ಕನ್ನಡ ವೃತ್ತಿ ರಂಗಭೂಮಿಗೆ ಹೊಸ ಆಯಾಮ ನೀಡಿದ ಹುಲಿಮನೆ ಸೀತಾರಾಮ ಶಾಸ್ತ್ರಿ ಗಳು (1906 -1985) ಬ್ರಿಟಿಷರ ಅಧಿಕಾರಕ್ಕೆ ಬೆದರದ, ಸಮಾಜದ ಕಟ್ಟುಪಾಡುಗಳಿಗೆ ಹೆದರದ ಧೀಮಂತ ಕಲಾವಿದ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
‘ಟಿಪ್ಪು ಸುಲ್ತಾನ್’, ‘ವರದಕ್ಷಿಣೆ’ ಮುಂತಾದ ಅನೇಕ ರಾಜಕೀಯ, ಸಾಮಾಜಿಕ ನಾಟಕಗಳ ಬರಹ ಮತ್ತು ರಂಗ ಪ್ರಯೋಗಗಳ ಮೂಲಕ ಅವರು ಧೈರ್ಯವಾಗಿ ಅಧಿಕಾರವನ್ನು ಪ್ರಶ್ನಿಸಿದ ರೀತಿ ಯಾವ ಕಾಲಕ್ಕೂ ಅದ್ಭುತ.
1975 ರಲ್ಲಿ ‘ಸುಧಾ’ ವಾರಪತ್ರಿಕೆಯ ‘ಬಣ್ಣದ ಬದುಕು’ ಮಾಲಿಕೆಯಲ್ಲಿ ಹುಲಿಮನೆ ಅವರ ರಂಗಪಯಣದ ಈ ಆತ್ಮಕಥನವು 18 ವಾರಗಳ ಕಾಲ ಪ್ರಕಟವಾಗಿತ್ತು (ನಿರೂಪಣೆ : ಜಿ.ಹೆಚ್. ಭಟ್).
‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿ ಸುದೀರ್ಘ 49 ವರ್ಷಗಳ ನಂತರ, ಹುಲಿಮನೆ ಅವರ ಈ ಆತ್ಮಕಥನವನ್ನು ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಇದೀಗ ಪುಸ್ತಕರೂಪದಲ್ಲಿ ಪ್ರಕಟಿಸಿದೆ.
“ಹುಲಿಮನೆ ಸೀತಾರಾಮ ಶಾಸ್ತ್ರಿ ರಂಗಕಥನ” – ಪುಸ್ತಕ ಮಾರ್ಚ್ 10 ರಂದು ಸಿದ್ಧಾಪುರ ತಾಲ್ಲೂಕಿನಲ್ಲಿ ಬಿಡುಗಡೆ ಆಯಿತು.
ಈ ಪುಸ್ತಕದಲ್ಲಿ ಆತ್ಮಕಥನದ 18 ಅಧ್ಯಾಯಗಳ ಜೊತೆಗೆ, 1965ರಲ್ಲಿ ಅನಕೃ ಅವರು ಆಕಾಶವಾಣಿಗೆ ಮಾಡಿದ್ದ ಹುಲಿಮನೆ ಸಂದರ್ಶನ, ಏಣಗಿ ಬಾಳಪ್ಪ ಅವರ ಲೇಖನ, ಗಿರೀಶ ಕಾರ್ನಾಡರ ನೆನಪಿನ ಚಿತ್ರಣ, ಶ್ರೀಪಾದ ಭಟ್ ಅವರ ಮುನ್ನುಡಿ ಮತ್ತು ಇತರ ಲೇಖನಗಳು ಸೇರಿವೆ.
“ನಂಬಲಾರದಂಥ ಸತ್ಯಕಥೆ, ವಿನೋದ- ವಿಷಾದಗಳ ರಸಬುಗ್ಗೆ, ನಿರ್ಭಿಡೆಯ ಆತ್ಮ ವಿಶ್ಲೇಷಣೆ” ಎಂದು ‘ಸುಧಾ’ ವಾರಪತ್ರಿಕೆಯ ಅಂದಿನ ಸಂಪಾದಕರು ಈ ನಿರ್ಭೀತ ಹುಲಿಯ ಆತ್ಮಕಥೆಯನ್ನು ಬಣ್ಣಿಸಿದ್ದರು.
“ಹುಲಿಮನೆ ಸೀತಾರಾಮ ಶಾಸ್ತ್ರಿ ರಂಗ ಕಥನ”
ಬೆಲೆ: ರೂ. 200
ಆಸಕ್ತರು ದಯವಿಟ್ಟು ಸಂಪರ್ಕಿಸಿ :
99000 95204
– ಪೂರ್ಣಿಮಾ, ಪತ್ರಕರ್ತರು




