ಬೆಂಗಳೂರು:ಪ್ರೇಮಿಗಳ ದಿನದಂದು ಮಹಾನಗರ ಬೆಂಗಳೂರಿನಲ್ಲಿ ಒಂದೇ ಸುದ್ದಿ. ಅದೇನೆಂದರೆ 399 ರೂಪಾಯಿ ಪಾವತಿಸಿದರೆ ಬಾಯ್ ಫ್ರೆಂಡ್ ಸಿಗುತ್ತಾರೆ ಎಂಬುದು. ಜಯನಗರ, ಬನಶಂಕರಿ ಭಾಗದಲ್ಲಿ ಪೋಸ್ಟರ್ ಭಾರೀ ಸದ್ದು ಮಾಡುತ್ತಿದ್ದು, ಜಯನಗರ 8ನೇ ಬ್ಲಾಕ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಅಂಟಿಸಲಾಗಿರುವ ಪೋಸ್ಟರ್ ಜನರ ಗಮನ ಸೆಳೆಯುತ್ತಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
Rent A Boyfriend For 389, Scan Me ಎಂದು ಮುದ್ರಿಸಲ್ಪಟ್ಟಿರುವ ಈ ಪೋಸ್ಟರ್ ಹಲವರ ಗಮನ ಸೆಳೆಯುತ್ತಿದೆ. ಪ್ರೇಮಿಗಳ ದಿನದಂದು ನೀಡಲಾಗುತ್ತಿರುವ ವಿಶೇಷ ಕೊಡುಗೆ ಇದಾಗಿದೆ ಎಂದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ.
ಈ ಪೋಸ್ಟರ್ ನೋಡಿದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ರಾತ್ರೋರಾತ್ರಿ ಕಾಣಿಸಿಕೊಂಡಿರುವ ಈ ಪೋಸ್ಟರ್ ಗಳನ್ನು ನೋಡಿ ಕೆಲವರು ಅದರಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಕೆಲವರು ಸ್ಕ್ಯಾನ್ ಮಾಡಿ ಹಣ ಕೂಡ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದು ಇದೊಂದು ವಂಚಕರ ಜಾಲವಾಗಿರಬಹುದು ಎಂದು ಹೇಳಿದ್ದು ತನಿಖೆ ಆರಂಭಿಸಿದ್ದಾರೆ.




