಾದದ ಸತ್ಯಾಸತ್ಯತೆ ಕುರಿತು “ಪಠ್ಯ ಪುಸ್ತಕಗಳ ಮರು ಪರಿಷ್ಕರಣೆಯ ವಾಸ್ತವಿಕತೆ” ಎಂಬ ಶೀರ್ಷಿಕೆಯಡಿ ಎಸ್.ಐ.ಓ (SIO) ಬೆಂಗಳೂರು ಮತ್ತು ಇತರ ವಿದ್ಯಾರ್ಥಿ ಸಂಘಟನೆಗಳು ಜೊತೆಗೂಡಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ನಾಳೆ ಸೋಮವಾರ 27/06/2022ರಂದು ಬೆಂಗಳೂರಿನ ಶಾಸಕರ ಭವನ 1 ರ ಸಭಾಂಗಣದಲ್ಲಿ ಒಂದು “ದುಂಡು ಮೇಜಿನ ಸಭೆ” ಅನ್ನು ಆಯೋಜಿಸಿವೆ.

ಈ ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಶಿಕ್ಷಣ ತಜ್ಞರು, ವಿಷಯ ತಜ್ಞರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿ ಸಂಘಟನೆಗಳ ನಾಯಕರು, ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಸ್ಥಳ: ಶಾಸಕರ ಭವನ 1, ಮೂರನೇ ಮಹಡಿಯ ಸಭಾಂಗಣ, ಬೆಂಗಳೂರು

ಸಮಯ:- ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ

Leave a Reply