ಧಾರವಾಡ: ರಂಗಾಯಣದಿಂದ ಚಿಣ್ಣರಮೇಳ-2024 ರ ಅಂಗವಾಗಿ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಏಪ್ರಿಲ್ 14, 2024 ರಿಂದ ಮೇ 12, 2024 ರವರೆಗೆ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಸಾಂಸ್ಕತಿಕ ಸಂವೇದನೆಯನ್ನು ಬೆಳೆಸುವುದು, ಮಕ್ಕಳಿಗೆ ಕನ್ನಡ ಜನಪದ ರಂಗಭೂಮಿಯ ಪರಿಚಯ ಮಾಡಿಕೊಟ್ಟು ಅಭಿರುಚಿ ಮೂಡಿಸುವುದು, ಭೂಮಿ, ಪರಿಸರದೊಂದಿಗೆ ಸೌಹಾರ್ದತೆಯ ಬದುಕು ಕಲ್ಪಿಸುವುದು ಮುಂತಾದ ವಿಷಯಗಳನ್ನು ಇಟ್ಟುಕೊಂಡು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ಚಿಣ್ಣರ ಮೇಳ-2024ರ ಮುಖ್ಯ ಉದ್ದೇಶವಾಗಿದೆ.
ಕೇವಲ 150 ಮಕ್ಕಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ನಿಡಲಾಗುವುದು. ಏಪ್ರಿಲ್ 1, 2024ಕ್ಕೆ 7 ವರ್ಷ ಪೂರ್ಣ ತುಂಬಿರುವ 14 ವರ್ಷದ ಒಳಗಿರುವ ಮಕ್ಕಳು ಭಾಗವಹಿಸಬಹುದು. ಶಿಬಿರದಲ್ಲಿ ಪ್ರವೇಶ ಪಡೆಯಲು ಆಸಕ್ತಿ ಇರುವ ಮಕ್ಕಳು ದಾಖಲಾತಿ ಪ್ರಮಾಣ ಪತ್ರ, 2 ಭಾವಚಿತ್ರ ಹಾಗೂ ಜನ್ಮ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 20 ರೂ ಹಾಗೂ ಪ್ರವೇಶ ಶುಲ್ಕ 2,000 ನಿಗದಿಪಡಿಸಲಾಗಿದೆ.
ಏಪ್ರಿಲ್ 1 ರಿಂದ 12, 2024 ರಂದು ಸಂಜೆ 4.30 ಗಂಟೆಯ ಒಳಗಡೆ ತಮ್ಮ ಮಗುವಿನೊಂದಿಗೆ ಬಂದು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ರಂಗಾಯಣ, ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನ ಕಾರ್ಯಾಲಯ ಕಚೇರಿಯ ದೂರವಾಣಿ ಸಂಖ್ಯೆ-0836-2441706 ಕ್ಕೆ ಸಂಪರ್ಕಿಸಬಹುದೆಂದು ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



