ಕಟ್ಟಡ ಕಾರ್ಮಿಕರಿಗೆ ಪರಿಹಾರಧನ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

11 months ago

ಅಕ್ರಮ ಮರಳುಗಾರಿಕೆ ನಿಷೇಧದಿಂದಾಗಿ ಕೆಲಸ ಕಳೆದುಕೊಂಡ ಕಾರ್ಮಿಕರು

ಮಂಗಳೂರು: ಅಕ್ರಮ ಮರಳುಗಾರಿಕೆ, ಕೆಂಪು ಕಲ್ಲು ಗಣಿಗಾರಿಕೆ ನಿಷೇಧದಿಂದಾಗಿ ಕೆಲಸ ಕಳೆದುಕೊಂಡ ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ಒದಗಿಸಬೇಕು, ಪರಿಸರಸ್ನೇಹಿ ಮರಳುಗಾರಿಕೆ ಹಾಗೂ ನಿಯಮಬದ್ದ ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು, ಕೆಂಪು ಕಲ್ಲು,ಜಲ್ಲಿ ಸಿಗುವಂತಾಗಲು ಆಗ್ರಹಿಸಿ ಗುರುಪುರ ಕೈಕಂಬದಲ್ಲಿ  ನೂರಾರು ಸಂಖ್ಯೆಯ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಜಿಲ್ಲೆಯ ಕೋಮು ರಾಜಕಾರಣವನ್ನು ನಿಯಂತ್ರಿಸಲು ವ್ಯಾಪಕ ಹಣದ ಹೊಳೆಯನ್ನು ಹರಿಸುವ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಅಕ್ರಮ ಮರಳುಗಾರಿಕೆಯನ್ನು ನಿಷೇಧ ಮಾಡಿರುವ ಪೋಲಿಸ್ ಇಲಾಖೆ ಜಿಲ್ಲಾಡಳಿತದ ಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.

ಆದರೆ ಅದರ ಜೊತೆಗೆ ಮರಳು ಹಾಗೂ ಕೆಂಪು ಕಲ್ಲಿನ ವಿಪರೀತ ದರದಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ವಿಪರೀತ ಹೊಡೆತ ಬಿದ್ದಿದ್ದು ಕಾರ್ಮಿಕರು ಕೆಲಸ ಕಳೆದುಕೊಂಡು ಬದುಕು ದುಸ್ತರಗೊಂಡಿದೆ ಎಂದರು.

ಕರಾವಳಿ ಪ್ರದೇಶದಲ್ಲಿ ಉಧ್ಭವಗೊಂಡ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ರಾಜ್ಯ ಸರಕಾರ ಕೂಡಲೇ ಗಮನ ಹರಿಸಬೇಕೆಂದು ಆಗ್ರಹಿಸಿದರು.

ಕೈಗೆಟಕುವ ದರದಲ್ಲಿ ಮರಳು ಕೆಂಪು ಕಲ್ಲು ಹಾಗೂ ಜೆಲ್ಲಿ ಸಿಗುವಂತಾಗಲು ಜಿಲ್ಲಾಡಳಿತ ಮಧ್ಯೆಪ್ರವೇಶಿಸಬೇಕು ಆ ಮೂಲಕ ಸಂಕಷ್ಟಕ್ಕೊಳಗಾದ ಜಿಲ್ಲೆಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕು ಎಂದರು.

CITU ಜಿಲ್ಲಾ ಮುಖಂಡ ಸದಾಶಿವ ದಾಸ್ ಮಾತನಾಡಿ, ಜಿಲ್ಲೆಯ ಅಕ್ರಮ ಮರಳುಗಾರಿಕೆ ಸೇರಿದಂತೆ ಅಕ್ರಮ ದಂಧೆಗಳಿಗೆ ಅಡಿಪಾಯ ಹಾಕಿರುವ ಬಿಜೆಪಿ ಕಾಂಗ್ರೆಸ್,ಆ ಮೂಲಕ ಎಲ್ಲಾ ಅಕ್ರಮಗಳಲ್ಲಿ ಒಂದಾಗಿ ನಿಂತು ಜಿಲ್ಲೆಯ ಸೌಹಾರ್ದತೆಯನ್ನೇ ಬಲಿಕೊಟ್ಟಿದ್ದಾರೆ ಎಂದರು. 

ಕೈಗೆಟಕುವ ದರದಲ್ಲಿ ಮರಳು ಕೆಂಪು ಕಲ್ಲು ಹಾಗೂ ಜೆಲ್ಲಿ ಸಿಗುವಂತಾಗಲು ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕು ಆ ಮೂಲಕ ಸಂಕಷ್ಟಕ್ಕೊಳಗಾದ ಜಿಲ್ಲೆಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಉಪಾದ್ಯಕ್ಷರಾದ ವಸಂತಿ ಕುಪ್ಪೆಪದವು, ಮುಖಂಡರಾದ ನೋಣಯ್ಯ ಗೌಡ, , ಅಶೋಕ್  ಬಂಗೇರಾ, ಯಶೋದಾ ಮಳಲಿ,  ಜನಾರ್ಧನ ಗೌಡ ಎಡಪದವು, ರೋಹಿತಾಶ್ವ , ವೆಂಕಪ್ಪ ಸಾಲಿಯಾನ್ ಮಳಲಿ, ಪ್ರವೀಣ್ ವಾಮಂಜೂರು ಮುಂತಾದವರು ಉಪಸ್ಥಿತರಿದ್ದರು.

Leave a Reply